Thursday, January 23, 2025
ಸುದ್ದಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ ಕುಮಾರ್ ಬಹರೈನ್, ಅಂಬಲಪಾಡಿ ಇವರಿಗೆ ಫೆ 19 ರಂದು ನಡೆಯಲಿದೆ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ –ಕಹಳೆ ನ್ಯೂಸ್

ಸಾಗರದಾಚೆ ಅರಬ್ ದೇಶದಲ್ಲಿ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯ ಕಂಪನ್ನು ಪಸರಿಸಿ ಮೇಳೈಸಿರುವ ಉಡುಪಿ – ಅಂಬಲಪಾಡಿಯ ರಾಜ್ ಕುಮಾರ್ ಬಹರೈನ್ ಇವರಿಗೆ ಪ್ರಸಕ್ತ 2022ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಒಲಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ‘ರಾಜಾಭಿನಂದನಾ ಸಮಿತಿ ಉಡುಪಿ’ ಇದರ ನೇತೃತ್ವದಲ್ಲಿ ಸಾರ್ವಜನಿಕ ಸನ್ಮಾನ “ರಾಜಾಭಿನಂದನೆ” ಕಾರ್ಯಕ್ರಮವು ಫೆ.19 ರಂದು ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿದೆ.

ರಾಜ್ ಕುಮಾರ್ ಮೂಲತಃ ಉಡುಪಿ ಜಿಲ್ಲೆಯ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ನಿವಾಸಿಯಾಗಿದ್ದಾರೆ.

ಇವರು ಬಿಲ್ಲವ ಸಮಾಜದ ಓರ್ವ ಯಶಸ್ವಿ ಉದ್ಯಮಿಯಾಗಿ ದೂರದ ಬಹರೈನ್‌ನಲ್ಲಿ ನೆಲೆಸಿದ್ದರೂ ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು, ಹುಟ್ಟೂರಿನಲ್ಲೂ ಅನೇಕ ಸಂಘ-ಸAಸ್ಥೆಗಳ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.

ಉಡುಪಿಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿರುವ ಇವರು ಮಾಜಿ ಶಾಸಕ ದಿ|ದಾಮೋದರ್ ಅರ್. ಸುವರ್ಣ ಮುಲ್ಕಿ ಇವರ ಸುಪುತ್ರಿಯಾದ, ಡಾ| ಚೇತನಾ ಇವರನ್ನು ಮದುವೆಯಾಗಿದ್ದಾರೆ. ಪ್ರಸ್ತುತ ಇವರು ಪತ್ನಿ ಹಾಗೂ ಮಗಳು ಆರ್ಯ ರಾಜ್ ಕುಮಾರ್ ಇವರೊಂದಿಗೆ ಬಹರೈನ್‌ನಲ್ಲಿ ನೆಲೆಸಿ, ತನ್ನ ಉದ್ಯಮದೊಂದಿಗೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೊತೆಗೆ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ಅರಬ್ ರಾಷ್ಟ್ರದಲ್ಲಿ ಪಸರಿಸಲು ಪ್ರಯತ್ನಿಸುತ್ತಿದ್ದಾರೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದ ಸಾಧಕರಾಗಿ ವಿಶಿಷ್ಟ ಸಾಧನೆಗೈದಿರುವ ರಾಜ್ ಕುಮಾರ್ ರವರು ಬಹರೈನ್ ಕನ್ನಡ ಸಂಘದಲ್ಲಿ 10 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2 ಬಾರಿ ‘ವಿಶ್ವ ಕನ್ನಡ ಸಮ್ಮೇಳನ’ವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ತಾಯ್ನಾಡಿನಿಂದ ವಿವಿಧ ಕಲಾವಿದರನ್ನು ಕರೆಸಿ, ಬಹರೈನ್‌ನಲ್ಲಿ ಕನ್ನಡ ಸಂಸ್ಕೃತಿಯ ವೈಭವದ ಸೊಬಗನ್ನು ಅನಾವರಣಗೈದ ಖ್ಯಾತಿ ಇವರಿಗೆ ಸಲ್ಲುತ್ತದೆ. ‘ಆಳ್ವಾಸ್ ವಿಶ್ವ ನುಡಿಸಿರಿ’ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ಆಯೋಜಿಸಿರುತ್ತಾರೆ.

ಬಹರೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತರಗತಿಯ ಜೊತೆಗೆ ಕನ್ನಡ ಕಲಿಕೆ ತರಗತಿಯನ್ನು ಪ್ರಾರಂಭಿಸಿರುವ ರಾಜ್‌ಕುಮಾರ್‌ರವರು ಅರಬ್ ರಾಷ್ಟ್ರದಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಸರಕಾರದಿಂದ ರೂ.2 ಕೋಟಿ ಅನುದಾನವನ್ನು ಮಂಜೂರು ಮಾಡಿಸಿ, ತನ್ನ ಅಧ್ಯಕ್ಷೀಯ ಅವಧಿಯಲ್ಲಿ ರೂ.1 ಕೋಟಿ ಮೊತ್ತವನ್ನು ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಚಿತ್ರ ರಂಗದ ಮಿನುಗು ತಾರೆಯರಾದ ಕೀರ್ತಿಶೇಷ ಡಾ| ಪುನೀತ್ ರಾಜ್ ಕುಮಾರ್ ಹಾಗೂ ಡಾ| ಶಿವರಾಜ್ ಕುಮಾರ್ ಇವರನ್ನು ಬಹರೈನ್ ಕನ್ನಡ ಸಂಘಕ್ಕೆ ಕರೆಸಿರುವುದು ಗತ ಇತಿಹಾಸ. ಅಲ್ಲದೆ ಕೀರ್ತಿಶೇಷ ಡಾ| ಪುನೀತ್ ರಾಜ್ ಕುಮಾರ್ ರವರ ಸವಿನೆನಪಿಗಾಗಿ ‘ಪುನೀತ್ ಗಾನ ನಮನ’ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.

ತನ್ನ ಸಾಧನೆಯ ಮಜಲಲ್ಲಿ ರಾಜ್ ಕುಮಾರ್ ರವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುವೈಟ್ ನಲ್ಲಿ ‘ವಿಶ್ವಮಾನ್ಯರು’ ಪ್ರಶಸ್ತಿ, ಬೆಂಗಳೂರಿನಲ್ಲಿ ‘ಸಾಧನ ಚೈತ್ರ’ ಪ್ರಶಸ್ತಿ, ಸಿಂಗಪೂರ್‌ನಲ್ಲಿ ‘ಕುವೆಂಪು’ ಪ್ರಶಸ್ತಿ, ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’, ‘ಅಭಿಮಾನಿ ಕನ್ನಡಿಗ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಮೇರಿಕಾದ ‘ಅಕ್ಕ ಸಮ್ಮೇಳನ’ದಲ್ಲಿ ಸನ್ಮಾನಗೊಂಡಿರುವ ಶ್ರೀಯುತರು ಮುಂಬೈ ಬಂಟರ ಸಂಘ ಹಾಗೂ ದೆಹಲಿ ಕನ್ನಡ ಸಂಘದಿAದಲೂ ಪುರಸ್ಕೃತಗೊಂಡಿದ್ದಾರೆ. ಕÀನ್ನಡಾಭಿಮಾನದ ಜೊತೆಗೆ ಬಿಲ್ಲವ ಸಮಾಜದ ಸಂಘಟನೆಗೆ ಒತ್ತು ನೀಡಿದ್ದಾರೆ. 2003ರಲ್ಲಿ ‘ಬಹರೈನ್ ಶ್ರೀ ಗುರು ಸೇವಾ ಸಮಿತಿ’ಯನ್ನು ಸ್ಥಾಪಿಸಿ ನಂತರ ‘ಬಹರೈನ್ ಬಿಲ್ಲವಾಸ್’ ಇದರ ಸ್ಥಾಪಕರಾಗಿ 4 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಮೆ ಇವರದ್ದಾಗಿದೆ.

ಕನ್ನಡ, ತುಳು ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಯ ಜೊತೆಗೆ ಬಹರೈನ್ ನ ಸಿ.ಸಿ.ಐ.ಎ. (Co-Ordination Committee of Indian Associations) ಇದರ ಸದಸ್ಯರಾಗಿದ್ದಾರೆ. ಅಸಹಾಯಕ ಭಾರತೀಯರಿಗೆ ಸಕಾಲದಲ್ಲಿ ಸೂಕ್ತವಾಗಿ ಸ್ಪಂದಿಸುವ ನೆಲೆಯಲ್ಲಿ ಬಾರತೀಯ ರಾಯಭಾರಿ ಕಛೇರಿ ಆಶ್ರಯದ ಐ.ಸಿ.ಆರ್.ಎಫ್. (Indian Community Relief Fund) ಇದರ ಸಕ್ರಿಯ ಸದಸ್ಯರಾಗಿ ನಿಸ್ವಾರ್ಥ ಸೇವೆಗೈಯುತ್ತಿದ್ದಾರೆ. ಕೊಡುಗೈ ಧಾನಿಯಾಗಿರುವ ರಾಜ್ ಕುಮಾರ್ ರವರು ಅನೇಕ ಸಂಘ-ಸAಸ್ಥೆಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.