Recent Posts

Monday, January 27, 2025
ಸುದ್ದಿ

ಕಾರು ಲಾರಿ ಮಧ್ಯೆ ಭೀಕರ ಅಪಘಾತ : ನವ ದಂಪತಿ ಸ್ಥಳದಲ್ಲೇ ಸಾವು –ಕಹಳೆ ನ್ಯೂಸ್

ತುಮಕೂರು: ಕಾರು ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ನವ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕನಾಯಕನಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ನಡೆದಿದೆ. ರಘು (೩೫), ಅನುಷಾ (೨೮) ಮೃತ ದುರ್ದೈವಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ದುರ್ದೈವಿಗಳು ಮದುವೆಯಾಗಿ ಕೇವಲ ಎರಡು ತಿಂಗಳಾಗಿತ್ತು. ನವ ದಂಪತಿ ತುಮಕೂರಿನಿಂದ ಬಳ್ಳಾರಿಗೆ ಮದುವೆಯ ಸಮಾರಂಭಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.