Saturday, November 23, 2024
ಸುದ್ದಿ

ಫೆ.21 &22ರಂದು ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನ್ನಿಧ್ಯ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಕಲ್ಲೆಟ್ಟಿಯಲ್ಲಿ ಪ್ರತಿಷ್ಟೆ, ಕಲಶಾಧಿಗಳು

ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನ್ನಿಧ್ಯ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಕಲ್ಲೆಟ್ಟಿಯಲ್ಲಿ ಈಶಾನ್ಯ ಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ಸಾನ್ನಿಧ್ಯದ ಪ್ರತಿಷ್ಟೆ, ಕಲಶಾಧಿಗಳು ಇದೇ ಬರುವ ಫೆ.21ಮತ್ತು 22ರಂದು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಎಸ್ ಪೂಜಾರಿ ತಿಳಿಸಿದ್ದಾರೆ. ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ.21ರಂದು ಸಂಜೆ ಶ್ರೀ ಮಹಾಗುರು ಸಿದ್ಧಮರ್ದ ಬೈದ್ಯರ ವೇದಿಕೆಯಲ್ಲಿ ಧರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನ್ನಿಧ್ಯ ಹಾಗೂ ಆಶೀರ್ವಚನವನ್ನು ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಮಾಡಲಿದ್ದಾರೆ.

ದೀಪ್ರಪ್ರಜ್ವಲನೆಯನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಲಿದ್ದು, ಸಭಾಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧಿಶರಾದ ಮನೋಹರ್ ಮುಳಿಬೈಲು ಕುರಮಜಲುಗುತ್ತು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯವಾಧಿ ಮೋಹನ್ ಗೌಡ, ಚೌಟ ಇಂಡೇನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಜಗನ್ನಾಥ ಚೌಟ, ಮಾಜಿ ಶಾಸಕ ರುಕ್ಮಯ ಪೂಜಾರಿ, ಎಕ್ಸೆಲ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಾಧವ ಮಾವೆ, ನಿವೃತ್ತ ಮುಖ್ಯ ಶಿಕ್ಷಕ ಎನ್ ರಾಮಚಂದ್ರ ಮೂಲ್ಯ, ಶಿಕ್ಷಕಿ ಗೀತಾಕುಮಾರಿ, ಬರಿಮಾರು ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಕೆ ಪೂಜಾರಿ, ಭಾಗವಹಿಸಲಿದ್ದಾರೆ.

ಬಳಿಕ ತಂತ್ರಿಗಳ ಆಗಮನ, ಪ್ರಾರ್ಥನೆ, ಪ್ರಸಾದ ಪರಿಗ್ರಹ, ಪೀಠ ಪರಿಗ್ರಹ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಇನ್ನು ಫೆ.22ರಂದು ಬೆಳಗ್ಗೆ ಶ್ರೀ ಬಾಲಗಣಪತಿ ಹೋಮ, ಗುರುಪೀಠ-ಜಪದ ಪದ್ಮಕಲ್ಲು ಪ್ರತಿಷ್ಟೆ, ಕಲಶಾಭಿಷೇಕ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಪರ್ವ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಮತ್ತು ಬರಿಮಾರು ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 7ರಿಂದ ಶ್ರೀ ಆದಿ ಧೂಮಾವತಿ ದೇಯಿ ಬೈದಿತಿ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿ ಗೆಜ್ಜೆಗಿರಿ ಇವರಿಂದ ಯಕ್ಷಗಾನ ಬಯಲಾಟ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ನಡೆಯಲಿದೆ.