Friday, January 24, 2025
ಸುದ್ದಿ

‘ಮಗಳನ್ನು ಕೊಂದ ಹಂತನಿಕೆ ಗಲ್ಲು ಶಿಕ್ಷೆ ವಿಧಿಸಿ’ ಸಾಹಿಲ್ ನಿಂದ ಕೊಲೆಯಾದ ನಿಕ್ಕಿ ಯಾದವ್ ಪೋಷಕರ ಆಗ್ರಹ – ಕಹಳೆ ನ್ಯೂಸ್

ನಮ್ಮ ಮಗಳನ್ನು ಕೊಂದ ಹಂತಕನನ್ನು ನೇಣಿಗೆ ಏರಿಸಬೇಕು ಎಂದು ದೆಹಲಿಯಲ್ಲಿ ತನ್ನ ಸ್ನೇಹಿತನಿಂದಲೇ ಹತ್ಯೆಗೀಡಾದ ಯುವತಿ ನಿಕ್ಕಿ ಯಾದವ್ ಪೋಷಕರು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿಕ್ಕಿ ಯಾದವ್‌ನನ್ನು ಆಕೆಯ ಸ್ನೇಹಿತ ಸಾಹಿಲ್ ಗೆಹಲೋತ್ ಎಂಬಾತ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ತನ್ನದೇ ಢಾಬಾದ ಫ್ರಿಡ್ಜ್ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ, ನಿಕ್ಕಿ ಪೋಷಕರು ಮಾತನಾಡಿ, ಮಗಳು ಹೋಗಿದ್ದಾಳೆ ಇನ್ನೂ ಆಕೆ ಮರಳಿ ಬರಲು ಸಾಧ್ಯವಿಲ್ಲ. ಆದರೆ ನಮ್ಮ ಮಗಳಿಗೆ ಆದ ಅನ್ಯಾಯಕ್ಕೆ ಸರಿಯಾದ ಶಿಕ್ಷೆ ಆರೋಪಿಗೆ ಆಗಬೇಕು. ನಮಗೆ ನ್ಯಾಯ ಸಿಗಬೇಕಾದರೆ ಆತನನ್ನು ಗಲ್ಲಿಗೇರಿಸಿ ನಮಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ನಿಕ್ಕಿ ಯಾದವ್ ಸ್ನೇಹಿತ ಸಾಹಿಲ್ ಬೇರೊಬ್ಬ ಯುವತಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದನ್ನು ಪ್ರಶ್ನಿಸಿದಕ್ಕೆ ಆತ ನಿಕ್ಕಿ ಯಾದವ್‌ಳ ಕುತ್ತಿಗೆಯನ್ನು ಡೇಟಾ ಕೇಬಲ್‌ನಲ್ಲಿ ಬಿಗಿದು ಹತ್ಯೆಗೈದಿದ್ದ. ಬಳಿಕ ಶವವನ್ನು ದೆಹಲಿಯಲ್ಲಿರುವ ತನ್ನದೇ ಢಾಬಾದ ಫ್ರಿಡ್ಜ್ನಲ್ಲಿ ಇಟ್ಟಿದ್ದ. ಕೊಲೆಯಾದ ನಾಲ್ಕು ದಿನಗಳ ಬಳಿಕ ಮೃತದೇಹವನ್ನು ಹೊರ ತೆಗೆಯಲಾಗಿತ್ತು. ಇದೀಗ ಆರೋಪಿ ಪೊಲೀಸರ ಬಂಧನದಲ್ಲಿದ್ದಾನೆ.