Monday, January 20, 2025
ಸುದ್ದಿ

7 ಹೆಂಡತಿಯರ ಜೊತೆ ಒಟ್ಟಿಗೆ ಬದುಕ್ತಿದ್ದಾನೆ ಈ ಭೂಪ; ಅವರು ಇಷ್ಟಪಡುವಂಥ ಗುಣ ಆತನಲ್ಲೇನಿದೆ ಗೊತ್ತಾ ? – ಕಹಳೆ ನ್ಯೂಸ್

ಥೈಲ್ಯಾಂಡ್‌ನಲ್ಲಿ ವ್ಯಕ್ತಿಯೊಬ್ಬ 7 ಯುವತಿಯರನ್ನು ಮದುವೆಯಾಗಿದ್ದಾನೆ. ಈತನಿಗೀಗ 9 ಮಕ್ಕಳೂ ಇದ್ದಾರೆ. ವಿಚಿತ್ರ ಅಂದ್ರೆ ಎಲ್ಲಾ ಪತ್ನಿಯರು ಮತ್ತು ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಾನೆ. ಪತ್ನಿಯರ ಮಧ್ಯೆ ಜಗಳವೇ ಆಗುವುದಿಲ್ಲ ಎನ್ನುತ್ತಾನೆ ಈತ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೃತ್ತಿಯಲ್ಲಿ ಈತ ಸೇಲ್ಸ್‌ ಮ್ಯಾನ್‌. ಎಲ್ಲಾ ಪತ್ನಿಯರಿಗೂ ಸಮನಾಗಿ ಪ್ರೀತಿ ಹಂಚುತ್ತೇನೆ ಅಂತಾ ಈತ ಹೇಳಿಕೊಂಡಿದ್ದಾನೆ. ಈತನ ಹೆಸರು ನಟ್ಟಪೋಂಗ್ ಛಬ್ಲೆಮ್, ವಯಸ್ಸು 34 ವರ್ಷ. ಪ್ರೀತಿಗೆ ಸಂಬಂಧಿಸಿದ ಕೆಲವು ವಿಶೇಷ ಗುಣಗಳು ತನ್ನಲ್ಲಿವೆ ಅಂತಾ ಈತ ಹೇಳಿಕೊಳ್ತಾನೆ.

ಅವನು ತನ್ನ ಎಲ್ಲಾ ಹೆಂಡತಿಯರನ್ನು ವಿಭಿನ್ನ ಸಂದರ್ಭಗಳಲ್ಲಿ ಭೇಟಿಯಾಗಿದ್ದಾನಂತೆ. ಕೆಲವೊಮ್ಮೆ ಸ್ನೇಹಿತರ ಮೂಲಕ, ಪಾರ್ಟಿಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾಗಿ ಆತನನ್ನು ಇಷ್ಟಪಟ್ಟು ಎಲ್ಲರೂ ಅವನನ್ನೇ ಮದುವೆಯಾಗಿದ್ದಾರಂತೆ. ನಟ್ಟಪೋಂಗ್ ಛಬ್ಲೆಮ್ ತನ್ನ 7 ಹೆಂಡತಿಯರು ಮತ್ತು 9 ಮಕ್ಕಳೊಂದಿಗೆ ನಖೋಮ್ ಪಥಮ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾನೆ. ಎಲ್ಲಾ ಯುವತಿಯರು ಇಷ್ಟಪಡುವಂಥ ಗುಣ ಆತನಲ್ಲೇನಿರಬಹುದು ಅನ್ನೋದು ಎಲ್ಲರ ಕುತೂಹಲ.

ಆತ ಸುಳ್ಳು ಹೇಳಲು ಇಷ್ಟಪಡುವುದಿಲ್ಲವಂತೆ. ತಾನು ಫ್ಲರ್ಟ್‌ ಮಾಡುತ್ತಿರುವ ವಿಚಾರವನ್ನು ಕೂಡ ಆತ ಪತ್ನಿಯರಿಗೆ ತಿಳಿಸುತ್ತಾನಂತೆ. ಎಲ್ಲಾ ಏಳು ಮಹಿಳೆಯರೂ ಆತನನ್ನು ಪ್ರೀತಿಸುತ್ತಿದ್ದು, ಜಗಳವಾಡದೆ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ. 7 ಮಹಿಳೆಯರ ಜೊತೆಗೆ ಗುಟ್ಟಾಗಿ ಬಾಳಲು ಆಗಲಿಲ್ಲ, ನಾನು ಸತ್ಯವನ್ನು ಹೇಳಲು ಇಷ್ಟಪಡುತ್ತೇನೆ. ಈ ಕಾರಣಕ್ಕಾಗಿ, ಎಲ್ಲರೂ ಒಟ್ಟಾಗಿ ಬದುಕುತ್ತಿದ್ದೇವೆ ಅಂತಾ 7 ಹೆಂಡಿರ ಗಂಡ ಹೇಳಿಕೊಂಡಿದ್ದಾನೆ.