Thursday, January 23, 2025
ಸುದ್ದಿ

ಪ್ರಧಾನಿ ಮೋದಿ ಜೊತೆ ಔತಣಕೂಟದಲ್ಲಿ ನಟ ಯಶ್, ರಿಷಭ್, ಕುಂಬ್ಳೆ ಸೇರಿ ಹಲವರು ಭಾಗಿ – ಕಹಳೆ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಏರೋ ಇಂಡಿಯಾ 2023 ಉದ್ಘಾಟನೆಗೆ ಬೆಂಗಳೂರಿಗೆ ಮೋದಿ ಆಗಮಿಸಿದ್ದಾರೆ. ಹೀಗಾಗಿ ಪ್ರಧಾನಿ ರಾಜಭವನದಲ್ಲಿ ತಂಗಿದ್ದರು. ಹೀಗಾಗಿ ರಾಜ್ಯದ ಕೆಲವು ಗಣ್ಯರಿಗೆ ಮೋದಿ ಜೊತೆ ಔತಣಕೂಟಕ್ಕೆ ಆಹ್ವಾನ ನೀಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನಿಮಾ ಕ್ಷೇತ್ರ, ಕ್ರೀಡಾ ಕ್ಷೇತ್ರ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಮೋದಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಔತಣಕೂಟದಲ್ಲಿ ನಟ ಯಶ್, ನಿರ್ದೇಶಕ ರಿಷಭ್ ಶೆಟ್ಟಿ, ಅಶ್ವಿನಿ ಪುನಿತ್ ರಾಜ್ ಕುಮಾರ್ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಭಾರಿ ಮೆಚ್ಚುಗೆ ಗಳಿಸಿದೆ. ಈ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಕೂಡ ಹೊಸ ಮೈಲುಗಲ್ಲು ಸಾಧಿಸಿದೆ. ಹೀಗಾಗಿ ಈ ಎರಡೂ ಸಿನಿಮಾಗಳ ಬಗ್ಗೆ ಮೋದಿ ಕೊಂಡಾಡಿದ್ದಾರೆ.

ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಕನ್ನಡ ಚಿತ್ರರಂಗದ ಬಗ್ಗೆಯೂ ಚರ್ಚೆ ನಡೆದಿದೆ. ಹಾಗೆಯೇ ಬೇರೆ ಕ್ಷೇತ್ರಗಳ ಗಣ್ಯರ ಜೊತೆಯೂ ಮೋದಿ ಮಾತಕತೆ ನಡೆಸಿದ್ದಾರೆ.

ರಾಜಭವನದ ಹೊರಗೆ ಯಶ್ ಹಾಗೂ ರಿಷಭ್ ಶೆಟ್ಟಿ ಕಾಣಿಸಿಕೊಂಡಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಜೊತೆ ಸ್ಟಾರ್ ನಟರು ಪೋಸ್ ನೀಡಿದ್ದಾರೆ.