ಮೆಲ್ಕಾರ್‌ನಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ ಅಂಗಡಿಗಳನ್ನು ತೆರವು ಮಾಡುವಂತೆ ಉಚ್ಚ ನ್ಯಾಯಾಲಯ ಆದೇಶ – ಕಹಳೆ ನ್ಯೂಸ್
ಬಂಟ್ವಾಳ: ಮೆಲ್ಕಾರ್- ಉಳ್ಳಾಲ ರಸ್ತೆಯಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ವ್ಯಕ್ತಿಯೋರ್ವ ನಿರ್ಮಿಸಿದ್ದು, ಇದನ್ನು ತೆರವುಗೊಳಿಸುವಂತೆ ಮಾಡಿದ ಹೋರಾಟಕ್ಕೆ ಕೊನೆಗೂ ಮುಕ್ತಿ ಸಿಕ್ಕಿತಾ?
ಮೆಲ್ಕಾರ್ ನಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ ಅಂಗಡಿಗಳನ್ನು ತೆರವು ಮಾಡುವಂತೆ ಖಾಲಿದ್ ಮೆಲ್ಕಾರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ಉಚ್ಚ ನ್ಯಾಯಾಲಯ ಅದೇಶ ಮಾಡಿದ್ದು, ವಾರದೊಳಗೆ ತೆರವು ಮಾಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದೆ.
ಉಚ್ಚ ನ್ಯಾಯಾಲಯದ್ದ ರಿಟ್ ಪಿಟಿಷನ್ ಸಂಖ್ಯೆ: W.P No 7003/2022 C/WW.P No5340/2022 ರಂತೆ ಹೊರಡಿಸಿರುವ ಆದೇಶವನ್ನು ಪಾಲಿಸಿ ಬಂಟ್ವಾಳ ತಾಲೂಕು, ಪಾಣೆಮಂಗಳೂರು ಗ್ರಾಮದ ಮೆಲ್ಕಾರು ಎಂಬಲ್ಲಿರುವ ಸ.ನಂ 58 ಮತ್ತು 59 ರ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸ್ಥಾಪಿಸಿರುವ ಅಂಗಡಿ ಕಟ್ಟಡಗಳನ್ನು 7 ದಿನದೊಳಗಾಗಿ ತೆರವುಗೊಳಿಸಲು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಬಂಟ್ವಾಳ ಮತ್ತು ಮುಖಾಧಿಕಾರಿ, ಬಂಟ್ವಾಳ ಪುರಸಭೆ ರವರಿಗೆ ಆದೇಶಿಸಿದೆ.