Friday, January 24, 2025
ಸುದ್ದಿ

ಇದು ಶಾಸಕ ಹರೀಶ್ ಪೂಂಜ ಅಬಿಮಾನಿಗಳ ಕ್ರೇಜ್..! : ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಹರೀಶಣ್ಣನಿಗೆ ಜೈಕಾರದ ಸುರಿಮಳೆ- ಕಹಳೆ ನ್ಯೂಸ್

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ವೇದಿಕೆಯಲ್ಲಿ ಅಭಿವೃದ್ಧಿಯ ಹರಿಕಾರ, ಯುವ ಜನರ ಸ್ಫೋರ್ತಿಯ ಚಿಲುಮೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರನ್ನ ಕಂಡೊಡನೇ ತುಂಬಿದ ಸಭಾಂಗಣದಲ್ಲಿ ಹರೀಶಣ್ಣನಿಗೆ ಜೈಕಾರದ ಸುರಿಮಳೆಯೇ ಸುರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನಲ್ಲಿ ಇಂದು ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ರಾಜಕೀಯ ನಾಯಕರು ಹಾಗೂ ಹಲವರು ಗಣ್ಯರು ಭಾಗಿಯಾಗಿದ್ರು.
ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದ ವೇದಿಕೆಗೆ ನವ ಬೆಳ್ತಂಗಡಿ ನಿರ್ಮಾಣದ ರುವಾರಿ ಹರೀಶ್ ಪೂಂಜ ಆಗಮಿಸ್ತಾ ಇದ್ದಂತೆ ಜನ ಶಿಳ್ಳೆ ಚಪ್ಪಾಳೆ ಹಾಗೂ ಜೈಕಾರದ ಮೂಲಕ ಸ್ವಾಗತಿಸಿದ್ದಾರೆ. ಬಳಿಕ ಕ್ಯಾಂಪ್ಕೋ ಸಂಸ್ಧೆ ವತಿಯಿಂದ ಗಣ್ಯರಿಗೆ ಸನ್ಮಾನ ನಡೆದಾಗ ಹರೀಶ್ ಪೂಂಜರನ್ನ ಸನ್ಮಾನಿಸುತ್ತಿದ್ದಂತೆ ಮತ್ತೆ ಯುವ ಪಡೆ ಹೆಯಂಗ್ ಎಂಡ್ ಎನರ್ಜಿಟಿಕ್ ಲೀಡರ್‌ಗೆ ಹರ್ಷೋದ್ಘಾರದ ಸುರಿಮಳೆ ಗೈದಿದ್ದಾರೆ.
ಹರೀಶ್ ಪೂಂಜ ಬೆಳ್ತಂಗಡಿ ಶಾಸಕರಾಗಿದ್ರೂ ಇವರ ಅಭಿಮಾನಿ ಬಳಗ ಜಗದಗಲಕ್ಕೂ ಪಸರಿಸಿದೆ. ಭಾರತೀಯ ಜನತಾ ಪಾರ್ಟಿಯನ್ನು ಅಭೂತಪೂರ್ವವಾಗಿ ಬೆಂಬಲಿಸಿದ ಜನತೆ ತಮ್ಮ ನೆಚ್ಚಿನ ನಾಯಕನಿಗೆ ಮನತುಂಬಿ ಪ್ರೀತಿ ನೀಡಿದ್ದಾರೆ.