ಅಮಿತ್ ಶಾರನ್ನ ನೋಡಲು ದಂಡು ದಂಡಾಗಿ ಬಸ್‌ನಲ್ಲಿ ಆಗಮಿಸುತ್ತಿರುವ ಜನತೆ – ರಾರಾಜಿಸ್ತಾ ಇದೆ ಕೇಸರಿ ಪತಾಕೆ – ಕಹಳೆ ನ್ಯೂಸ್
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಗೆ ಇಂದು ಅಮಿತ್ ಶಾ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪುತ್ತೂರಿನ ಸಮಾವೇಶದಲ್ಲಿ ಭಾಗಿಯಾಗಲೂ ಜನಸಮುದಾಯ ದಂಡು ದಂಡಾಗಿ ಆಗಮಿಸುತ್ತಿದ್ದಾರೆ.
ಅಮಿತ್ ಶಾ ಅವರು ಈಶ್ವರಮಂಗಲಕ್ಕೆ ಮಧ್ಯಾಹ್ನ 1.45ಕ್ಕೆ ಆಗಮಿಸಿ, ಅಮರ ಗಿರಿ ಉದ್ಘಾಟಿಸಿದ ಬಳಿಕ 3ಗಂಟೆಗೆ ಪುತ್ತೂರಿನ ತೆಂಕಿಲದಲ್ಲಿ ನಡೆಯುವ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಸಹಕಾರಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ಯಾಂಪ್ಕೊ ಸುವರ್ಣ ಮಹೋತ್ಸವ ಸಮಾರಂಭ ವೀಕ್ಷಿಸಲು ನೂರಾರು ಮಂದಿ ಆಗಮಿಸುತ್ತಿದ್ದು, ಸುಮಾರು 10ರಿಂದ 20 ಬಸ್‌ಗಳಿಗಿಂತಲೂ ಹೆಚ್ಚು ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಜಿಲ್ಲೆಯ ಹಲವು ಕಡೆಗಳಿಂದ ಜನತೆ ಆಗಮಿಸುತ್ತಿದ್ದಾರೆ. ಕಾರ್ಯಕರ್ತರು ಕೇಸರಿ ಶಾಲು ಹಾಕಿದ್ದು, ಬಸ್‌ಗಳಲ್ಲಿ ಕಮಲ ಪತಾಕೆ ಹಾಗೂ ಕೇಸರಿ ಧ್ವಜ ರಾರಾ¸ಜಿಸ್ತಾ ಇದೆ. ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಗಾರರು, ಸಹಕಾರಿಗಳು, ಬಿಜೆಪಿ ಕಾರ್ಯಕರ್ತರು ಸೇರಿದಂತೆ 1 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ನೆರೆದ ಜನರಿಗೆ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಸಮಾರಂಭ ವೀಕ್ಷಿಸಲು ಎಲ್‌ಇಡಿ ಪರದೆ ಹಾಕುವ ಮೂಲಕ ಭಾಷಣ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