‘ಕೊನಸೀಮ ಚಿತ್ರಕಲಾ ಪರಿಷದ್ ಅಮಲಾಪುರಂ’ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ “ಆರ್ಟ್ ಲೆಜೆಂಡ್ ಗೋಲ್ಡನ್ ಮಯೂರಿ” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ “ಕುಂಚದ ಬೆಡಗಿ” ಅನುಪಮಾ –ಕಹಳೆ ನ್ಯೂಸ್
“ಕುಂಚದ ಬೆಡಗಿ” ಎಂದೇ ಗುರುತಿಸಲ್ಪಡುವ ಅನುಪಮಾ ಈ ಬಾರಿಯ ‘ಕೊನಸೀಮ ಚಿತ್ರಕಲಾ ಪರಿಷದ್ ಅಮಲಾಪುರಂ’ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಅವರು “ಆರ್ಟ್ ಲೆಜೆಂಡ್ ಗೋಲ್ಡನ್ ಮಯೂರಿ” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕಲಾ ಬೆಡಗಿ ಅನುಪಮಾ ಮೂಲತಃ ಗಡಿನಾಡಿನ ಕಾಟುಕುಕ್ಕೆಯ ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ.ಭಟ್ ಹಾಗೂ ಜಯಲಕ್ಮಿ÷್ಷÃ ದಂಪತಿಗಳ ಸುಪುತ್ರಿಯಾಗಿದ್ದು, ಪ್ರಸ್ತುತ ಈಕೆ ಬೆಂಗಳೂರು ವಾಸ್ತವ್ಯ ಹೂಡಿದ್ದಾರೆ.
ಬೆಂಗಳೂರಿನ ಬಿ.ಟಿ.ಎಮ್ ಲೇ ಔಟ್ನ ಸಮೀಪದ ಅನುಗ್ರಹ ಲೇ ಔಟ್ನ ಮನೆಯೊಂದರಲ್ಲಿ ವಾಸಿಸುತ್ತಿರುವ ಇವರ ಮನೆಯೇ ಒಂದು ಕಲಾಮಂದಿರದAತೆ ಸೃಷ್ಠಿಯಾಗಿದ್ದು, ಗೋಡೆಯ ತುಂಬಾ ಮ್ಯೂರಲ್ ಪೈಂಟಿAಗ್ನಿAದ ಆಧ್ಯಾತ್ಮಿಕ ಸಂವೇದನೆಯನ್ನು ಉಂಟುಮಾಡುತ್ತಾ ಆಧುನಿಕತೆಯ ಸ್ಪರ್ಶದೊಂದಿಗೆ ಇವು ನೋಡುಗರ ಮೈನವಿರೇಳಿಸುತ್ತದೆ. ಇದಲ್ಲದೆ ಪಾಟ್ ಪೈಂಟಿAಗ್ ಮತ್ತು ತೈಲವರ್ಣ ರಚನೆಯಲ್ಲೂ ಇವರು ಪರಿಣಿತೆ. ವಂಶವಾಹಿನಿಯಾಗಿ ಬಂದ ಕಲೆಯ ಪರಿಮಳದ ಜೊತೆಗೆ ತನ್ನ ಸಾಧನೆಯ ಮೆರುಗನ್ನು ಬೆರೆಸಿ “ಕುಂಚದ ಬೆಡಗಿ” ಎಂದು ಗುರುತಿಸಲ್ಪಟ್ಟ ಈಕೆ ಕಲಾ ಮಾತೆಯ ಮಗಳಾಗಿದ್ದಾಳೆ.
ಕಲಾವಿದೆಯಾದ ಅನುಪಮಾ ಈ ಬಾರಿಯ ಪ್ರತಿಷ್ಠಿತ ಕೊನಸೀಮ ಚಿತ್ರಕಲಾ ಪರಿಷದ್ ಅಮಲಾಪುರಂ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಅವರ ಕಲಾಕೃತಿಯು “ಆರ್ಟ್ ಲೆಜೆಂಡ್ ಗೋಲ್ಡನ್ ಮಯೂರಿ” ಪ್ರಶಸ್ತಿಗೆ ಭಾಜನವಾಗಿದೆ.
ಅವರ ಕಲೆಗೆ ಪ್ರಕೃತಿಯೇ ಸ್ಪೂರ್ತಿಯಾಗಿದ್ದು, ಅವರ ಚಿಂತನೆಯ ಸ್ವಾತಂತ್ರ‍್ಯ ಹಾಗೂ ಚಿತ್ರಕಲೆಯ ಬಗೆಗಿನ ಪ್ರೀತಿ, ಉತ್ಸಾಹ, ಅವರ ಸುಂದರ ಹಾಗಗೂ ದಿಟ್ಟವಾದ ಬಣ್ಣಗಳ ಚಿತ್ತಾರ ಕುಂಚದಲ್ಲಿ ಕಾಣಬಹುದಾಗಿದೆ.
