Sunday, January 19, 2025
ಸುದ್ದಿ

38 ದಿನಗಳ ಕಾಲ ಬಿಗಿ ಭದ್ರತೆಯಲ್ಲಿದ್ದ ಶಿರೂರು ಮೂಲಮಠವನ್ನು ಬಿಟ್ಟುಕೊಟ್ಟ ಪೊಲೀಸರು – ಕಹಳೆ ನ್ಯೂಸ್

ಉಡುಪಿ, ಆ 28 : ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಧನದ ನಂತರ ಪೊಲೀಸ್ ವಶದಲ್ಲಿದ್ದ ಶಿರೂರು ಮೂಲಮಠಕ್ಕೆ 38 ದಿನಗಳ ಬಳಿಕ ಪೊಲೀಸ್ ವಶದಿಂದ ಮುಕ್ತಿ ದೊರಕಿದೆ.

ಹಿಡಿಯಡ್ಕದಲ್ಲಿರುವ ಶಿರೂರು ಮೂಲಮಠವನ್ನು ಆ 27 ರ ಸೋಮವಾರ ಪೊಲೀಸರು ಮಠದ ದ್ವಂದ ಮಠವಾದ ಸೋದೆ ಮಠದ ಸುಪರ್ದಿಗೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಶಿರೂರು ಲಕ್ಷ್ಮೀವರ ತೀರ್ಥರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲಮಠವನ್ನು ಸೋದೆ ಮಠಕ್ಕೆ 38 ದಿನಗಳ ಬಳಿಕ ಬಿಟ್ಟುಕೊಡಲಾಗಿದೆ’ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಪೊಲೀಸರು ತನಿಖೆ ಸಂದರ್ಭ ವಶಕ್ಕೆ ತೆಗೆದುಕೊಂಡಿದ್ದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ವಿಶ್ರಮಿಸುತ್ತಿದ್ದ ಖಾಸಗಿ ಕೋಣೆ, ಅಡುಗೆ ಕೋಣೆ, ಮಠದ ಕಚೇರಿ, ಸ್ಟೋರ್ ರೂಂ, ಸೇರಿದಂತೆ 5 ಕೊಠಡಿಗಳ ಬೀಗದ ಕೀಯನ್ನು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸುಬ್ರಹ್ಮಣ್ಯ ಭಟ್ ಅವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮಠವನ್ನು ಬಿಟ್ಟುಕೊಟ್ಟಿರುವ ಹಿನ್ನಲೆಯಲ್ಲಿ ಶಿರೂರು ಮಠದ ಸಂಪ್ರದಾಯದಂತೆ ಪೂಜೆಗಳು ನಡೆಯಲಿದ್ದು ಈ ಹಿಂದಿನಂತೆಯೇ ಮಠವು ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಸೋದೆ ಮಠದ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು