Thursday, January 23, 2025
ಸುದ್ದಿ

ಶ್ರೀಮಹಾದೇವ ಪಾರ್ವತಿ ಶ್ರೀಶಾಸ್ತಾರ ದೇವಸ್ಥಾನ ಉಬ್ರಂಗಳ ಕ್ಷೇತ್ರದಲ್ಲಿ ದೃಢಕಲಶ ಸಂಪನ್ನ –ಕಹಳೆ ನ್ಯೂಸ್

ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ದೃಢಕಲಶ ಇಂದು ನಡೆದಿದೆ. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಶ್ರೀದೇವರಿಗೆ ಕಲಶಾಭಿಷೇಕ ನೆರವೇರಿಸಿದ್ದು, ಶ್ರೀ ಧೂಮಾವತೀ ದೈವಕ್ಕೆ ತಂಬಿಲ, ಪರಶುರಾಮ ಸ್ವಾಮಿ, ಶಾಸ್ತಾರ, ಗಣಪತಿ, ಸುಬ್ರಹ್ಮಣ್ಯ, ಪಾರ್ವತೀ ದೇವರಿಗೂ ಕಲಶಾಭಿಷೇಕ ನಡೆಸಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಇನ್ನೂ ಕಾರ್ಯಕ್ರಮದಲ್ಲಿ ಊರಪರವೂರ ಭಕ್ತಾದಿಗಳು ್ಲ ಪಾಲ್ಗೊಂಡು ಕೃತಾರ್ಥರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು