Friday, January 24, 2025
ಸುದ್ದಿ

ಮಾ.13ರಂದು ಬೀಜಾಡಿ ಮೂಡು ಶಾಲಾ ಸಮೀಪದ ಕೆಳಬನದಲ್ಲಿ ನಡೆಯಲಿರುವ ಏಕಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಕುಂದಾಪುರ: ಕರಾವಳಿ ಭಾಗದ ಜನರಿಗೂ ಮತ್ತು ನಾಗದೇವರಿಗೂ ವಿಶೇಷವಾದ ನಂಟಿದೆ. ಕಣ್ಣಿಗೆ ಕಾಣುವ ಪ್ರತ್ಯೇಕ್ಷ ದೇವರೆಂದೇ ಖ್ಯಾತಿ ಪಡೆದ ನಾಗದೇವರ ಆರಾಧನೆಯಿಂದ ನಮ್ಮ ಆರೋಗ್ಯ, ನೆಮ್ಮದಿ, ಸುಖ-ಸಂಪತ್ತು ಪ್ರಾಪ್ತಿಯಾಗಲಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮತಿ ಜಾನಕಿ ಮತ್ತು ಶ್ರೀ ರಾಮಚಂದ್ರ ಹಾಗೂ ಸಹೋದರರು ಮತ್ತು ಕುಟುಂಬಿಕರ ನೇತೃತ್ವದಲ್ಲಿ ಮಾ.13ರಂದು ಬೀಜಾಡಿ ಮೀನುಗಾರಿಕಾ ರಸ್ತೆಯ ಮೂಡು ಶಾಲಾ ಸಮೀಪದ ಕೆಳಬನದಲ್ಲಿ ನಡೆಯಲಿರುವ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಅವರು ಪರುಶರಾಮ ಸ್ವಾಮಿ ಕೊಡಲಿಯನ್ನು ಏಸೆದು ಸಮುದ್ರರಾಜನಿಂದ ಈ ಭೂ ಪ್ರದೇಶವನ್ನು ಪಡೆದಿರುವ ಕರಾವಳಿ ಭಾಗವೆಲ್ಲವೂ ನಾಗನದೇವರ ಬನಗಳಿಂದ ಕೂಡಿದೆ. ಆ ನಾಗದೇವರ ಭೂಮಿಗಳನ್ನು ನಾವು ಇಂದು ಬಳಸಿಕೊಳ್ಳುತ್ತಿರುವುದರಿಂದ ಅವನ ಋಣ ತೀರಿಸುವ ಕೆಲಸಗಳನ್ನು ಇತಂಹ ಸೇವೆಗಳಿಂದ ಮಾಡಬಹುದು ಎಂದರು.

ವೇದಮೂರ್ತಿ ಮಧುಸೂಧನ ಬಾಯರಿ, ನಾಗಮಂಡಲೋತ್ಸವ ಸೇವಾಕರ್ತರಾದ ರಾಮಚಂದ್ರ, ಶಂಕರನಾರಾಯಣ ಗಾಣಿಗ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೊಡು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗವರ್ನರ್ ಪ್ರಭಾಕರ್ ಬಿ ಕುಂಭಾಸಿ, ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶೇಖರ ಚಾತ್ರಬೆಟ್ಟು, ಚಂದ್ರ ಬಿ.ಎನ್, ಗೋಪಾಡಿ ಗ್ರಾಮ ಪಂಚಾಯತ್ ಸದಸ್ಯೆ ನೇತ್ರಾವತಿ, ಹಿರಿಯರಾದ ರಾಮನಾಯ್ಕ್ ಬೀಜಾಡಿ, ಬಾಬಣ್ಣ ಪೂಜಾರಿ, ಸ್ಥಳೀಯ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೇವಾಕರ್ತರಾದ ಅನೂಪ್ ಕುಮಾರ್ ಬಿ.ಆರ್ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಅರವಿಂದ್ ಕೋಟೇಶ್ವರ ವಂದಿಸಿದರು.