ಮಂಗಳೂರಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ” ಸ್ವಚ್ಛ ಮಂಗಳೂರು ” ಅಭಿಯಾನದ ರೂವಾರಿ ಮಂಗಳೂರಿನ ರಾಮಕೃಷ್ಣ ಮಠ ಸ್ವಾಮಿ ಏಕಗಮ್ಯಾನಂದ ಜೀ ಉತ್ತರ ಕರ್ನಾಟಕದ ಜಗದ್ಗುರು ಪೀಠದ ಪೀಠಾಧಿಪತಿ..! – ಕಹಳೆ ನ್ಯೂಸ್
ಮಂಗಳೂರು: ಸುಮಾರು 15 ವರ್ಷಗಳ ಕಾಲ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉತ್ತರ ಕರ್ನಾಟಕದ ಪ್ರಮುಖ ಜಗದ್ಗುರು ಪೀಠದ ಮಠಾಧೀಶನಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ.
ಇಲ್ಲಿಯವರೆಗೆ ಸ್ವತ್ಛತೆ ಸಹಿತ ನಗರ ಅಭಿವೃದ್ಧಿ ಕೇಂದ್ರಿತ ವಿವಿಧ ವಿಚಾರಗಳಿಗೆ ನನಗೆ ಸಹಕಾರ ನೀಡಿದ ಸರ್ವ ಜನತೆಗೂ ಚಿರಋಣಿ ಎಂದು ಸ್ವಾಮಿ ಏಕಗಮ್ಯಾನಂದ ಜೀ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆ ಮಠಕ್ಕೆ ಹತ್ತಾರು ಶಿಕ್ಷಣ ಸಂಸ್ಥೆಗಳಿದ್ದು, 7ರಿಂದ 8 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೃಷಿ ಪ್ರಧಾನ ಮಠವಾಗಿದ್ದು, 400 ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಈ ಮಾಸಾಂತ್ಯದೊಳಗೆ ಆ ಮಠಕ್ಕೆ ಹೋಗುತ್ತಿದ್ದೇನೆ ಎಂದರು.
ಮಂಗಳೂರಿನ ರಾಮಕೃಷ್ಣ ಮಠದಿಂದ ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸ ಲಾಗಿದೆ. 2011-14ರ ವರೆಗೆ ವಿವೇಕಾನಂದರ 125ನೇ ಜಯಂತಿ ಆಯೋಜಿಸಿ ದ್ದೆವು. 125 ಕಾರ್ಯಕ್ರಮ, 10,000 ಯುವಕರ ಜಾಥ, ಮೂರು ದಿನಗಳ ಸಮಾವೇಶ ಯಶಸ್ವಿಯಾಗಿ ಸಂಘಟಿಸಿದ ಜವಾಬ್ದಾರಿ ಸ್ಮರಣೀಯ.
2006ರಿಂದ ಇಂದಿನವರೆಗೆ ಮಂಗಳೂರಿನ ರಾಮಕೃಷ್ಣ ಮಠದ ಆಧ್ಯಾತ್ಮಿಕ ತರಂಗಗಳಿಂದ ಕೂಡಿದ ಶಾಂತ-ಸುಂದರ ಪರಿಸರದಲ್ಲಿ ನನ್ನ ಜೀವನ ದಿವ್ಯತ್ರಯರ ಅಪಾರ ಅನುಗ್ರಹ ಹಾಗೂ ಕೃಪೆಯಿಂದ ರೂಪುಗೊಂಡಿದೆ. ಶ್ರೀಮಠದಲ್ಲಿರುವ ಹಿರಿಯ ಸನ್ಯಾಸಿಗಳೂ, ಸಹೋದರ ಸನ್ಯಾಸಿಗಳೂ ಆಗಾಗ ಮಾರ್ಗದರ್ಶನ ನೀಡಿದ್ದಾರೆ. ಅವರಿಗೂ ನಾನು ಪ್ರಣಾಮಪೂರ್ವಕ ಧನ್ಯವಾದಗಳನ್ನು ಸಲ್ಲಿಸುವೆ.