ವಿಷಯ ಆಧಾರಿತ (ಥೀಮ್ ಬೇಸ್ಡ್) ಚಿತ್ರಕಲೆ ಮಾಡುವುದರಲ್ಲಿ ಅನುಪಮಾ ಪರಿಣಿತರು. ಇತ್ತೀಚೆಗೆ ಅವರ ಕಲಾಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಗುಲ್ಬರ್ಗ ಅಕಾಡೆಮಿ ಆಫ್ ಆರ್ಟ್ಕ , ಕಲ್ಚರ್ ಅಂಡ್ ಲಿಟರೇಚರ್ ಕೊಡಮಾಡುವ ಹತ್ತನೇ ರಾಷ್ಟ್ರಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅನುಪಮಾ ಶಿಕ್ಷಣ ಪಡೆಯುತ್ತಿರುವ ಸಂಧರ್ಭದಲ್ಲಿಯೇ ಚಿತ್ರ ರಚನೆಯಲ್ಲಿ ಹಲವಾರು ಬಹುಮಾನಗಳನ್ನು ಗಿಟ್ಟಿಸಿಕೊಂಡು, ಎಂ.ಕಾAನಲ್ಲಿ ಹತ್ತನೇಯ ರ‍್ಯಾಂಕ್ ಗಳಿಸಿದ್ರು.
ಗಣೇಶ್ ಪ್ರಸಾದ್ ಅವರ ಮಡದಿಯಾದ ನಂತರ ಮನದೊಡೆಯನ ಒತ್ತಾಸೆ ಅವರ ಪ್ರವೃತ್ತಿಗೆ ಗರಿಹುಟ್ಟಿಸಿ ಬಾನೆತ್ತರಕ್ಕೆ ಹಾರುವಂತೆ ಮಾಡಿತು. ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೂ ಸಹ ತನ್ನ ಕಲಿಕೆಯನ್ನು ಗುರುವಾದ ಶ್ರೀಮತಿ ಶೈಲಾ ಪ್ರಸಾದ್ , ಶ್ರೀ ಮುನಿಯಪ್ಪ ಪಿಲ್ಲಪ್ಪ ಮತ್ತು ಶ್ರೀ ಶಾಜಿ ಸುಬ್ರಮಣಿಯನ್ ಅವರಲ್ಲಿ ಮುಂದುವರಿಸಿದರು. ತನ್ನ ಕಲಾಕೃತಿಗಳಿಗೆ “ಅನುರೂಪಿಕಾ” ಎಂಬ ವಿಶಿಷ್ಟ ನಾಮಧೇಯವನ್ನು ಇರಿಸಿಕೊಂಡು ಅಲ್ಲೂ ಕೂಡ ಈಕೆ ಯಾರ ಅನುಕರಣೆ ಇಲ್ಲದೇ ತಮ್ಮತನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಪ್ರತಿಯೊಂದು ಚಿತ್ರವೂ ಆಧ್ಯಾತ್ಮಿಕ ಅರ್ಥ ಬರುವಂತಹ ದೃಶ್ಯಗಳನ್ನು ಕಲಾ ಆರಾಧಕರ ಮನ ಮುಟ್ಟುವಂತೆ ಚಿತ್ರಿಸುವುದು ಈಕೆಯ ವೈಶಿಷ್ಟ್ಯ. ಇಂತಹಾ ನೂರಾರು ಕೃತಿಗಳು ಈಗಾಗಲೇ ಕಲಾಜಗತ್ತಿಗೆ ಸಮರ್ಪಣೆಗೊಂಡಿವೆ. ಇದು ಒಂದು ಕ್ಷಣವೋ ಒಂದು ದಿನವೋ ಮಾಡಿ ಮುಗಿಸುವ ಕೆಲಸವಲ್ಲ.
ಈ ಕಲಾವಿದೆ ಕೈಯಲ್ಲಿ ನೋಡುಗನ ಕಣ್ಣಿಗೆ ರಸದೌತಣ ನೀಡುವ ಕಲಾ ಕೌತುಕವಾಗುತ್ತದೆ. ನಿಜ ಅರ್ಥದಲ್ಲಿ ಓರ್ವ ಪ್ರಕೃತಿ ಮಾತೆಯ ಮಡಿಲಿನ ಮಗುವಾಗಿ ಗೋಚರಿಸುವುದು ಶ್ಲಾಘನೀಯ ವಿಚಾರ. ಇವರ ಕಲಾಕೃತಿಯ ಪ್ರದರ್ಶನ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಡೆಗಳಲ್ಲಿ ನಡೆದಿದೆ.
