Recent Posts

Monday, January 20, 2025
ಕ್ರೈಮ್ಸಿನಿಮಾಸುದ್ದಿ

ನನ್ನ ಗಂಡ ಆದಿಲ್ ಖಾನ್ ನನ್ನದೇ ಬೆತ್ತಲೆ ವಿಡಿಯೋ ಮಾರಾಟ ಮಾಡುತ್ತಿದ್ದ : ನಟಿ ರಾಖಿ ಆರೋಪ – ಕಹಳೆ ನ್ಯೂಸ್

ತಿ ಆದಿಲ್ ಖಾನ್ (Adil Khan) ಬಗ್ಗೆ ಮತ್ತೊಂದು ಗುರುತರ ಆರೋಪಗಳನ್ನು ಮಾಡಿದ್ದಾರೆ ನಟಿ ರಾಖಿ ಸಾವಂತ್ (Rakhi Sawant). ತನ್ನ ಬೆತ್ತಲೆ ವಿಡಿಯೋಗಳನ್ನು (Nude Video) ಗೊತ್ತಾಗದಂತೆ ಚಿತ್ರೀಕರಿಸಿ, ಹಣಕ್ಕಾಗಿ ಆದಿಲ್ ಮಾರಾಟ ಮಾಡುತ್ತಿದ್ದ ಎಂದು ಹೇಳಿದ್ದಾರೆ.  ಅಲ್ಲದೇ, ವರದಕ್ಷಿಣೆ ಕಿರುಕುಳ, ದೈಹಿಕ ಕಿರುಕುಳ ಸೇರಿದಂತೆ ಹಲವು ಆಪಾದನೆಗಳನ್ನು ಈಗಾಗಲೇ ರಾಖಿ ತಮ್ಮ ಪತಿಯ ಮೇಲೆ ಮಾಡಿದ್ದಾರೆ. ಬೆತ್ತಲೆ ವಿಡಿಯೋ ಅವರ ಹೊಸ ಆರೋಪವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಖಿ ಸಾವಂತ್ ಹಿಂದೆ ಬಿದ್ದು ಸದ್ಯ ಜೈಲು (Jail) ಪಾಲಾಗಿರುವ ಆದಿಲ್ ಖಾನ್ ಗೆ ಬಿಗ್ ಬಾಸ್ (Bigg Boss) ಮನೆ ಒಳಗೆ ಹೋಗುವ ಆಸೆ ಇತ್ತಂತೆ. ಹಾಗಾಗಿಯೇ ಅವನು ರಾಖಿ ಸಖ್ಯ ಬೆಳೆಸಿದ್ದ ಎನ್ನುವ ವಿಷಯ ಬಹಿರಂಗವಾಗಿದೆ. ಆದಿಲ್ ಆಪ್ತರು ಹೇಳುವಂತೆ ರಾಖಿ ಹಿಂದೆ ಹೋದರೆ, ಬಿಗ್ ಬಾಸ್ ಮನೆಗೆ ಹೋಗುವ ದಾರಿ ಸುಲಭವಾಗುತ್ತದೆ. ಹೀಗಾಗಿ ರಾಖಿ ಬೆನ್ನು ಬಿದ್ದಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸ್ವತಃ ರಾಖಿಯೇ ಆದಿಲ್ ಜೊತೆ ಬಿಗ್ ಬಾಸ್ ಮನೆಗೆ ಹೋಗುವುದಾಗಿಯೂ ಮಾತನಾಡಿದ್ದರು.

ಆದಿಲ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ರಾಖಿ ಸಾವಂತ್ ಬಹಿರಂಗ ಪಡಿಸಿದ ಸಂದರ್ಭದಲ್ಲೂ ಬಿಗ್ ಬಾಸ್ ಕುರಿತಾಗಿ ನಟಿ ಮಾತನಾಡಿದ್ದರು. ಬಿಗ್ ಬಾಸ್ ಮನೆಗೆ ಒಟ್ಟಿಗೆ ಹೋಗುವಂತಹ ಅವಕಾಶ ಬಂದರೆ, ಹೋಗುತ್ತೇವೆ ಎಂದಿದ್ದರು. ಅಲ್ಲದೇ, ಬಿಗ್ ಬಾಸ್ ಮನೆಯಲ್ಲೇ ಮದುವೆ ಆಗುವುದಾಗಿಯೂ ತಿಳಿಸಿದ್ದರು. ಆದರೆ, ಕೇವಲ ರಾಖಿಗೆ ಮಾತ್ರ ಮನೆಯ ಪ್ರವೇಶಕ್ಕೆ ಅವಕಾಶ ಸಿಕ್ಕಿತ್ತು. ತಾಯಿಯ ಅನಾರೋಗ್ಯದ ಕಾರಣದಿಂದಾಗಿ ಅವರು ಅರ್ಧಕ್ಕೆ ಬಿಗ್ ಬಾಸ್ ಮನೆಯಿಂದ ವಾಪಸ್ಸಾದರು.

ತನಗೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ಅವಕಾಶ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ರಾಖಿಯಿಂದ ಆದಿಲ್ ದೂರವಾದ ಎನ್ನುವ ಮಾತು ಆಪ್ತರಿಂದ ತಿಳಿದು ಬಂದಿದೆ. ಆದರೆ, ರಾಖಿ ಸಾವಂತ್ ಹೇಳುವುದೇ ಬೇರೆ. ಆದಿಲ್ ಮೇಲೆ ಹಲವು ಗುರುತರ ಆರೋಪಗಳನ್ನು ಮಾಡಿದ್ದಾರೆ. ಅಸಹಜ ಲೈಂಗಿಕ ಕ್ರಿಯೆಯಿಂದ ಹಿಡಿದು ವರದಕ್ಷಿಣೆ ಕಿರುಕುಳದ ಆರೋಪವನ್ನೂ ಪತಿ ಆದಿಲ್ ಮೇಲೆ ಹೊರಸಿದ್ದಾರೆ. ಅವೆಲ್ಲವೂ ಗುರುತರ ಆರೋಪಗಳಾದ ಕಾರಣದಿಂದಾಗಿ ಕೋರ್ಟ್ ಆದಿಲ್ ಗೆ 14 ದಿನಗಳ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದೆ.

ರಾಖಿ ಸಾವಂತ್ ಗಿಂತ ಮುಂಚೆಯೇ ಆದಿಲ್ ಕೂಡ ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನುವ ರೂಮರ್ ಕೂಡ ಹಬ್ಬಿದೆ. ರಾಖಿ ಕೂಡ ಬೇರೆ ಹುಡುಗಿಯೊಂದಿಗೆ ಆದಿಲ್ ಪ್ರೀತಿಸುತ್ತಿದ್ದಾನೆ ಎನ್ನುವ ಆರೋಪವನ್ನೂ ಮಾಡಿದ್ದಾಳೆ. ಆ ಹುಡುಗಿಯ ಜೊತೆಗಿರುವ ವಿಡಿಯೋವನ್ನು ಬಹಿರಂಗ ಪಡಿಸುವ ಮಾತುಗಳನ್ನೂ ಆಡಿದ್ದಾಳೆ. ಆದರೆ, ಇವರ ದಾಂಪತ್ಯ ಮುಂದಿನ ದಿನಗಳಲ್ಲಿ ಯಾವ ಹಾದಿಯನ್ನು ಹಿಡಿಯತ್ತೋ ಕಾದು ನೋಡಬೇಕು.