Thursday, January 23, 2025
ಬಂಟ್ವಾಳಸುದ್ದಿ

ಕೆಲಿಂಜ ಜಾತ್ರೋತ್ಸವದಂದು ಪಂಚಾಯತ್ ನ 3 ಮತ್ತು 4 ನೇ ವಾರ್ಡಿನಲ್ಲಿ ಎರಡು ದಿನಗಳಿಂದ ನೀರಿಲ್ಲದೇ ಜನರ ಪರದಾಟ.! : ಗುತ್ತಿಗೆದಾರ ನಾಗರಾಜನಿಗೆ ಛೀಮಾರಿ ಹಾಕಿದ ಗ್ರಾಮಸ್ಥರು –ಕಹಳೆ ನ್ಯೂಸ್

ಗುತ್ತಿಗೆದಾರನ ಸ್ವಾರ್ಥದಿಂದಾಗಿ ಪ್ರತಿನಿತ್ಯ ಕುಡಿಯುವ ನೀರು ಪೂರೈಸಬೇಕಾಗಿದ್ದ, ವಾಟರ್ ಮ್ಯಾನ್ ನೀರು ಸರಬರಾಜು ಮಾಡದೇ ಜನರನ್ನು ಪರದಾಡುವಂತೆ ಮಾಡಿದ ಘಟನೆ ವೀರಕಂಭ ಪಂಚಾಯತ್‌ನ ಮೂರು ಮತ್ತು ನಾಲ್ಕನೇ ವಾರ್ಡಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಕ್ರೀಟ್ ಟ್ಯಾಂಕ್ ನಿರ್ಮಾಣದ ಗುತ್ತಿಗೆದಾರನೊಬ್ಬನ ಅವಿವೇಕತನದಿಂದಾಗಿ ಜನ ನೀರಿಲ್ಲದೇ ನರಳಾಡುವಂತಾಗಿದ್ದು, ಈ ಬಗ್ಗೆ ವಾಟರ್ ಮ್ಯಾನ್ ಜೊತೆ ವಿಚಾರಿಸಿದಾಗ ಗುತ್ತಿಗೆದಾರರು ಹಳೆಯ ಟ್ಯಾಂಕ್‌ಗೆ ಪಂಪ್ ಹಾಕಿ ನೀರು ತೆಗೆದುಕೊಂಡು ಹೋಗುತ್ತಿರುವ ಕಾರಣ ಜನರಿಗೆ ಸರಬರಾಜು ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಉತ್ತರಿಸಿದ್ದಾನೆ.

ಈ ಬಗ್ಗೆ ಗ್ರಾಮಸ್ಥರು ಗುತ್ತಿಗೆದಾರನಲ್ಲಿ ವಿಚಾರಿಸಿದಾಗ ನೀವ್ಯಾರು ಕೇಳೋಕೆ, ನನ್ನಿಷ್ಟದಂತೆ ನಾನು ಮಾಡ್ತೇನೆ ಈ ರೀತಿ ಧಿಮಾಕಿನಿಂದ ವರ್ತಿಸಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮಾಧ್ಯಮ ಪ್ರತಿನಿಧಿಯೊಬ್ಬರು ಈ ಬಗ್ಗೆ ಮಾಹಿತಿ ಕೇಳಿದಾಗ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ವಿಚಾರಣೆ ಮಾಡುತ್ತೇವೆ ಎಂದಿದ್ದಾರೆ.

ಇನ್ನೂ ಗುತ್ತಿಗೆ ಪಡೆದಿರುವ ನಾಗರಾಜ ಎರ್ಮೆನಿಲೆ ತನ್ನ ನೀಚ ಬುದ್ಧಿಯನ್ನು ಉಪಯೋಗಿಸಿ, ಮಾಡಿದ ಮಹಾ ಕೆಲಸವೆನೇಂದರೆ ಹಳೆಯ ಪಂಚಾಯತ್ ಟ್ಯಾಂಕ್‌ನಲ್ಲಿ ಶೇಖರಣೆಯಾದ ನೀರನ್ನು ತನ್ನ ಸ್ವಂತ ಪಂಪ್ ಬಳಸಿ ಪಂಚಾಯತ್‌ನ ಅನುಮತಿ ಇಲ್ಲದೆ ಗ್ರಾಮಸ್ಥರಿಗೆ ಸರಬರಾಜಗುವ ನೀರನ್ನು ತನ್ನ ಗುತ್ತಿಗೆ ಪಡೆದ ಕೆಲಸಕ್ಕೆ ಉಪಯೋಗಿಸಿದ್ದಾನೆ.

ಈ ಬಗ್ಗೆ ಸಾರ್ವಜನಿಕರು ನಾಗರಾಜನನ್ನು ತಾರಾಟೆಗೆ ತೆಗೆದುಕೊಂಡು ಊರವರ ನೀರಿನಲ್ಲಿ ನಿನ್ನ ಹೆಂಡತಿ ಮಕ್ಕಳನ್ನು ಯಾಕೆ ಸಾಕುತ್ತೀಯ..? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಗುತ್ತಿಗೆ ಪಡೆದ ನಂತರ ಅವರೇ ನೀರಿನ ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ರ ನೀರನ್ನು ದುರುಪಯೋಗ ಮಾಡಿದ ನಾಗರಾಜನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪಂಚಾಯತ್ ಅಧ್ಯಕ್ಷರಿಗೆ ಹೇಳಿದ್ದಾರೆ.

ವೀರಕಂಭ ಗ್ರಾಮದಲ್ಲಿ ಕಾಲಾವಧಿ ಕೆಲಿಂಜ ಜಾತ್ರೋತ್ಸವದ ವಿಜೃಂಭಣೆಯಲ್ಲಿರುವ ಗ್ರಾಮಸ್ಥರು ಜಾತ್ರ ಸಂದರ್ಭದಲ್ಲಿ ನೀರಿಲ್ಲದಂತೆ ಮಾಡಿದ ಗುತ್ತಿಗೆದಾರ ನಾಗರಾಜ ಎರ್ಮೆನಿಲೆ ಎಂಬವನಿಗೆ ಚೀಮಾರಿ ಹಾಕಿದ್ದಾರೆ.ಇನ್ನು ಗುತ್ತಿಗೆದಾರನ ಈ ಕೆಲಸದಿಂದ ಗ್ರಾಮಸ್ಥರು ನೀರನ್ನು ಹಣಕ್ಕೆ ತರುವಂತಾಗಿದೆ