ಟರ್ಕಿ ಸಿರಿಯಾ ದೇಶಗಳನ್ನ ಅಲ್ಲೋಲ ಕಲ್ಲೋಲವಾಗಿದೆ. ಮುಗಿಲು ಮುಟ್ಟುವಂತಿದ್ದ ನೂರಾರು ಕಟ್ಟಡಗಳನ್ನ ಧರಾಶಾಹಿಯಾಗಿದೆ. ಏನು ಅರಿಯದ ಮುಗ್ಧ ಜನ ಕಟ್ಟಡ ಅವಶೇಷಗಳ ಅಡಿ ಜೀವಂತ ಸಮಾಧಿಯಾಗಿದ್ದಾರೆ. ಇಡೀ ಟರ್ಕಿ ಸಿರಿಯಾ ಸ್ಮಶಾನ ಮೌನವಾಗಿದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ರಣ ಕೇಕೆ ಹಾಕುತ್ತಿದ್ದು, ಬರೋಬ್ಬರಿ ೨೪ ಸಾವಿರಕ್ಕೂ ಹೆಚ್ಚು ಜನರನ್ನ ಬಲಿ ಪಡೆದ ಭೂಕಂಪ ಮರಣ ಮೃದಂಗ ಬಾರಿಸಿದೆ. ಇತ್ತ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಭಾರತೀಯ ರಕ್ಷಣಾ ಪಡೆ ‘ಆಪರೇಷನ್ ದೋಸ್ತ್’ ಹೆಸರಿನಲ್ಲಿ ಅವಶೇಷಗಳಡಿ ಸಿಲುಕೊಂಡಿರುವ ಜನರ ಜೀವ ಕಾಪಾಡ್ತಿದೆ.
ಭೂಕಂಪದಿAದ ಹಾನಿಯಾದ ಟರ್ಕಿ ಮತ್ತು ಸಿರಿಯಾದಲ್ಲಿ ಅವಶೇಷಗಳಡಿ ಸಿಲುಕಿ ಐದು ದಿನಗಳ ನಂತರವೂ ಮಕ್ಕಳು, ವೃದ್ಧರು, ಗಾಯಾಳುಗಳು ಪವಾಡದಂತೆ ಬದುಕುಳಿದಿರುವ ನಿದರ್ಶನಗಳು ಗೋಚರಿಸುತ್ತಿವೆ. ಆದರೆ ೨೪,೦೦೦ಕ್ಕೂ ಹೆಚ್ಚು ಮಂದಿ ಭೀಕರ ಭೂಕಂಪಕ್ಕೆ ಬಲಿಯಾಗಿದ್ದಾರೆ. ಟರ್ಕಿಯಲ್ಲಿ ಆಪತ್ತಿನಲ್ಲಿರುವ ಜನರ ಜೀವ ರಕ್ಷಣೆಗೆ ಭಾರತೀಯ ಸೇನೆ ಶ್ರಮಿಸುತ್ತಿದೆ.
ಟರ್ಕಿಯ ಗಾಜಿಯಾನ್ ಟೇಪ್ ಪ್ರದೇಶದಲ್ಲಿ ಭೂಕಂಪದಿAದ ಕಳೆದು ೪ ದಿನಗಳಿಂದ ೬ ವರ್ಷದ ಬಾಲಕಿ ಕಟ್ಟದ ಅವಶೇಷಗಳ ಅಡಿ ಸಿಲುಕಿಕೊಂಡಿದ್ದಳು. ಫೀಲ್ಡಿಗಳಿದ ಎನ್‌ಡಿಆರ್‌ಎಫ್ ತಂಡ ೬ ವರ್ಷದ ಬಾಲಕಿಯನ್ನ ರಕ್ಷಣೆ ಮಾಡಿದೆ. ಸಿಬ್ಬಂದಿಯ ಸಹಾಯದಿಂದ ನಿಟ್ಟುಸಿರು ಬಿಟ್ಟ ಬಾಲಕಿ ಕಣ್ಣೀರ ಕೃತಜ್ಞತೆ ಸಲ್ಲಿಸಿದ್ದಾಳೆ.
ಅವಶೇಷಗಳ ಅಡಿ ಸಿಲುಕಿದ್ದ ೧೩ ವರ್ಷದ ಬಾಲಕಿಯನ್ನ ಬೀನಾ ತಿವಾರಿ ಎಂಬ ಮಹಿಳೆಯನ್ನ ಸೇನಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಆಕೆಯನ್ನ ಭಾರತೀಯ ಸೇನೆಯ ಚಿಕಿತ್ಸಾ ಘಟಕಕ್ಕೆ ತಂದು ಚಿಕಿತ್ಸೆ ನೀಡಲಾಗಿದೆ. ಈ ವೇಳೆ ಸೇನಾ ಸಿಬ್ಬಂದಿಯ ಕಾರ್ಯವನ್ನ ಕಂಡು ಬಾವುಕರಾದ ಬಾಲಕಿ ತಾಯಿ ಬೀನಾ ತಿವಾರಿ ಅವರನ್ನ ತಬ್ಬಿಕೊಂಡು ಕೃತಜ್ಞತೆ ತಿಳಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭೂಕಂಪದಿAದ ಗಾಯಗೊಂಡಿರೋ ಜನರ ಪಾಲಿಗೆ ಭಾರತದ ಸೇನಾ ಪಡೆಯ ಸಿಬ್ಬಂದಿ ಬೆನ್ನೆಲುಬಾಗಿ ನಿಂತಿದ್ದಾರೆ. ಟರ್ಕಿಯಲ್ಲಿ ಭಾರತೀಯ ಸೇನಾ ಪಡೆ ನಿರ್ಮಿಸಿರೋ ತುರ್ತು ಚಿಕಿತ್ಸಾ ಘಟಕದಲ್ಲಿ ಗಾಯಾಳುಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದೆ.