ರಾಮಕೃಷ್ಣ ಮಠ ಮತ್ತು ಮಿಷನ್ನಿನಲ್ಲಿ ನಾನು ಕಳೆದ 15 ವರ್ಷಗಳ ಅವಧಿಯಲ್ಲಿ ಪ್ರಮುಖವಾಗಿ ಕಾರ್ಯಕ್ರಮ ಸಂಯೋಜಕನಾಗಿ ಸೇವೆ ಸಲ್ಲಿಸಿದ್ದೇನೆ. ನಾವು ಹಮ್ಮಿಕೊಂಡಿದ್ದ ಎಲ್ಲ ಕಾರ್ಯಕ್ರಮಗಳಿಗೆ ಹಾಗೂ ಯೋಜನೆಗಳಿಗೆ ಮಾಧ್ಯಮದವರು ವಿಶೇಷವಾಗಿ ಪತ್ರಿಕಾರಂಗ ನೀಡಿದ ಪೆÇ್ರೀತ್ಸಾಹ ಹಾಗೂ ಸಹಕಾರಗಳನ್ನು ಅತ್ಯಂತ ಗೌರವದಿಂದ ಸ್ಮರಿಸಿಕೊಂಡು ಧನ್ಯವಾದಗಳನ್ನು ಅರ್ಪಿಸುವೆ.
2006 ರಿಂದ 2023, ಮಂಗಳೂರಿನ ನನ್ನ ಜೀವನ ಸೇವೆಯಲ್ಲಿಯೇ ಸಾರ್ಥಕತೆ ಎಂಬ ಭಾವವನ್ನು ಜಾಗೃತಗೊಳಿಸಿದೆ. ಸುಮಾರು 300 ಕ್ಕೂ ಅಧಿಕ ಸಭಾ ಕಾರ್ಯಕ್ರಮಗಳನ್ನು ಭಕ್ತರಿಗಾಗಿ, ಯುವಜನತೆಗಾಗಿ, ಶಿಕ್ಷಕರಿಗಾಗಿ, ಉಪನ್ಯಾಸಕರಿಗಾಗಿ, ವೃತ್ತಿಪರರಿಗೆ ಶ್ರೀ ಮಠದಲ್ಲಿಯೇ ಆಯೋಜಿಸಿ ಸಂಘಟಿಸುವಲ್ಲಿ ನನಗೆ ಮಠ ನೀಡಿದ ಜವಾಬ್ದಾರಿಯನ್ನು ಶ್ರದ್ಧಾಭಕ್ತಿಗಳಿಂದ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಈ ಮಧ್ಯದಲ್ಲಿ 2009 ರಿಂದ 2011 ರವರೆಗೆ ನಾನು ರಾಮಕೃಷ್ಣ ಮಿಷನ್ನಿನ ಪ್ರಧಾನ ಕೇಂದ್ರ ಕಲ್ಕತ್ತದಲ್ಲಿರುವ ಬೇಲೂರು ಮಠದಲ್ಲಿ ವಿಶೇಷ ತರಭೇತಿ ಪಡೆದು ಮತ್ತೆ 2011 ರಿಂದ ಮಂಗಳೂರಿನಲ್ಲಿ ಸೇವಾತತ್ಪರನಾಗಿದ್ದೇನೆ.
2011 ರಿಂದ 2014 ಸ್ವಾಮಿ ವಿವೇಕಾನಂದರ ನೂರೈವತ್ತನೇ ಜನ್ಮೋತ್ಸವವನ್ನು ಸರಿ ಸುಮಾರು 125 ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಜನಮಾನಸದಲ್ಲಿ ವಿವೇಕಾನಂದರ ಜೀವನ ಸಂದೇಶಗಳನ್ನುಪ್ರಸಾರ ಮಾಡಲು ಸಹಕಾರಿಯಾಗಿದೆ. 10 ಸಾವಿರ ಯುವಕರ ಜಾಥಾ ಹಾಗೂ ಮೂರು ದಿನಗಳ ಯುವ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸುವ ಜವಾಬ್ದಾರಿ ಸ್ಮರಣೀಯವಾದವುಗಳು.
