Wednesday, January 22, 2025
ರಾಜ್ಯಸುದ್ದಿ

ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗ ಪೂಜೆಗೆ  ಹಸಿರು ನಿಶಾನೆ ತೋರಿದ ಕೋರ್ಟ್ ​: ಶನಿವಾರ ಶಿವರಾತ್ರಿಯಂದು ಪೂಜೆ | ” ಈ ಶಿವಲಿಂಗಕ್ಕೆ ಈ ಹಿಂದೆ ಕೆಲ ಮುಸ್ಲಿಮರು ಮೂತ್ರವಿಸರ್ಜನೆ ಮಾಡಿದ್ದರು” – ಕಹಳೆ ನ್ಯೂಸ್

ಆಳಂದ ಪಟ್ಟಣದಲ್ಲಿ ಲಾಡ್ಲೇ ಮಶಾಕ್ ದರ್ಗಾವಿದ್ದು, ಇದೇ ದರ್ಗಾ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗ ಕೂಡಾ ಇದೆ. ಈ ಶಿವಲಿಂಗಕ್ಕೆ ಈ ಹಿಂದೆ ಕೆಲ ಮುಸ್ಲಿಮರು ಮೂತ್ರವಿಸರ್ಜನೆ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆ ದರ್ಗಾದಲ್ಲಿ ಶಿವಲಿಂಗವಿದ್ದು, ಆ ಶಿವಲಿಂಗಕ್ಕೆ ಪೂಜೆ ಮಾಡುವ ವಿಚಾರವಾಗಿ ಹಿಂದೂ (Hindu) ಮತ್ತು ಮುಸ್ಲಿಮರ (Muslims) ಮಧ್ಯೆ ಕಳೆದ ವರ್ಷ ದೊಡ್ಡ ಘರ್ಷಣೆ ನಡೆದಿತ್ತು (Aland Shivalinga Controversy).

ಕೇಂದ್ರ ಸಚಿವರು, ಶಾಸಕರು, ಅಧಿಕಾರಿಗಳ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ಈ ಶಿವರಾತ್ರಿ ದಿನ (Shiv Ratri 2023) ಮತ್ತೆ ಪೂಜೆಗೆ ಹಿಂದೂಪರ ಸಂಘಟನೆಗಳ ಮುಖಂಡರು ಮುಂದಾಗಿದ್ದರು. ಇದೀಗ ನ್ಯಾಯಾಲಯವು ಪೂಜೆಗೆ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಶಿವಮಾಲೆ ಅಭಿಯಾನವನ್ನು ಹಿಂದೂಪರ ಸಂಘಟನೆಗಳ ಮುಖಂಡರು ಆರಂಭಿಸಿದ್ದಾರೆ.

ಹೋಮ, ಹವನದಲ್ಲಿ ನಿರತರಾಗಿರುವ ಸ್ವಾಮೀಜಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು.ಮತ್ತೊಂದಡೆ ಶಿವಮಾಲೆಯನ್ನು ಧರಿಸುತ್ತಿರುವ ಕಾರ್ಯಕರ್ತರು. ಇಂತಹದೊಂದು ದೃಶ್ಯ ಕಂಡುಬಂದಿದ್ದು ಕಲಬುರಗಿ ನಗರದ ರಾಮಮಂದಿರದಲ್ಲಿ. ಇಲ್ಲಿ ಶಿವಮಾಲೆ ಧರಿಸಿ, ವ್ರತವನ್ನು ಕೈಗೊಂಡಿರುವವರೆಲ್ಲಾ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು. ಶಿವಮಾಲೆಯನ್ನು ಧರಿಸಿರುವ ಇವರೆಲ್ಲ, ಇದೇ ಶನಿವಾರ ಫೆಬ್ರವರಿ 18 ರಂದು ತಮ್ಮ ವ್ರತವನ್ನು ಮುಗಿಸಲಿದ್ದಾರೆ. ಅಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಿ, ವ್ರತವನ್ನು ಮುಗಿಸಲಿದ್ದಾರೆ.

ಹೌದು ಆಳಂದ ಪಟ್ಟಣದಲ್ಲಿ ಲಾಡ್ಲೇ ಮಶಾಕ್ ದರ್ಗಾ ಇದ್ದು, ಇದೇ ದರ್ಗಾದ ಆವರಣದಲ್ಲಿ, ರಾಘವ ಚೈತನ್ಯ ಶಿವಲಿಂಗ ಕೂಡಾ ಇದೆ. ಈ ಶಿವಲಿಂಗಕ್ಕೆ ಈ ಹಿಂದೆ ಕೆಲ ಮುಸ್ಲಿಮರು ಮೂತ್ರವಿಸರ್ಜನೆ ಮಾಡಿದ್ದರು. ಹೀಗಾಗಿ ಶಿವಲಿಂಗವನ್ನು ನಾವು ಶುದ್ದಿಕರೀಸುತ್ತೇವೆ ಅಂತ ಹಿಂದೂಪರ ಸಂಘಟನೆಗಳು 2022 ರ ಶಿವರಾತ್ರಿ ದಿನ ಪೂಜೆಗೆ ಮುಂದಾಗಿದ್ದರು. ಆದ್ರೆ ದರ್ಗಾದೊಳಗೆ ಪೂಜೆಗೆ ಮುಸ್ಲಿಂ ಸಮಾಜದವರು ವಿರೋಧಿಸಿದ್ದರು.

