Wednesday, January 22, 2025
ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಎಸ್​ಡಿಪಿಐ ಕರಾಳ ಮುಖ | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಎಸ್​ಡಿಪಿಐನಿಂದ ಟಿಕೆಟ್ ; ಜೈಲಿನಿಂದಲೇ ಶಾಫಿ ಬೆಳ್ಳಾರೆ ಚುನಾವಣೆಯಲ್ಲಿ ಸ್ಪರ್ಧೆ! ಉಗ್ರವಾದಿಗಳು ಕೂಡ ಎಸ್​ಡಿಪಿಐ ನೇತೃತ್ವದಲ್ಲಿ ಸ್ಪರ್ಧೆ – ವ್ಯಾಪಕ ಆಕ್ರೋಶ – ಕಹಳೆ ನ್ಯೂಸ್

ಬೆಂಗಳೂರು: ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಗೆ ಈ ಬಾರಿಯ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎಸ್​ಡಿಪಿಐ ಟಿಕೆಟ್ ನೀಡಿದೆ. ಇದೀಗ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಇಂದ ಈಗಾಗಲೇ ಬಂಧಿನವಾಗಿರುವ ಶಾಫಿ ಬೆಳ್ಳಾರೆ ಇದೀಗ ಜೈಲಿನಿಂದಲೇ ಚುನಾವಣೆಯನ್ನು ಸ್ಪರ್ಧಿಸಲು ಮುಂದಾಗಿದ್ದಾರೆ. ಕೊಲೆ ಆರೋಪಿಯನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿರುವ ಎಸ್​ಡಿಪಿಐ ತೀವ್ರ ಟೀಕೆಗೆ ಗುರಿಯಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಎಸ್​ಡಿಪಿಐ ಟಿಕೆಟ್ ನೀಡಿದ ವಿಚಾರವಾಗಿ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಹಿಂದು ಕಾರ್ಯಕರ್ತರ ಹತ್ಯೆ ಮಾಡಿದವರನ್ನು ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿರೋದು ಭಯ ಮೂಡಿಸಿದೆ. ಸಮಾಜದಲ್ಲಿ ತಲ್ಲಣ ಉಂಟುಮಾಡಿದವರನ್ನು ಪ್ರಜಾಪ್ರಭುತ್ವದ ದೇಗುಲಕ್ಕೆ ಕರೆದುಕೊಂಡು ಬರುವುದು ನೋಡಿದರೆ ಎಸ್​ಡಿಪಿಐ ಕರಾಳ ಮುಖ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಎಸ್​ಡಿಪಿಐ ಹಿಂದು ಕಾರ್ಯಕರ್ತರ ಹತ್ಯೆ ಮಾಡುವ ಮೂಲಕ ಸಮಾಜದಲ್ಲಿ ವ್ಯವಸ್ಥಿತ ಸಂಚು ರೂಪಿಸಿದರು. ಪ್ರಜಾಪ್ರಭುತ್ವದಲ್ಲಿ ಚರ್ಚೆ, ವಿಮರ್ಶೆ ಆಗಬೇಕೆ ವಿನಃ ಗಲಾಟೆ, ದೊಂಬಿಗಳಾಗಬಾರದು. ಹಿಂದು ಕಾರ್ಯಕರ್ತರ ಕೊಲೆಯ ಆರೋಪಿಯನ್ನು ಅಭ್ಯರ್ಥಿ ಮಾಡಿರೋದು ನೋಡಿದ್ರೆ ಮತ್ತೊಂದು ರೀತಿಯ ಭಯವನ್ನು ಸೃಷ್ಟಿ ಮಾಡುತ್ತಿದ್ದಾರೆ.

ಚುನಾವಣೆಯಲ್ಲಿ ಸಜ್ಜನರಿಗೆ ಅವಕಾಶ ಮಾಡಿಕೊಡಬೇಕು. ಸಮಾಜದಲ್ಲಿ ಈ ಬೆಳವಣಿಗೆಯನ್ನು ವಿರೋಧ ಮಾಡಿಲ್ಲದೇ ಹೋದಲ್ಲಿ ಉಗ್ರವಾದಿಗಳು ಕೂಡ ಎಸ್​ಡಿಪಿಐ ನೇತೃತ್ವದಲ್ಲಿ ಸ್ಪರ್ಧೆ ಮಾಡಬಹುದು ಎಂದು ಹೇಳಿದರು.

ಶಾಫಿ ಬೆಳ್ಳಾರೆ ಚನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿರುವುದನ್ನು ಎಸ್​ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಸಮರ್ಥಿಸಿಕೊಂಡಿದ್ದು, ಕಾನೂನು ನೀಡಿರುವ ಅವಕಾಶವನ್ನು ಬಳಸಿಕೊಂಡು ಶಾಫಿ ಸ್ಪರ್ಧೆ ಮಾಡಲಿದ್ದಾರೆ. ಚುನಾವಣೆಯ ಸಮಯಕ್ಕಾಗುವಾಗ ಜಾಮೀನಿಗೆ ಪ್ರಯತ್ನಿಸುತ್ತೇವೆ. ಶಾಫಿ ಪರವಾಗಿ ಪ್ರತಿಯೊಬ್ಬ ಕಾರ್ಯಕರ್ತ ಪ್ರಚಾರದಲ್ಲಿ ತೊಡಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.