ಬಳಿಕ ನಡೆದ ಸ್ವತ್ಛ ಭಾರತ ಅಭಿಯಾನ ನಮ್ಮ ಜೀವನವನ್ನೇ ಬದಲಾಯಿಸಿತು. ವರ್ಷಗಳ ಅವಧಿ ಯಲ್ಲಿ ಹತ್ತಾರು ಕೋಟಿ ಕೆಲಸ ನಡೆದಿದೆ. ಒತ್ತಾಯಪೂರ್ವಕ ದೇಣಿಗೆ ಪಡೆದುಕೊಂಡಿಲ್ಲ. ಎಲ್ಲ ಕೆಲಸಗಳನ್ನು ಮಾಡಲು ಮಂಗಳೂರಿನ ರಾಮಕೃಷ್ಣ ಮಠ ನನಗೆ ಪ್ರೋತ್ಸಾಹ, ಸಹಕಾರ ನೀಡಿದೆ ಎಂದು ಹೇಳಿದರು.
ಮಂಗಳೂರಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಕಾರ್ಯಕ್ರಮವೆಂದರೆ ಸ್ವಚ್ಛ ಮಂಗಳೂರು ಅಭಿಯಾನ. ಸುಮಾರು ಐದು ವರ್ಷಗಳ ಕಾಲ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸಾವಿರಾರು ಜನರು ಭಾಗಿಯಾಗಿ ಅಭಿಯಾನವು ಆಂದೋಲನದ ಸ್ವರೂಪವನ್ನು ಪಡೆಯಿತು. ಸುಮಾರು ನಾಲ್ಕು ಸಾವಿರ ಕಾರ್ಯಕರ್ತರು ಈ ಅಭಿಯಾನದ ಜೀವಾಳ. ಭಾನುವಾರದ ಶ್ರಮದಾನ, ಸ್ವಚ್ಛಗ್ರಾಮ ಅಭಿಯಾನ, ನಿತ್ಯಮನೆ ಭೇಟಿ, ಸ್ವಚ್ಛ ಮನಸ್ ಕಾರ್ಯಕ್ರಮ ಹಾಗೂ ಸ್ವಚ್ಛ ಸೋಚ್ ನಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ವಚ್ಛತೆಯ ಭಾವ ಜನತೆಯಲ್ಲಿ ಜಾಗೃತಗೊಳಿಸುವಲ್ಲಿ ಪ್ರಯತ್ನಿಸಲಾಯಿತು. ಶ್ರೀಮಠ ನೀಡಿದ ಈ ಅಭಿಯಾನದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿ, ನನ್ನನ್ನು ನಾನೇ ಪಾವನಗೊಳಿಸಿಕೊಂಡಂತಹ ಅನುಭವ ವಿಶಿಷ್ಠವಾದುದು. ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕಾದ ಒಂದು ಘಟನೆಯೆಂದರೆ, ಈ ಅಭಿಯಾನವನ್ನು ಮಾಡಬೇಕಾ? ಎನ್ನುವ ಚರ್ಚೆ ನಡೆಯುತ್ತಿರುವಾಗ ಮಠದಲ್ಲಿ ನಾನು ಇದರ ಪರವಾಗಿ ನಿಲುವು ವ್ಯಕ್ತಪಡಿಸಿದಾಗ ಇದಕ್ಕೆ ಆರ್ಥಿಕ ಸಂಪನ್ಮೂಲವನ್ನು ಹೇಗೆ ಹೊಂದೀಸುತ್ತೀಯಾ? ಎಂದು ನನ್ನ ಹಿರಿಯರು ಕೇಳಿದಾಗ ನಾನು ಹೇಳಿದೆ ” ಸ್ವಾಮಿ ವಿವೇಕಾನಂದರು