ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 18ರಂದು ಮಹಾಶಿವರಾತ್ರಿ ಉತ್ಸವವು ಆದ್ದೂರಿಯಾಗಿ ನಡೆಯಲಿದೆ. ಆ ಪ್ರಯಕ್ತ ಶಿವನಿಗೆ ಮಹಾರುದ್ರಯಾಗ, ಏಕ ಬಿಲ್ವಂ ಶಿವಾರ್ಪಣಂ ಸೇವೆ, ಶಿವಾರ್ಪಣಂ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ದೇವರ ಬಲಿ ಉತ್ಸವದ ಬಳಿಕ ಅಷ್ಟಾವಧಾನ ಸೇವೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾಹಿತಿ ನೀಡಿದ್ದಾರೆ.
ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾಶಿವರಾತ್ರಿ ಉತ್ಸವಕ್ಕೆ ವಿಶೇಷವಾಗಿ ಬೆಳಿಗ್ಗೆ ವೇದ ಸಂವರ್ಧನಾ ಪ್ರತಿಷ್ಠಾನದಿಂದ ಮಹಾರುದ್ರಯಾಗ ನಡೆಯಲಿದ್ದು, ಸುಮಾರು 121 ಮಂದಿ ರುದ್ರ ಪಠಣ ಮಾಡಲಿದ್ದಾರೆ. ಇನ್ನೂ ಇದೇ ಸಂದರ್ಭದಲ್ಲಿ ಭಕ್ತರಿಗೆ ಶತರುದ್ರಾಭಿಷೇಕ ಮತ್ತು ಏಕ ಬಿಲ್ವಂ ಶಿವಾರ್ಪಣಂ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಮಹಾಲಿAಗೇಶ್ವರನ ಮಂಭಾಗದಲ್ಲಿ ಮುಂಜಾನೆ ಗಂಟೆ 6.45ರಿಂದ ಮರುದಿನ ಸೂರ್ಯೋದಯದವರೆಗೆ ಭಜನೆ, ಕುಣಿತ ಭಜನೆ ನಡೆಯಲಿದ್ದು, ಪೂರ್ವಾಹ್ನ ಗಂಟೆ 9 ರಿಂದ ದೇವಾಲಯದ ಪಂಚಾಕ್ಷರಿ ಮಂಟಪದಲ್ಲಿ ಶಿವನ ಛದ್ಮವೇಷ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 2 ರಿಂದ ಪಂಚಾಕ್ಷರಿ ಮಂಟಪದಲ್ಲಿ ಪುತ್ತೂರಿನ ವಿವಿಧ ಸಂಗೀತ ಕಲಾ ಶಾಲೆಗಳ ಗುರುಗಳ ನೇತೃತ್ವದಲ್ಲಿ ಸಂಗೀತೋತ್ಸವ ನಡೆದು, ಸಂಜೆ 5 ರಿಂದ ವಿವಿಧ ನೃತ್ಯ ಕಲಾಶಾಲೆಗಳ ಗುರುಗಳ ನೇತೃತ್ವದಲ್ಲಿ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಲಿದ್ದು, ಕಂಡನಾಯಕ ಕಟ್ಟೆಯಲ್ಲಿ ಪೂಜೆ ನಡೆದು ಬಳಿಕ ಪಲ್ಲಕಿ ಉತ್ಸವ, ಅಷ್ಟಾವಧನ ಸೇವೆ ನಡೆಯಲಿದೆ. ಉತ್ಸವದಲ್ಲಿ ಸದಾಶಿವನ ಬಂಡಿ ಉತ್ಸವ, ತೆಪ್ಪೋತ್ಸವ ನಡೆಯಲಿದೆ ಎಂದು ತಿಳಿಸಿದ್ರು. ಇನ್ನೂ ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ ಬಿ ಐತ್ತಪ್ಪ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.