ಇವರಿಗೆ ಪ್ರತಿಷ್ಠಿತ “ಪರಮೇಶ್ವರ ಪುಲಕೇಶಿ ಪ್ರಶಸ್ತಿ 2018” ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಬೆಂಗಳೂರು. “ಪೀಪಲ್ಸ್ ಆರ್ಟ ಫೌಂಡೇಶನ್” ನಡೆಸಿರುವ ರಾಷ್ಟ್ರ ಮಟ್ಟದ ಮಹಿಳಾ ಕಲಾ ಸ್ಪರ್ಧೆಯಲ್ಲಿ ಇವರ ಕಲಾಕೃತಿಗಳು ಶ್ರೇಷ್ಠ ದರ್ಜೆಯ ಗೌರವಕ್ಕೆ ಪಾತ್ರವಾಗಿದೆ. “ಕಲಾಸಿರಿ ಪ್ರಶಸ್ತಿ” ಸಾಹಿತ್ಯ ಸಂಭ್ರಮ 2018-19 ಪುತ್ತೂರು ಸಾಹಿತ್ಯ ವೇದಿಕೆ ಯಕ್ಷ ಮಿತ್ರ ಸಾಂಸ್ಕೃತಿಕ ಸಂಘ. “ಸ್ವರ್ಣಶ್ರೀ ಪ್ರಶಸ್ತಿ” 2018-19 ಲವ್ ಇಂಡಿಯಾ ರೀಜನಲ್ ಸಂಸ್ಥೆಯಿAದ ನೀಡಲಾಗಿದೆ. “ಗೌರವ ಪುರಸ್ಕಾರ” 2018-19 ವಿಶ್ವ ಧರ್ಮ ಮಂದಿರ ಸಂಸ್ಥೆ ನೀಡಿದ್ದು, “ಸಾಧಕಿಯರಿಗೆ ಸನ್ಮಾನ ಪ್ರಶಸ್ತಿ” 2018-19 ನವ ಬೆಂಗಳೂರು ಕ್ಲಬ್ ನೀಡಿದೆ. ಸಾಧಕ ಪ್ರಶಸ್ತಿ” 2018-19 ಇxiಜe ಉಡಿouಠಿ ನೀಡಿದೆ.
ಕೇರಳದ ಗಡಿಪ್ರದೇಶದ ಕನ್ನಡ ಜನರ ಕಾಸರಗೋಡಿನ ಕಾಟುಕುಕ್ಕೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳ ಈ ವಿಶಿಷ್ಠವಾದ ಸಾಧನೆ ಈ ಊರಿಗೆ ಒಂದು ಹೆಮ್ಮೆ ಮತ್ತು ತನ್ನೂರಿನ ಮುಂದಿನ ಪೀಳಿಗೆಗೆ ಒಂದು ಮಾದರಿ ಎಂದು ಗುರುತಿಸಿ ಕಾರ್ತಿಕೇಯ ಚಾರಿಟೆಬಲ್ ಟ್ರಸ್ಟ್ನ “ನಮ್ಮೂರ ಸಾಧಕಿ” ಗೌರವ ಸನ್ಮಾನ ನೀಡಿದೆ.
ನವ ಬೆಂಗಳೂರು ಕ್ಲಬ್ ವತಿಯಿಂದ “ಸಾಧಕಿಯರಿಗೆ ಸನ್ಮಾನ 2019 ” ಪ್ರಶಸ್ತಿಯನ್ನು ಕೊಟ್ಟು ವಿಶೇಷ ಗೌರವ ನೀಡಿದ್ದಾರೆ.
ಇದೀಗ ಈಕೆ ಮಕ್ಕಳಿಗಾಗಿಯೂ, ಹಿರಿಯರಿಗಾಗಿಯೂ ಚಿತ್ರಕಲಾಶಿಬಿರವನ್ನೂ ಕೂಡ ಬೆಂಗಳೂರಿನಲ್ಲಿ ಏರ್ಪಡಿಸುತ್ತಾ ತನ್ನ ಕಲೆಯ ಮೇಲಿನ ಅಭಿಮಾನವನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೆ. ಪತಿ ಗಣೇಶ ಪ್ರಸಾದ್ ಮತ್ತು ಪುತ್ರಿ ಆಕಾಂಕ್ಷಾಳ ಜೊತೆ ಸಂತೃಪ್ತ ಜೀವನ ನಡೆಸುತ್ತಾ ತಮ್ಮ ವಿಶಿಷ್ಟ ಸಾಧನೆಯನ್ನು ಮುಂದುವರಿಸಿದ್ದಾರೆ.