Tuesday, January 21, 2025
ಸುದ್ದಿ

ಬಂಟ್ವಾಳ ತಾಲೂಕು ಆಡಳಿತ ಆಚರಣೆ ಸಮಿತಿ ವತಿಯಿಂದ ಸರ್ವಜ್ಞ ಜಯಂತಿ ಆಚರಣೆ –ಕಹಳೆ ನ್ಯೂಸ್

ಬಂಟ್ವಾಳ: ಸಮಾಜದಲ್ಲಿದ್ದ ಪಿಡುಗುಗಳನ್ನು ಹೋಗಲಾಡಿಸಿ, ಸುಧಾರಣೆಯನ್ನು ತಂದಿರುವ ಮಹಾನ್ ವ್ಯಕ್ತಿಯ ನೆನಪಿಗಾಗಿ ಸರ್ವಜ್ಞ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದು ನ್ಯಾಯವಾದಿ ಸುರೇಶ್ ಕುಲಾಲ್ ನಾವೂರ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ತಾಲೂಕು ಆಡಳಿತ ಆಚರಣೆ ಸಮಿತಿ ವತಿಯಿಂದ ನಡೆದ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾನತೆಯನ್ನು ತರವ ಮೂಲಕ ಸಾಮಾಜಿಕ ಬದುಕಿಗೆ ನ್ಯಾಯವನ್ನು ಒದಗಿಸಿ ಬದಲಾವಣೆಗೆ ಮೂಲಪ್ರೇರಣೆಯಾದ ಶಕ್ತಿಯಾಗಿ ಸರ್ವಜ್ಞ ಗುರುತಿಸಿಕೊಂಡಿದ್ದರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಹಶಿಲ್ದಾರ್ ಕೆ.ಎಸ್ ದಯಾನಂದ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಜಿ.ಪಂ.ಸದಸ್ಯ ಎಂ.ತುAಗಪ್ಪ ಬಂಗೇರ ಕಾಟಾಚಾರಕ್ಕೆ ನಡೆಯುವ ಜಯಂತಿ ಆಚರಣೆಗಳ ಕ್ರಮ ಸರಿಯಲ್ಲ,ಸರ್ವಜ್ಞರಂತಹ ಮಹಾನ್ ವ್ಯಕ್ತಿಗಳ ಆಚರಣೆ ಮಾಡುವಾಗ ಸರ್ವರ ಪಾಲ್ಗೊಳ್ಳುವಿಕೆ ಅಗತ್ಯವಿದೆ ಅ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.