ಹೇಳುತ್ತಾರೆ ಶುದ್ಧ ಸಂಕಲ್ಪ ಹಾಗೂ ನಿಸ್ವಾರ್ಥತೆಯ ಕಾರ್ಯವನ್ನುನೀನು ಮಾಡುತ್ತಾ ಹೋಗು ನಿನ್ನೊಂದಿಗೆ ಜನವೂ ಬರ್ತಾರೆ ಹಣವೂ ಬರ್ತದೆ ಅಂತ” ಹೀಗೆ ಹೇಳಿದೆ ಮತ್ತು ಇದನ್ನು ಪ್ರಾಯೋಗಿಕವಾಗಿ ಮಾಡಿ ಪರೀಕ್ಷಿಸಲು ಇದೊಂದು ಸದವಕಾಶವೆಂದು ಭಾವಿಸಿ ಕೇವಲ ಮೊದಲ ಹತ್ತು ಶ್ರಮದಾನಗಳಿಗೆ ಮಠದಿಂದ ಸಹಕಾರ ನೀಡಿದರೆ ಸಾಕು ಅಂದಿದ್ದೆ. ಸರಿಯಾಗಿ ಹತ್ತನೇ ಶ್ರಮದಾನಕ್ಕೆ ಅಂದಿನ ಕೇಂದ್ರ ಪೆಟ್ರೋಲಿಯಂ ಸಚಿವರಾದ ಶ್ರೀ ಧಮೇರ್ಂದ್ರ ಪ್ರಧಾನ್ ಖುದ್ದಾಗಿ ಪೆÇೀನ್ ಮಾಡಿ ಬಂದು ಶ್ರಮದಾನದಲ್ಲಿ ಭಾಗವಹಿಸಿ ಸಂತೋಷಪಟ್ಟರು ಹಾಗೂ ಮುಂದೆ ನಡೆಯುವ ಎಲ್ಲ ಅಭಿಯಾನಗಳಿಗೆ ಎಂ ಆರ್ ಪಿ ಎಲ್ ಸಹಕಾರ ನೀಡುವುದೆಂದು ತಿಳಿಸಿದರು. ಇದು ಸ್ವಾಮಿ ವಿವೇಕಾನಂದರ ಮಾತನ್ನು ಪುಷ್ಟಿಗೊಳಿಸಿದ ಘಟನೆಯು ನನ್ನ ಜೀವನವನ್ನು ಧನ್ಯವನ್ನಾಗಿಸಿದೆ.
ಇಲ್ಲಿಯ ತನಕ ಶ್ರೀಮಠದಿಂದ ನೀಡಿದ ಜವಾಬ್ದಾರಿವನ್ನು ಶ್ರದ್ಧಾ ಭಕ್ತಿ ನಿಸ್ವಾರ್ಥತೆಯಿಂದ ಕೈಗೊಂಡು ಸೇವೆಯಲ್ಲಿಯೇ ಸಾರ್ಥಕತೆ ಎಂಬ ಮನೋಭಾವದಿಂದ ಮಾಡಲು ಪ್ರಯತ್ನಿಸಿದ್ದೇನೆ. ಇಂದಿನವರೆಗೂ ನಾನು ಕೈಗೊಂಡ ಯಾವುದೇ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಪಡೆಯಲು ಮನವಿ ಪತ್ರ ಮಾಡಿದ ನೆನಪಿಲ್ಲ. ಆದರೆ ಎಲ್ಲ ಯೋಜನೆಗಳಿಗೆ ಬೇಕಾದ ಹತ್ತಾರು ಕೋಟಿ ರೂಪಾಯಿಗಳ ಆರ್ಥಿಕ ಸಂಪನ್ಮೂಲ ತಾನೇ ತಾನಾಗಿ ಹರಿದು ಬಂದಿದೆ. ಆಶ್ರಮದ ಒಳಗೆ ಹಾಗೂ ಹೊರಗಿನ ಕಾರ್ಯಕ್ರಮಗಳ ಸಂಘಟನೆಯ ಜೊತೆಗೆ ಮಠದ ನೂತನ ಕಟ್ಟಡ ನಿರ್ಮಾಣ, ಈಗಿರುವ ಹಳೆಯ ಕಟ್ಟಡದ ನವೀಕರಣದ ಕಾರ್ಯಗಳ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸಿದ್ದು ನನ್ನ ಸುಯೋಗವೆಂದೇ ಭಾವಿಸುತ್ತೇನೆ.
