Monday, January 20, 2025
ಸುದ್ದಿ

ವಿಭಿನ್ನ ಕಥಾ ಹಂದರವಿರುವ ‘ಮಿಡಿತ’ ಕನ್ನಡ ಕಿರುಚಿತ್ರದ ಮುಹೂರ್ತ –ಕಹಳೆ ನ್ಯೂಸ್

ಕನ್ನಡದಲ್ಲಿ ವಿಭಿನ್ನ ಕಥಾ ಹಂದರವಿರುವ ಇಂದಿನ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಿಡಿತ ಎಂಬ ಕನ್ನಡ ಕಿರುಚಿತ್ರದ ಮುಹೂರ್ತ ಶ್ರೀ ಗುರು ರಾಘವೇಂದ್ರ ಮಠ ದಲ್ಲಿ ನಡೆಯಿತು ,ಪ್ರಧಾನ ಅರ್ಚಕರಾದ ರಾಘವೇಂದ್ರ ಉಡುಪ ಇವರು ಪೂಜೆ ನೆರವೇರಿಸಿದರು,ಇದರ ಚಿತ್ರೀಕರಣವು ಪುತ್ತೂರಿನ ಆಸುಪಾಸು ಹಾಗು ಉದ್ಯಮಿ ಪ್ರಸಾದ್ ಇಂಡಸ್ಟ್ರಿಯ ಶಿವಪ್ರಸಾದ್ ಶೆಟ್ಟಿ ಇವರ ಮನೆಯಲ್ಲಿ ನಡೆಯಿತು .

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಲನಚಿತ್ರ ನಟ ಪ್ರಕಾಶ್ ತುಮಿನಾಡು ಇವರ ಸಲಹೆ ಸಹಕಾರದೊಂದಿಗೆ ಅವರ ಮಗ ಖುಷಿತ್ ತುಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುತ್ತಾರೆ. Inspire films ತಂಡದ ಅಜ್ಜನ ಮಾಯೆ ಖ್ಯಾತಿಯ ರವಿಚಂದ್ರ ರೈ ಮುಂಡೂರು ಇವರ ಕಥೆ- ಚಿತ್ರಕಥೆ- ನಿರ್ದೇಶನ ,ಹಾಗೂ ಸೂರಜ್ ಪಂಜಳ ಇವರ ಕ್ಯಾಮೆರಾ ವರ್ಕ್, ಪ್ರಜ್ವಲ್ ಇವರ ಡ್ರೋನ್ ಕ್ಯಾಮೆರಾ, ರವಿ ಸಿಂಗೇರಿ ಇವರ ಪ್ರಸಾದನವಿರುತ್ತದೆ.

ಈ ಸಂದರ್ಭದಲ್ಲಿ ಹೆಸರಾಂತ ಚಲನಚಿತ್ರ ನಟ ಪ್ರಕಾಶ್ ತುಮಿನಾಡು ,ಉದ್ಯಮಿ ಶಿವಪ್ರಸಾದ್ ಶೆಟ್ಟಿ ,ಸುಜಾತ ಶಿವಪ್ರಸಾದ್ ಶೆಟ್ಟಿ, ಕುತೂಹಲ ಕಲರವ ವಿಜಯ್ ಅತ್ತಾಜೆ, ರಮಿತಾ ಶೈಲೇಂದ್ರ ಕಾರ್ಕಳ, ಶ್ರೀ ಮಾಧವ ಪ್ರಭು, ಬಾಲಕೃಷ್ಣ ರೈ ಬೈಲಾಡಿ ,ಡಿ ಕೆ ಶೇಷಪ್ಪ ಪೂಜಾರಿ, ಉಮೇಶ್ ಎಸ್ ಕೆ, ಪ್ರವೀಣ್ ಮುಲಾರ್ ,ವೆಂಕಪ್ಪ ಬರೆಪ್ಪಾಡಿ ,ಸುಶಾಂತ್ ಮರೀಲ್, ಜಗದೀಶ್ ಶೆಟ್ಟಿ, ರಿತೇಶ್ ಕೆಮ್ಮಾಯಿ ,ಹರೀಶ್ ಆಲಂಗಾಜೆ, ಅನುಪ್ತ ಶೆಟ್ಟಿ, ಪ್ರತೀಕ್ ತುಮಿನಾಡು, ಗುರುರಾಜ್ ಕೆಮ್ಮಿಂಜೆ ಉಪಸ್ಥಿತರಿದ್ದರು .ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಅತಿ ಶೀಘ್ರವಾಗಿ ನಿಮ್ಮ ಮುಂದೆ ಬರಲಿದೆ .