Saturday, January 25, 2025
ಸುದ್ದಿ

ಬಿಎಸ್ ಯಡಿಯೂರಪ್ಪ ವ್ಯಕ್ತಿಯಲ್ಲಿ ಶಕ್ತಿ : ಬಿಎಸ್‌ವೈ ಬರ್ತಾ ಇದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಹೇಗಿತ್ತು ಗೊತ್ತಾ..? – ಕಹಳೆ ನ್ಯೂಸ್

ಪುತ್ತೂರು : ಇಂದು ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ವೇದಿಕೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸುತ್ತಿದಂತೆ ಕಾರ್ಯಕರ್ತರ ಶಿಳ್ಳೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಹೌದು ಬಿ,ಎಸ್ ಯಡಿಯೂರಪ್ಪ ಇಂದಿಗೂ ಬಿಜೆಪಿ ಪಕ್ಷದ ವಿಶೇಷ ಶಕ್ತಿ ಅನ್ನೋದು ಮತ್ತೆ ಮತ್ತೆ ಸಾಬಿತಾಗುತ್ತಲೇ ಇದೆ. ಮುಖ್ಯಮಂತ್ರಿ ಸ್ಧಾನಕ್ಕೆ ರಾಜೀನಾಮೆ ನೀಡಿ ದೂರ ಉಳಿದ್ರೂ ಕೂಡ ಜನ ಯಡಿಯೂರಪ್ಪ ಅವರ ಕಾರ್ಯ ವೈಖರಿಗೆ ಇಂದಿಗೂ ಮೆಚ್ಚಿಗೆ ಸೂಚಿಸುತ್ತಲೆ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ವೇದಿಕೆಗೆ ಕೇಂದ್ರ ಗೇಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ಇತರೆ ಸಚಿವರು ಹಾಗೂ ಶಾಸಕರು ವೇದಿಕೆಗೆ ಆಗಮಿಸಿದ್ದರು. ಆದರೆ ಬಿ,ಎಸ್ ಯಡಿಯೂರಪ್ಪ ಅವರು ತುಸು ತಡವಾಗಿ ವೇದಿಕೆ ಹತ್ತಿದ್ದಾರೆ. ಯಡಿಯೂರಪ್ಪ ಅವರು ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಜೋರಾಗಿ ಕೂಗಿದ್ದು ಇವರ ಹರ್ಷೋದ್ಘಾರಕ್ಕೆ ಮುಗಿಲು ಮುಟ್ಟಿತ್ತು. ಬಳಿಕ ಯಡಿಯೂರಪ್ಪ ವೇದಿಕೆಯನ್ನ ಉದ್ದೇಶಿಸಿ ಮಾತನಾಡಲು ತೆರಳಿದ ವೇಲೆಯೂ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಮೆಚ್ಚುಗೆಯ ಚಪ್ಪಳೆ ತಟ್ಟಿದ್ದಾರೆ. ಈ ವೇಳೆ ಯಡಿಯೂರಪ್ಪ ವ್ಯಕ್ತಿಯಲ್ಲಿ ಶಕ್ತಿ ಅನ್ನೋದು ಸಾರಿ ಸಾರಿ ಹೇಳುವಂತಿತ್ತು..