ಇನ್ನು ಸ್ವಚ್ಛ ಭಾರತದ ಮುಂದುವರೆದ ಭಾಗವಾಗಿ ಮಂಗಳಾ ರಿಸೋರ್ಸ್ ಮೆನೆಜ್ ಮೇಂಟ್ ಎನ್ನುವ ಸ್ಟಾರ್ಟ್ ಅಪ್ ನನ್ನ ಪರಿಕಲ್ಪನೆಯಲ್ಲಿ ಬೆಳೆದ ಕೂಸು. ಕಸದ ವೈಜ್ಞಾನಿಕ ನಿರ್ವಹಣೆ, ಹಸಿರು ಉದ್ಯೋಗ ಸೃಷ್ಟಿ, ದೇಶದ ಸಂಪನ್ಮೂಲದ ಮರುಬಳಕೆ, ಪರಿಸರ ಸ್ನೇಹಿ ಪರಿಕರಗಳ ಬಳಕೆ, ಪರಿಸರ ಸಂರಕ್ಷಣೆ ಒಟ್ಟಾರೆ ದೇಶದ ಬಹು ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯವನ್ನು ಸಂಪನ್ಮೂಲವನ್ನಾಗಿಸುವ ಸಂಸ್ಥೆಯನ್ನು ಹುಟ್ಟು ಹಾಕಿರುವುದಕ್ಕೆ ಹೆಮ್ಮೆಯಿದೆ. ಇಂದು ಆ ಸಂಸ್ಥೆಯಲ್ಲಿ ನೇರವಾಗಿ 60 ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ. ಇತ್ತೀಚಿಗμÉ್ಟೀ ಅದಕ್ಕೊಂದು ಸುವ್ಯವಸ್ಥಿತ ಕಾಪೆರ್Çೀರೆಟ್ ಕಚೇರಿಯನ್ನು ನನ್ನ ಪರಿಕಲ್ಪನೆಯಲ್ಲಿ ರೂಪಿಸಿ ಉದ್ಘಾಟಿಸಲಾಗಿದೆ. ಮುಂದೆ ಇದೊಂದು ಮಂಗಳೂರಿಗರ ಹೆಮ್ಮೆಯ ಸಂಸ್ಥೆಯಾಗಬೇಕು ದೇಶಕ್ಕೆ ಮಾದರಿಯಾಗಬೇಕು ಎನ್ನುವ ಮಹಾದಾಸೆ ನನ್ನದು. ಅದರ ವ್ಯವಸ್ಥೆಗೆ ನಿರ್ದೇಶಕರನ್ನು ನಿಯೋಜಿಸಲಾಗಿದ್ದು ಅವರೆಲ್ಲ ಕಾರ್ಯವನ್ನು ಸುಸೂತ್ರವಾಗಿ ನಿರ್ವಹಿಸಲು ಶಕ್ತರಾಗಿದ್ದಾರೆ ಎಂದು ಭಾವಿಸುವೆ.
ಇನ್ನು ಸ್ವಚ್ಛ ಮಂಗಳೂರು ಫೌಂಡೇಶನ್ ಎಂಬ ಸಂಸ್ಥೆಯನ್ನು ಆಸಕ್ತ ಸ್ವಯಂಸೇವಕರ ಮೂಲಕ ರೂಪಿಸಲಾಗಿದೆ. ಆ ಸಂಸ್ಥೆಯ ಸ್ವಚ್ಛತಾ ಕಾರ್ಯಗಳು ಶ್ರಮದಾನಗಳು ಹಾಗೂ ಇನ್ನಿತರ ಸೇವಾ ಚಟುವಟಿಕೆಗಳು ನಡೆಯಲಿವೆ. ಹೀಗೆ ಇಂತಹ ಕಾರ್ಯಗಳನ್ನು ದೇವರು ನನ್ನ ಮೂಲಕ ಮಾಡಿಸಿಕೊಂಡ ಎನ್ನುವುದೇ ಜೀವನದ ಸಾರ್ಥಕತೆ.
