ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಖಾಸಗಿ ಫೋಟೋ ವೈರಲ್..? : ತೆರೆಮರೆಯ ಸಮರಕ್ಕೆ ಐಪಿಎಸ್ ಅಧಿಕಾರಿ ಡಿ.ರೂಪಾ ರೋಚಕ ಟ್ವಿಸ್ಟ್..! – ಕಹಳೆ ನ್ಯೂಸ್
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಮರ ಸಾರಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ರೋಚಕ ಟ್ವಿಸ್ಟ್ ಕೊಟ್ಟಿದ್ದಾರೆ. ‘ಈ ರೀತಿಯ ಪಿಕ್ಚರ್ಸ್ ನಾರ್ಮಲ್ ಅನ್ನಿಸಬಹುದು’ ಎಂದು ಸುದೀರ್ಘವಾಗಿ ಬರೆದುಕೊಂಡು ರೋಹಿಣಿ ಸಿಂಧೂರಿ ಅವರದ್ದು ಎನ್ನಲಾದ ಆಕ್ಷೇಪಾರ್ಹ ಫೋಟೋಗಳನ್ನ ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಹಂಚಿಕೊAಡಿದ್ದಾರೆ.
ಈ ರೀತಿಯ ಪಿಕ್ಚರ್ಸ್ ನಾರ್ಮಲ್ ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಚಿತ್ರಗಳು ಒಂದಾದ ಮೇಲೆ ಒಂದರAತೆ ಕಳಿಸ್ತಾರೆ ಅಂದ್ರೆ ಏನರ್ಥ? ಇದು ಆಕೆಯ ಖಾಸಗಿ ವಿಚಾರ ಆಗುವುದಿಲ್ಲ. ಐಎಎಸ್ ಸೇವಾ ನಿಯಮಗಳ ಪ್ರಕಾರ ಅಪರಾಧ. ಈ ಚಿತ್ರಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ ತನಿಖೆ ಮಾಡಬಹುದು. ಸಲೂನ್ ಹೇರ್ಕಟ್, ಹೇರ್ಕಟ್ ಫೋಟೋ, ತಲೆದಿಂಬು ಇತ್ತು ಮಲಗಿ ತೆಗೆದಿರುವ ಚಿತ್ರ. ಇವುಗಳು ಕೆಲವರಿಗೆ ಸಾಮಾನ್ಯ ಅನ್ನಿಸಬಹುದು. ಕಳಿಸಿರುವ ಸನ್ನಿವೇಶ ಮಾತನಾಡುವಂತೆ ಮಾಡಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಫೋಟೋಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ ತನಿಖೆ ಮಾಡಬಹುದು ಎಂದು ರೂಪಾ ಸವಾಲು ಹಾಕಿದ್ದಾರೆ.