Wednesday, November 27, 2024
ಸುದ್ದಿ

ಇಸ್ರೋದಿಂದ ಯಶಸ್ವಿ ಉಡಾವಣೆಗೊಂಡ SSLV-D2 ರಾಕೆಟ್ – ಕಹಳೆ ನ್ಯೂಸ್

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್‌ಎಸ್‌ಎಲ್ವಿ-ಡಿ 2) ಎರಡನೇ ಆವೃತ್ತಿಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ನಿಂದ ಶುಕ್ರವಾರ ಬೆಳಿಗ್ಗೆ 9.18 ಕ್ಕೆ ಉಡಾವಣೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಸ್ರೋದ ಇಒಎಸ್ -07, ಯುಎಸ್ ಮೂಲದ ಸಂಸ್ಥೆ ಅಂಟಾರಿಸ್ನ ಜಾನಸ್ -1 ಮತ್ತು ಚೆನ್ನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್‌ಅಪ್ ಸ್ಪೇಸ್ ಕಿಡ್ಜ್ನ ಆಜಾದಿಸ್ಯಾಟ್ -2 ಎಂಬ ಮೂರು ಉಪಗ್ರಹಗಳನ್ನು 15 ನಿಮಿಷಗಳ ಹಾರಾಟದಲ್ಲಿ 450 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಲಾಗುವುದು ಅಂತ ತಿಳಿಸಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಸಣ್ಣ ಉಪಗ್ರಹ ಉಡಾವಣಾ ವಾಹನ-ಎಸ್‌ಎಸ್‌ಎಲ್ವಿ-ಡಿ 2 ಅನ್ನು ಉಡಾವಣೆ ಮಾಡಿದ್ದು, ಮೂರು ಉಪಗ್ರಹಗಳಾದ ಇಒಎಸ್ -07, ಜಾನಸ್ -1 ಮತ್ತು ಆಜಾದಿಸ್ಯಾಟ್ -2 ಉಪಗ್ರಹಗಳನ್ನು 450 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿದೆ.

https://mobile.twitter.com/ANI/status/1623892081667350528