Wednesday, January 22, 2025
ಕ್ರೈಮ್ಬೆಂಗಳೂರುರಾಜಕೀಯರಾಜ್ಯಸುದ್ದಿ

ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ನಗ್ನ ಅಶ್ಲೀಲ ವಿಡಿಯೋ ಲೀಕ್ ಕೇಸ್ ; ಚಾರ್ಜ್ ಶೀಟ್ ನಲ್ಲಿ ಕುಮಾರಕೃಪಾದ ರಹಸ್ಯ ಬಯಲು – ಕಹಳೆ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ರಾವ್ (Navyashree R Rao) ಖಾಸಗಿ ವೀಡಿಯೋ (Private Video) ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತೋಟಗಾರಿಕೆ ಇಲಾಖೆ (Horticulture Department) ಸಹಾಯಕ ನಿರ್ದೇಶಕ ರಾಜ್‌ಕುಮಾರ್ ಟಾಕಳೆ ಮತ್ತು ಇತರ ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ. A.1 ಆರೋಪಿಯಾಗಿ ರಾಜಕುಮಾರ್ ಟಾಕಳೆ, A.2 ಆರೋಪಿಯಾಗಿ ಖಾಸಗಿ ಪತ್ರಿಕೆಯೊಂದರ ಪತ್ರಕರ್ತ ಸೇರಿ 6 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ನಲ್ಲಿ ಕುಮಾರಕೃಪಾದ ಕರ್ಮಕಾಂಡ ಬಯಲಾಗಿದೆ. ಸುಮಾರು ಒಂದೂವರೆ ವರ್ಷ ಕುಮಾರಕೃಪಾದ ರೂಮಿನ ಬೀಗ ನವ್ಯಶ್ರೀ ಬಳಿಯೇ ಇತ್ತು. ಆಕೆಯನ್ನ ತನ್ನ ಹೆಂಡತಿ ಎಂದು ಅಲ್ಲಿಗೆ ಕರೆದೊಯ್ದಿದ್ದ ರಾಜಕುಮಾರ್ (Rajkumar Takale) ಆಕೆಯ ವೀಡಿಯೋ ಮಾಡಿ ಬಹಿರಂಗ ಮಾಡಿದ್ದಾನೆ ಎನ್ನಲಾಗಿದೆ. ವೀಡಿಯೋ ರಿಲೀಸ್ ಮಾಡಿದ ಬಳಿಕ ಆಕೆ ನನಗೆ ಗೊತ್ತೇ ಇಲ್ಲ, ಆಕೆ ನನ್ನ ಹೆಂಡತಿ ಅಲ್ಲ, ಆಕೆಯೇ ವೀಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದಾಳೆ ಎಂದು ಆರೋಪಿಸಿದ್ದಾನೆ. ಒಂದು ವೇಳೆ ರಾಜ್‌ಕುಮಾರ್ ಆಕೆ ತನ್ನ ಹೆಂಡತಿ ಅಲ್ಲ ಅನ್ನೋದಾದ್ರೆ ಗೆಸ್ಟ್ಹೌಸ್ ಬೀಗ ನವ್ಯಶ್ರೀಗೆ ಯಾಕೆ ಕೊಟ್ಟರು? ಇಲ್ಲಿ ರಾಜ್‌ಕುಮಾರ್ ಟಾಕಳೆ ಪ್ರೀ ಪ್ಲಾನ್ ಮಾಡಿಕೊಂಡಿರುವುದಾಗಿ ಚಾರ್ಜ್‌ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ರಾಜ್‌ಕುಮಾರ್ 2022ರ ಜುಲೈ 14ರಂದು ವೀಡಿಯೋ ರಿಲೀಸ್ ಮಾಡಿದ್ದ. ಆದರೆ ಜುಲೈ 12ರಂದೇ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಹಾಗಾಗಿ ಪತ್ರಕರ್ತನ ಜೊತೆ ಸೇರಿ ಕೃತ್ಯ ಎಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಪತ್ರಕರ್ತನನ್ನೂ ಎ2 ಆರೋಪಿಯಾಗಿ ಪರಿಗಣಿಸಲಾಗಿದೆ. ಜೊತೆಗೆ 2020 ಡಿಸೆಂಬರ್ 18 ರಿಂದ 2021 ಜುಲೈವರೆಗೆ ನವ್ಯಶ್ರೀ ಕುಮಾರಕೃಪಾದಲ್ಲಿದ್ದರು ಎಂದು ಚಾರ್ಜ್ಶೀಟ್‌ನಲ್ಲಿ ತಿಳಿಸಲಾಗಿದೆ.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕನಾಗಿದ್ದ ರಾಜಕುಮಾರ ಟಾಕಳೆ ಜವಳಿ ಸಚಿವ ಶ್ರೀಮಂತ್ ಪಾಟೀಲ್‌ರ ವಿಶೇಷ ಕರ್ಥವ್ಯಾಧಿಕಾರಿಯೂ ಆಗಿದ್ದ. ಅದರ ಐಡಿ ಕಾರ್ಡ್ ಬಳಿಸಿಕೊಂಡು ಕುಮಾರಕೃಪದಲ್ಲಿ ರೂಂ ಕೀ ಪಡೆದುಕೊಳ್ಳುತ್ತಿದ್ದ ಎಂದು ಚಾರ್ಜ್‌ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಕೇಸ್?

ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ಅತ್ಯಾಚಾರ, ಕಿಡ್ನಾಪ್, ಗರ್ಭಪಾತ, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯವಾಗಿ ನಿಂದಿಸುವುದು, ಜೀವ ಬೆದರಿಕೆ, ಗೌರವಕ್ಕೆ ಧಕ್ಕೆ ಹಾಗೂ ಖಾಸಗೀತನಕ್ಕೆ ಧಕ್ಕೆ ಆರೋಪ ಹಾಗೂ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ವಿವಿಧ ಸೆಕ್ಷನ್ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರ ಮೇಲೆ ಕೇಸ್ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ನವ್ಯಶ್ರೀ ಅವರ ಕಷ್ಟಕ್ಕೆ ಸ್ಪಂದಿಸಿ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಅಂದಿದ್ದೆ. ಆದ್ರೆ ನವ್ಯಶ್ರೀ ಕಳೆದ 4 ವರ್ಷಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು, ಈಗಾಗಲೇ 2 ಲಕ್ಷ ಹಣವನ್ನೂ ಪಡೆದಿದ್ದಾರೆ ಎಂದು ಪ್ರತಿದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನವ್ಯಶ್ರೀಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.