Monday, January 27, 2025
ಸುದ್ದಿ

ಮೊಟ್ಟೆಗಿಂತ ಸಂಪ್ರದಾಯವೇ ಮೇಲು ಎಂದು 25 ಲಕ್ಷ ಬಿಟ್ಟು, ಮಾಸ್ಟರ್ ಶೆಫ್‌ ರಿಯಾಲಿಟಿ ಶೋನಿಂದ ಹೊರ ನಡೆದ ಅರುಣಾ ವಿಜಯ್ ಜೈನ್..! ಸಾಮಾಜಿಕ ಜಾಲತಾಣದಲ್ಲಿ ಅರುಣಾ ನಡೆಗೆ ಮುಕ್ತಕಂಠದ ಶ್ಲಾಘನೆ – ಕಹಳೆ ನ್ಯೂಸ್

ಜೀವನದಲ್ಲಿ ಯಶಸ್ಸಿಗಾಗಿ ತಮ್ಮ ನೈತಿಕತೆ, ಆದರ್ಶ, ಸಂಪ್ರದಾಯವನ್ನು ಬದಿಗೊತ್ತಿ ಗುರಿ ಸಾಧಿಸಲು ಅನೇಕರು ಮುಂದೆ ಸಾಗುತ್ತಾರೆ. ಆದ್ರೆ ಇನ್ನು ಕೆಲವರು ಯಶಸ್ಸು ಮುಂದೆ ತಮ್ಮ ಆದರ್ಶ , ಸಂಪ್ರದಾಯವೇ ಮುಖ್ಯ ಎಂದು ಎಲ್ಲವನ್ನು ಬಿಟ್ಟುಬಿಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಹಿಳೆಯು ತನ್ನ ಯಶಸ್ಸಿಕ್ಕಿಂತ ಆದರ್ಶ, ಮೌಲ್ಯ, ಸಂಪ್ರದಾಯವೇ ಮೇಲೆಂದು ಬಗೆದು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ.

ಹೌದು. ಇವರು ಒಂದು ಮೊಟ್ಟೆಗಾಗಿ 25 ಲಕ್ಷ ರೂಪಾಯಿ ತಿರಸ್ಕರಿಸಿದ್ದಾರೆ. ಅಂದಹಾಗೆ ಇವರ ಹೆಸರು ಅರುಣಾ ವಿಜಯ್ (Aruna Vijay. ತಮಿಳುನಾಡಿನ ಈ ಮಹಿಳೆ ಜೈನ ಧರ್ಮಕ್ಕೆ (Jain) ಸೇರಿದವರು. ಇವರು ಅಡುಗೆಯಲ್ಲಿ ಪರಿಣತರು (Shef). ಹಾಗಾಗಿ ಸೋನಿ ಟಿವಿಯ ಮುಂಬರುವ ರಿಯಾಲಿಟಿ ಶೋ ‘ಮಾಸ್ಟರ್‌ಚೆಫ್ ಇಂಡಿಯಾ’ದಲ್ಲಿ ಭಾಗವಹಿಸಿದ್ದರು. ಈ ರಿಯಾಲಿಟಿ ಶೋಗಾಗಿ ದೇಶದ ಅನೇಕ ಜನರು ಭಾಗವಹಿಸಲು ಕಾಯುತ್ತಿರುತ್ತಾರೆ. ದೇಶದ ಅನೇಕರು ಮಾಸ್ಟರ್ ಚೆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಮತ್ತು ಈ ರಿಯಾಲಿಟಿ ಶೋನಲ್ಲಿ ವಿವಿಧ ಭಕ್ಷ್ಯಗಳನ್ನು ಮಾಡುವ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಅತ್ಯುತ್ತಮ ಬಾಣಸಿಗರಿಗೂ ಬಹುಮಾನ ನೀಡಲಾಗುತ್ತದೆ.