ಕೊನೆಗೆ ಜಿಲ್ಲಾಡಳಿತ ಸಂಧಾನ ನಡೆಸಿ, ಕೆಲವೇ ಕೆಲವು ಜನರಿಗೆ ಪೂಜೆಗೆ ಅವಕಾಶ ನೀಡಿತ್ತು. ಆದ್ರೆ ಪೂಜೆಗೆ ಹೋಗಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಸ್ವಾಮೀಜಿಗಳು, ಜನಪ್ರತಿನಿಧಿಗಳು ಇದ್ದ ಕಾರುಗಳ ಮೇಲೆ ಮುಸ್ಲಿಂ ಸಮಾಜದ ಅನೇಕರು ಕಲ್ಲು ತೂರಾಟ ನಡೆಸಿದ್ದರು. ಲಾಡ್ಲೇ ಮಶಾಕ್ ದರ್ಗಾದ ಹೊರ ವಾತಾವರಣದಲ್ಲಿ ದೊಡ್ಡ ಮಟ್ಟದ ಘರ್ಷಣೆ ಉಂಟಾಗಿತ್ತು.

ಈ ಬಾರಿ ಕೂಡಾ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಮಾಡೋದಾಗಿ ಹಿಂದೂಪರ ಸಂಘಟನೆಗಳು ಹೇಳಿದ್ದವು. ಆಗ ಕೆಲ ಮುಸ್ಲಿಂ ಸಮಾಜದವರು, ಪೂಜೆಗೆ ಅವಕಾಶ ನೀಡಬಾರದು ಅಂತ ವಕ್ಫ್​​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶಿವರಾತ್ರಿ ದಿನವೇ ಮುಸ್ಲಿಂ ಸಮಾಜದವರ ಉರುಸ್ ಇದ್ದಿದ್ದರಿಂದ, ಪೂಜೆಗೆ ಅವಕಾಶ ನೀಡಬಾರದು ಅಂತ ಮನವಿ ಮಾಡಿದ್ದರು. ಇನ್ನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, 15 ಜನ ಹಿಂದೂ ಮುಖಂಡರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದೆ.

ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ 15 ಜನರು, ಮಧ್ಯಾಹ್ನ ಎರಡರಿಂದ ಆರು ಗಂಟೆಯೊಳಗೆ ಪೂಜೆಗೆ ಅವಕಾಶ ನೀಡಿರೋ ನ್ಯಾಯಾಲಯ, ಮುಂಜಾನೆ ಎಂಟರಿಂದ ಹನ್ನೆರಡವರಗೆ 15 ಮುಸ್ಲಿಂ ಮುಖಂಡರಿಗೆ, ದರ್ಗಾದಲ್ಲಿ ಉರುಸ್ ಗೆ ಅವಕಾಶ ನೀಡಿದೆ. ಆರು ಗಂಟೆ ನಂತರ, ಹಿಂದೂ ಮತ್ತು ಮುಸ್ಲಿಮರು ಯಾರೂ ಕೂಡಾ ದರ್ಗಾದೊಳಗೆ ಅಂದು ಇರಬಾರದು ಅಂತ ಆದೇಶ ನೀಡಿದೆ.

ಹೀಗಾಗಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಇಂದು ಶಿವಮಾಲೆ ವ್ರತವನ್ನು ಆರಂಭಿಸಿದ್ದಾರೆ. ಶಿವಲಿಂಗವನ್ನು ಜೀರ್ಣೋದ್ದಾರ ಮಾಡಬೇಕು, ಪ್ರತಿನಿತ್ಯ ಹಿಂದೂಗಳಿಗೆ ಅಲ್ಲಿ ನಿರಾಂತಕವಾಗಿ ಪೂಜೆಗೆ ಅವಕಾಶ ಸಿಗಬೇಕು ಅಂತ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ. ಇನ್ನು ಶಿವರಾತ್ರಿ ದಿನ, ಆಳಂದ ಪಟ್ಟಣದಲ್ಲಿ ಯಾವುದೇ ಘರ್ಷಣೆಯಾಗದಂತೆ ತಡೆಯಲು ಪೊಲೀಸರು ಎಲ್ಲಾ ಕ್ರಮಗಳನ್ನು ಆರಂಭಿಸಿದ್ದಾರೆ.

ಇದೀಗ ದರ್ಗಾದಲ್ಲಿ ಉರುಸು ಮತ್ತು ಪೂಜೆಗೆ ಎರಡಕ್ಕೂ ಕೂಡಾ ಅವಕಾಶ ನೀಡಲಾಗಿದೆ. ಹೀಗಾಗಿ ಹಿಂದೂ ಮತ್ತು ಮುಸ್ಲಿಮರು ಶಾಂತಿಗೆ ಭಂಗವನ್ನುಂಟು ಮಾಡುವ ಕೆಲಸಗಳಿಗೆ ಕೈಹಾಕದೇ, ಶಾಂತಿಯುತವಾಗಿ ತಮ್ಮ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ, ಕೋಮುಸಾಮರಸ್ಯವನ್ನು ಕಾಪಾಡುವ ಕೆಲಸ ಮಾಡಬೇಕಿದೆ.