Thursday, January 23, 2025
ಸುದ್ದಿ

ಸಚಿವ ಕೋಟ ತಾಯಿಯನ್ನು ಭೇಟಿಯಾದ ಪ್ರಣವಾನಂದ ಶ್ರೀ : ಆರೋಗ್ಯ ವಿಚಾರಣೆ – ಕಹಳೆ ನ್ಯೂಸ್

ಕೋಟ : ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮನೆಗೆ ತೆರಳಿ ಸಚಿವರ ಮಾತೃಶ್ರೀಯವರ ಭೇಟಿ ಮಾಡಿದರು. ಈ ಸಂದರ್ಭ 94 ವರ್ಷದ ಸಚಿವರ ತಾಯಿ ಲಚ್ಚಿ ಪೂಜಾರಿ ಅವರ ಅರೋಗ್ಯವನ್ನು ವಿಚಾರಿಸಿ ಉಭಯ ಕುಶಲೋಪಚಾರಿ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾಜದ ಹೋರಾಟ ಸ್ಥಳಕ್ಕೆ ಆಗಮಿಸಿ ಕುಲಶಾಸ್ತ್ರ ಅಧ್ಯಯನ ಮತ್ತು ನಾರಾಯಣಗುರು ಅಭಿವೃದ್ಧಿ ನಿಗಮ ಮತ್ತು ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಸಚಿವರು ಪ್ರಯತ್ನಿಸಿದ್ದನ್ನು ಶ್ರೀಗಳು ತಾಯಿಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಮಂಗಳೂರು, ಉಡುಪಿ ಜಿಲ್ಲೆಯ ಸಮಾಜದ ಮುಖಂಡದ ಜಿತೇಂದ್ರ ಜೆ. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು