Thursday, January 23, 2025
ಸುದ್ದಿ

ಪೊಲೀಸರ ನಿದ್ದೆಗೆಡಿಸಿದ್ದ ರೌಡಿ ಶೀಟರ್ ಅಂದರ್ : ಖತರ್ನಾಕ್ ಗೂಂಡಾನನ್ನು ಸಿನಿಮೀಯ ಸ್ಟೈಲ್‍ನಲ್ಲಿ ಅರೆಸ್ಟ್ ಮಾಡಿದ ಪೊಲೀಸರು –ಕಹಳೆ ನ್ಯೂಸ್

ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ ತೋರಿದ್ದ ರೌಡಿ ಶೀಟರ್ ಕೊನೆಗೂ ಅರೆಸ್ಟ್ ಆಗಿದ್ದಾನೆ. ಈತನಿಗಾಗಿ ಮಹಾರಾಷ್ಟ್ರದ ಮುಂಬೈ, ಪುಣೆಯಲ್ಲಿ ಶೋಧ ನಡೆಸಲಾಗಿದ್ದು, ಖತರ್ನಾಕ್ ಆಸಾಮಿಯ ಪ್ರತಿಯೊಂದು ಹೆಜ್ಜೆಯನ್ನು ಪೋಲೀಸರು ಗಮನಿಸುತ್ತಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆತ ಆ ಪಟ್ಟಣದ ಖತರ್ನಾಕ್ ಗೂಂಡಾ, ರೌಡಿ ಶೀಟರ್ ಎಲ್ಲರೂ ಆತನಿಂದಾಗುವ ಉಪಟಳಕ್ಕೆ ಬೆಸೆತ್ತು ಹೋಗಿದ್ರು. ಪೊಲೀಸ್ ಅಧಿಕಾರಿಗಳಿಗೂ ಕ್ಯಾರೇ ಅನ್ನದ ಈ ಭೂಪ ಅವರನ್ನು ಕಂಡರೆ ಗುರ್.. ಗುರ್.. ಅಂತಿದ್ದ. ಈತನನ್ನು ಬಂಧಿಸಲು ಪೊಲೀಸರು ಹೋದ್ರೆ, ಅವರನ್ನೇ ಕೊಚ್ಚಿ ಹಾಕ್ತೇನೆ ಅಂತಾ ಅವಾಜ್ ಹಾಕ್ತಿದ್ದ.

ಈತ ಹಾಗೂ ಈತನ ಸಹೋದರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಪಿಎಸ್‌ಐ ಕಾಲಿಗೆ ಗಾಯಗೊಳಿಸಿ ನಾಪತ್ತೆಯಾಗಿದ್ದನು. ಆದ್ರೆ ಪೊಲೀಸರು ಬಿಡ್ತಾರಾ ಸಿನಿಮೀಯ ರೀತಿಯಲ್ಲಿ ನಟೋರಿಯಸ್ ರೌಡಿಯನ್ನು ಅಟ್ಯಾಕ್ ಮಾಡಿ ಬಳ್ಳಾರಿ ಜೈಲಿಗೆ ಕಳುಹಿಸಿ ಕೊಟ್ಟಿದ್ದಾರೆ.

ಅಷ್ಟಕ್ಕೂ ಈ ಅಸಾಮಿ ಗೂಂಡಾ ಯಾರು ಅಂತೀರಾ..? ಹೇಳ್ತಿವಿ ನೋಡಿ ಈತನ ಹೆಸರು ಅಬ್ದುಲ್ ರಜಾಕ್ ಆಡೂರು, ಈ ರೌಡಿ ಶೀಟರ್‌ನನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.

ಪೊಲೀಸರ ನಿದ್ದೆ ಗೆಡಿಸಿದ್ದ ಈ ಭಂಡ ಕೊನೆಗೂ ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದಾನೆ.

ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾದ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಈ ರೌಡಿಯ ಅಟ್ಟಹಾಸ ಹೆಚ್ಚಾಗಿದ್ದು, ಕಂಡ ಕಂಡವರಿಗೆ ಧಮ್ಮಿ ಹಾಕಿ ದಬ್ಬಾಳಿಕೆ ಮಾಡ್ತಾ, ರೌಡಿಸಂನಲ್ಲಿ ಹೆಸರು ಮಾಡ್ತಾಯಿದ್ದ. ಈತನ ಮೇಲೆ ಪೊಲೀಸರು ಕಣ್ಣು ಇಟ್ಟಿದ್ರು. ಇತ್ತೀಚೆಗೆ ಆತನ ಉಪಟಳ ಹೆಚ್ಚಾದಾಗ, ಜಿಲ್ಲಾಧಿಕಾರಿ ವೈಶಾಲಿ ಎಂ ಎನ್ ಅವರು, ಗೂಂಡಾ ಕಾಯ್ದೆಯಡಿ ಬಂಧಿಸುವAತೆ ಆದೇಶ ಮಾಡಿದ್ರು. ಇದೀಗ ಪೊಲೀಸರು ರೌಡಿ ಶಿಟರ್‌ಅಬ್ದುಲ್ ಆಡೂರ ಸೇರಿದಂತೆ ಈತನ ಐದು ಜನ ಸಹೋದರರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.