ಇಲ್ಲಿ ರಿಯಾಲಿಟಿ ಶೋನ ತೀರ್ಪುಗಾರರು ಯಾವ ಖಾದ್ಯ ಮಾಡಬೇಕೆಂದು ನಿರ್ಧರಿಸುತ್ತಾರೆ. ಆ ಖಾದ್ಯವನ್ನು ಬಾಣಸಿಗರು ಮಾಡಿ ತೋರಿಸಬೇಕು. ಹಾಗೆಯೇ ಅರುಣಾ ವಿಜಯ್ ಅವರಿಗೂ ಹಲವಾರು ತೆರನಾದ ಖಾದ್ಯಗಳನ್ನು ಮಾಡಲು ಹೇಳಲಾಗಿತ್ತು. ಎಲ್ಲವನ್ನೂ ಸಲೀಸಾಗಿ ಮಾಡಿ ತೋರಿಸಿದರು ಅರುಣಾ.

ಇನ್ನು ಅಂತಿಮ 25 ಲಕ್ಷ ರೂಪಾಯಿ ಗೆಲ್ಲಲು ಒಂದು ಅಡುಗೆ ಮಾಡಲು ಹೇಳಿದ್ದರು. ಆದ್ರೆ ಆ ಟಾಸ್ಕ್​ (Task) ಮಾಡಲು ಅರುಣಾ ನಿರಾಕರಿಸಿದರು. ಯಾಕೆಂದರೆ ಅಲ್ಲಿ ಅವರಿಗೆ ಮೊಟ್ಟೆಯನ್ನು ಬೇಯಿಸಲು ಹೇಳಲಾಗಿತ್ತು. ಆದ್ರೆ ಅರುಣಾ ಅವರು ಜೈನ ಧರ್ಮದ ಮಹಿಳೆಯಾಗಿರುವ ಕಾರಣ ಇದು ಸರಿ ಹೊಂದಲಿಲ್ಲ. ತಾವು ಮೊಟ್ಟೆ ಬೇಯಿಸಲು ಸಾಧ್ಯವೇ ಇಲ್ಲ ಎಂದರು.

ಆದ್ರೂ ನೀವು ತಿನ್ನುವುದು ಬೇಡ, ಕೇವಲ ಬೇಯಿಸಿ ಮುಂದಿನ ಹಂತಕ್ಕೆ ಹೋಗಬಹುದು ಎಂದು ತೀರ್ಪುಗಾರರು ಹೇಳಿದರು. ಆದರೆ ಮೊಟ್ಟೆಗಿಂತ ತಮ್ಮ ಮೌಲ್ಯಗಳು ಮತ್ತು ಸಂಪ್ರದಾಯಗಳೇ ಮೇಲು. ಅವುಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅರುಣಾ ವಿಜಯ್, ಆ ಶೋ ಬಿಟ್ಟು ಹೊರಕ್ಕೆ ನಡೆದರು.

ಈ ಕುರಿತು ಅವರು ಟ್ವೀಟರ್​ ಖಾತೆಯಲ್ಲಿ ಅದನ್ನು ಬರೆದುಕೊಂಡರು. ‘ನಾನು ಮೊಟ್ಟೆಗಾಗಿ ಕಾರ್ಯಕ್ರಮದಿಂದ ಹೊರಕ್ಕೆ ಬಂದೆ. ನಿಮ್ಮ ತತ್ವಗಳನ್ನು ಬಿಟ್ಟು ಯಶಸ್ಸಿನ ಹಿಂದೆ ಓಡಬೇಡಿ. ನಿಮ್ಮ ಮೌಲ್ಯಗಳನ್ನು ಗೌರವಿಸುವ ಮೂಲಕ ಯಶಸ್ಸು ನಿಮ್ಮನ್ನು ಅನುಸರಿಸಲಿ. ನಿಮ್ಮ ಮೌಲ್ಯಗಳು ನಿಮ್ಮನ್ನು ವಿಜೇತರನ್ನಾಗಿ ಮಾಡುತ್ತವೆ ಎಂದು ಬರೆದುಕೊಂಡರು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಅರುಣಾ ಅವರ ನಡೆಯನ್ನು ಎಲ್ಲರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.