ಕುತ್ತಿಗೆವರೆಗೆ ಅವಶೇಷಗಳ ಮಣ್ಣಿನಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯನ್ನ ರಕ್ಷಣೆ ಮಾಡಲು ಭಾರತೀಯ ಸೇನಾ ಸಿಬ್ಬಂದಿ ಹರಸಾಹಸ ಪಟ್ಟರು. ವ್ಯಕ್ತಿಯ ರಕ್ಷಣೆಗೆ ಸೂಕ್ತ ಸಲಕರಣೆಗಳೇ ಇಲ್ಲದ ಕಾರಣ ಸಿಕ್ಕ ವಸ್ತುಗಳನ್ನೇ ಬಳಸಿ ವ್ಯಕ್ತಿಯನ್ನ ಬದುಕಿಸಿದರು.
ನಿನ್ನೆ ಕೂಡ ಒಂದು ಸೇನಾ ವಿಮಾನ ಸಿಬ್ಬಂದಿ, ಚಿಕಿತ್ಸಾ ಸಲಕರಣೆ ಮತ್ತು ಔಷಧಿಗಳನ್ನ ಹೊತ್ತು ಭಾರತದಿಂದ ಟರ್ಕಿಗೆ ಹಾರಿದೆ. ಟರ್ಕಿ ಜನತೆಗೆ ಅಗತ್ಯವಿರುವ ಔಷಧಿ ಹಾಗೂ ಅಹಾರ ಸಾಮಾಗ್ರಿಗಳನ್ನ ಹೊತ್ತಿರುವ ವಿಮಾನ ಟರ್ಕಿ ಏರಪೋರ್ಟ್ ತಲುಪಿದೆ.
ಕೇವಲ ಎನ್‌ಡಿಆರ್‌ಎಫ್ ಸಿಬ್ಬಂದಿ ಮಾತ್ರವಲ್ಲ, ಟೆರ್ಕಿಗೆ ಟೆರಳಿದ ಭಾರತೀಯನೊಬ್ಬ ಜನರ ಸಹಾಯಕ್ಕೆ ನೆರವಾಗಿದ್ದಾರೆ. ಪಂಜಾಬ್ ಮೂಲದ ಹರ್ಜಿಂದರ್ ಸಿಂಗ್ ಎಂಬ ಟ್ರಾವೆಲರ್ ೫ ದಿನದ ಹಿಂದೆ ಟರ್ಕಿಗೆ ತೆರಳಿದ್ದರು. ಟರ್ಕಿಯಲ್ಲಿ ವಿಮಾನ ಲ್ಯಾಂಡ್ ಆಗುವ ಮುನ್ನವೇ ಅಲ್ಲಿ ಭೂಕಂಪ ಸಂಭವಿಸಿತ್ತು. ಬಳಿಕ ಅಲ್ಲಿನ ಪರಿಸ್ಥಿತಿ ನೋಡಿದ ಹರ್ಜಿಂದರ್ ಸಿಂಗ್ ವಾಪಸ್ ಆಗದೇ ಟರ್ಕಿ ಜನರ ಸಹಾಯಕ್ಕೆ ಮುಂದಾಗಿದ್ದಾರೆ.
ಈ ಹಿಂದೆ ಪಾಕ್ ಜೊತೆ ಸೇರಿ ಭಾರತದ ವಿರುದ್ಧ ದ್ವೇಷ ಸಾಧಿಸಿದ್ದ ಟರ್ಕಿಯ ನರಿ ಬುದ್ಧಿಯನ್ನ ಮರೆತು ಭಾರತ ಅಲ್ಲಿನ ಜನರ ರಕ್ಷಣೆಗೆ ಧಾವಿಸಿ ಔದಾರ್ಯ ಮೆರೆದಿದೆ. ಹಳೆಯ ದ್ವೇಷ ಮರೆತು ಭಾರತೀಯ ಸೇನೆ ಟರ್ಕಿ ಜನರ ಜೀವ ರಕ್ಷಣೆಗೆ ಪಣತೊಟ್ಟಿದೆ. ನಮ್ಮದು ‘ವಸುದೈವ ಕುಟುಂಬಕA’ ಎಂದು ಭಾರತ ಮತ್ತೊಮ್ಮೆ ಇಡೀ ಜಗತ್ತಿಗೆ ಸಾರಿದೆ. ಕಷ್ಟದಲ್ಲಿರುವರಿಗೆ ಸಹಾಯ ಮಾಡುವುದು ಧರ್ಮ ಎಂಬ ಸಂದೇಶ ರವಾನಿಸಿದೆ. ಭಾರತದ ಸಹಾಯಕ್ಕೆ ಟರ್ಕಿ ಜನತೆ ಕೃತಜ್ಞತೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.