Monday, January 20, 2025
ಸುದ್ದಿ

ಯುವಕ ಮಂಡಲ ಇಳಂತಿಲದ ಮೈದಾನದಲ್ಲಿ ಫೆ.11 ರಂದು ನಡೆಯಲಿದೆ ‘ಶಟಲ್ ಬ್ಯಾಡ್ಮಿಟನ್ ಟೂರ್ನಮೆಂಟ್ -2023’ –ಕಹಳೆ ನ್ಯೂಸ್

ವಾಣಿಶ್ರೀ ಗೆಳೆಯರ ಬಳಗ 94-95 (ರಿ) ಇಳಂತಿಲ ಪ್ರಯೋಜಕತ್ವದಲ್ಲಿ ಪುರುಷರ ‘ಶಟಲ್ ಬ್ಯಾಡ್ಮಿಟನ್ ಟೂರ್ನಿಮೆಂಟ್ -2023’ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಫೆ 11 ರಂದು ಹಿಂದೂ ಬಾಂಧವರ ಮುಕ್ತ ‘ಶಟಲ್ ಬ್ಯಾಡ್ಮಿಟನ್ ಟೂರ್ನಮೆಂಟ್ – 2023’ ಯುವಕ ಮಂಡಲ (ರಿ) ವಾಣೀನಗರದ ವಿವೇಕಾನಂದ ಮೈದಾನದಲ್ಲಿ ಸಂಜೆ 7 ರಿಂದ ಆರಂಭವಾಗಲಿದೆ.

ಇನ್ನೂ ಇದೇ ಸಂದರ್ಭ ಉದ್ಘಾಟನಾ ಸಮಾರಂಭ ಸಂಜೆ 7.00 ಗಂಟೆಗೆ ನಿಗದಿಯಾಗಿದ್ದು, ಇಂದ್ರಪ್ರಸ್ಥ ವಿದ್ಯಾವರ್ಧಕ ಸಂಘದ ಸದಸ್ಯರಾದ ಜಯಪ್ರಸಾದ್ ಕಡಮ್ಮಾಜೆ ಟೂರ್ನಮೆಂಟ್ ಉದ್ಘಾಟಿಸಲಿದ್ದಾರೆ.
ಇನ್ನೂ ಈ ಸಮಾರಂಭದಲ್ಲಿ ಮಾನ್ಯ ಶಾಸಕರಾದ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲಾ ಡಾಡ್ಜ್ ಬಾಲ್ ಆಸೋಸಿಯೇಷನ್‌ನ ಅಧ್ಯಕ್ಷರಾದ ವಿದ್ಯಾಧರ ಜೈನ್ ‘ಶ್ರೀ ಪದ್ಮವಿದ್ಯಾ ಉಪ್ಪಿನಂಗಡಿ’, ಯುವ ಉದ್ಯಮಿಗಳಾದ ಸಚಿನ್ ಎ ಎಸ್ , ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಿಕಾ ಭಟ್, ಪೋಷಕರು ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಇಳಂತಿಲದ ಬಾಲಕೃಷ್ಣ ಪೂಜಾರಿ ಪೆರುವಾಯಿ, ಜಿಲ್ಲಾ ಸಹ ಉದ್ಯೋಗಿ ಕಾರ್ಯ ಪ್ರಮುಖ್‌ರಾದ ರವಿ ಇಳಂತಿಲ, ಯುವಕ ಮಂಡಲ (ರಿ) ವಾಣೀ ನಗರದ ಗೌರವ ಅಧ್ಯಕ್ಷರಾದ ಜನಾರ್ದನ ಗೌಡ ಅಣ್ಣಾಜೆ ಪಾಲ್ಗೋಳ್ಳಲಿದ್ದಾರೆ.

ಇಳಂತಿಲ ಗ್ರಾಮ ಪಂಚಾಯಿತ್‌ನ ಅಧ್ಯಕ್ಷರಾದ ಚಂದ್ರಿಕಾ ಭಟ್ ರವರು ಟೂರ್ನಮೆಂಟ್‌ನಲ್ಲಿ ಬಳಸುವ ಶಟಲ್ ಕಾಕ್ ಹಾಗೂ ನೆಟ್ ನ ಪ್ರಯೋಜಕರಾಗಿದ್ದಾರೆ.

ಟೂರ್ನಮೆಂಟ್‌ನಲ್ಲಿ ಒಟ್ಟು 3 ತಂಡಗಳಿಗೆ ಬಹುಮಾನ ನೀಡಲಾಗುತ್ತದೆ. ಪ್ರಥಮ ಸ್ಥಾನ ಗಳಿಸಿದವರಿಗೆ ವಾಣಿಶ್ರೀ ಟ್ರೋಫಿ ಹಾಗೂ 6,023 ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದವರಿಗೆ ವಾಣಿಶ್ರೀ ಟ್ರೋಫಿ ಜೊತೆಗೆ 4,023ನಗದು ಬಹುಮಾನ, ಇನ್ನೂ ತೃತೀಯ ಸ್ಥಾನಕ್ಕೆ ವಾಣಿಶ್ರೀ ಟ್ರೋಫಿ, 2,023 ನಗದು ಬಹುಮಾನ ನೀಡಲಾಗುವುದು ಎಂದು ಆಯೋಜಕರು ಘೋಷಿಸಿದ್ದಾರೆ.

ಬಹುಮಾನ ವಿತರಣಾ ಸಮಾರಂಭ ಪೆ.12 ರಂದು ಮುಂಜಾನೆ ಅಯೋಜನೆಯಾಗಿದ್ದು. ಸಮಾರಂಭದಲ್ಲಿ ಉಪ್ಪಿನಂಗಡಿಯ ಸಿ.ಎ. ಬ್ಯಾಂಕ್ ನ ಅಧ್ಯಕ್ಷರಾದ ಕೆ.ವಿ. ಪ್ರಸಾದ್ ಭಟ್ , ಶ್ರೀ ದೇವಿ ಟ್ರಾನ್ಸ್ ಪೋರ್ಟ್ ಬರಿಯಾಲುನ ಸಂದೇಶ್ ಗೌಡ, ‘ಸ್ವದ್ ಡಿಸ್ಟಿಬ್ಯೂಟರ್’ ಆಶೀಷ್ ಉಬಾರ್, ಯುವಕ ಮಂಡಲ (ರಿ) ವಾಣೀ ನಗರದ ಅಧ್ಯಕ್ಷರಾದ ಕಾರ್ತಿಕ್ ಗೌಡ ಅಣ್ಣಾಜೆ , ಇಳಂತಿಲ ಗ್ರಾಮ ಪಂಚಾಯಿತ್‌ನ ಉಪಧ್ಯಾಕ್ಷರಾದ ಸುಪ್ರೀತ್ ಪಾಡೆಂಕಿ ಭಾಗವಹಿಸಲಿದ್ದಾರೆ.