2014ರಿಂದ ಆರಂಭಿಸಿಇಂದಿನವರೆಗೆ ಹಲವು ವರ್ಷಗಳಿಂದ ನನ್ನನ್ನು ಬೇರೆ ಬೇರೆ ಮಠಗಳಿಗೆ, ಸಂಸ್ಥಾನಗಳಿಗೆ, ಪೀಠಗಳಿಗೆ ಉತ್ತರಾಧಿಕಾರಿಯಾಗಿ ಪೀಠಾಧಿಪತಿಯಾಗಿ ಎಂದು ಹಿರಿಯ ಸನ್ಯಾಸಿಗಳಾದಿಯಾಗಿ ಅನೇಕ ಭಕ್ತವೃಂದ ನನ್ನಲ್ಲಿ ಅರಿಕೆ ಮಾಡಿಕೊಳ್ಳುತ್ತಿದ್ದರು. ಕಳೆದ ನಾಲ್ಕಾರು ತಿಂಗಳುಗಳವರೆಗೂ ನಾನು ಆ ಎಲ್ಲ ಅವಕಾಶಗಳನ್ನು ನಯವಾಗಿ ತಿರಸ್ಕರಿಸುತ್ತ ಬಂದಿದ್ದೆ. ಆದರೆ ಇವುಗಳು ಮತ್ತೆ ಮತ್ತೆ ಹುಡುಕಿ ಬರಲಾಗಿ ನನಗೆ ಮತ್ತೆ ಸ್ವಲ್ಪ ಈ ವಿಚಾರವಾಗಿ ನಮ್ಮ ಮಠದ ಅನೇಕ ನನಗಿಂತ ಹಿರಿಯ ಸನ್ಯಾಸಿಗಳ ಬಳಿ ಹಾಗೂ ನನ್ನ ಸಹೋದರ ಸನ್ಯಾಸಿಗಳ ಹತ್ತಿರ ಈ ವಿಚಾರ ವಿನಿಮಯ ಮಾಡಿಕೊಂಡು ಅವರ ಸಮ್ಮತಿಯೊಂದಿಗೆ ನಾನು ಹೊಸ ಪರಂಪರೆಗೆ ಹೋಗಲು ಮನಸ್ಸು ಮಾಡಿದ್ದೇನೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ಜಗದ್ಗುರು ಪೀಠಕ್ಕೆ ನಾನು ತೆರಳುತ್ತಿರುವೆ. ಈ ಹೊತ್ತಿನಲ್ಲಿ ರಾಮಕೃಷ್ಣ ಮಠದ ವ್ಯವಸ್ಥೆಯಿಂದ ನಿರ್ಗಮಿಸುವ ಹೊತ್ತಿನಲ್ಲಿ ಸಹಜವಾಗಿ ಒಂದಿಷ್ಟು ಜನರಿಗೆ ಬೇಸರವಾಗಬಹುದು. ಅದು ಸಹಜವೂ ಹೌದು. ಆದರೆ ಇದನ್ನು ಸಾಕಷ್ಟು ವಿಚಾರ ವಿನಿಮಯ ಮಾಡಿ ಚಿಂತನ ಮಂಥನ ನಡೆಸಿ ತೆಗೆದುಕೊಂಡಿರುವ ನನ್ನ ತೀರ್ಮಾನಕ್ಕೆ ತಾವು ಸಮ್ಮತಿ ಸೂಚಿಸಬೇಕು ಎಂದು ಆಶ್ರಮದ ಭಕ್ತರಲ್ಲಿ, ಸ್ವಚ್ಛ ಮಂಗಳೂರು ಕಾರ್ಯಕರ್ತರಲ್ಲಿ, ನನ್ನ ಹಿತೈಸಿಗಳಲ್ಲಿ ಹಾಗೂ ಮಂಗಳೂರಿನ ಸಮಸ್ತ ಜನತೆಯಲ್ಲಿ ವಿನಂತಿಮಾಡುವೆ. ಕಳೆದೆರಡು ಮೂರು ತಿಂಗಳಗಳು ನನ್ನ ಜೀವನದ ಬದಲಾವಣೆಯ ಪರ್ವಕಾಲದಲ್ಲಿ ನನ್ನೊಂದಿಗೆ ಗಟ್ಟಿಯಾಗಿ ನಿಂತು ಸಹಕರಿಸಿದ ಎಲ್ಲರಿಗೂ ನಾನು ಎಂದೆಂದಿಗೂ ಋಣಿ. ಹದಿನಾರು ವರ್ಷಗಳ ಕಾಲ ಮಂಗಳೂರು ಜನತೆ ನೀಡಿದ ಪ್ರೀತಿ ವಿಶ್ವಾಸ ಸ್ನೇಹ ಸಹಕಾರಗಳಿಗೆ ನಾನು ಚಿರಋಣಿಯಾಗಿರುವೆ.