Recent Posts

Sunday, January 19, 2025
ಸುದ್ದಿ

ಸನಾತನ ಸಂಸ್ಥೆಯ ಕಾರ್ಯ ಅಧ್ಯಾತ್ಮಪ್ರಸಾರ, ಹಿಂಸಾಚಾರವಲ್ಲ ! – ಕಹಳೆ ನ್ಯೂಸ್

ಮುಂಬೈ : ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಕೆಲವು ಹಿಂದುತ್ವನಿಷ್ಠರನ್ನು ಬಂಧಿಸಿತು. ಕೆಲವು ಪ್ರಗತಿಪರರು, ಸಂಘಟನೆಯವರು, ಅದೇ ರೀತಿ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳ ರಾಜಕೀಯ ನಾಯಕರುಗಳು ಉದ್ದೇಶಪೂರ್ವಕವಾಗಿ ಇವರೆಲ್ಲರೂ ಸನಾತನದ ಸಾಧಕರು ಎಂದು ಅಪಪ್ರಚಾರವನ್ನು ಮಾಡುತ್ತಿದ್ದಾರೆ.

ಇದರ ಬಗ್ಗೆ ಸನಾತನ ಸಂಸ್ಥೆಯು ಆಯಾ ಸಮಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು, ಅದನ್ನು ಇಂದೂ ಸ್ಪಷ್ಟಪಡಿಸಲು ಇಚ್ಛಿಸಿದ್ದು, ಆ ಬಂಧಿತರ ಪೈಕಿ ಒಬ್ಬರೂ ಸನಾತನದ ಸಾಧಕರಲ್ಲ. ಅವರಲ್ಲಿ ಕಳಸಕರ, ಅಂದುರೆ, ಸುರಳೆ ಬಂಧು ಮತ್ತು ರೆಗೆ ಈ ಐದು ಜನರ ಹೆಸರನ್ನು ನಾವು ಇದೇ ಮೊದಲ ಸಲ ಕೇಳಿದ್ದೇವೆ. ಆದ್ದರಿಂದ ಅವರ ಸಂಬಂಧವನ್ನು ಸನಾತನದೊಂದಿಗೆ ಜೋಡಿಸದಿರಿ. ಸನಾತನ ಸಂಸ್ಥೆಯು ಸಮಾಜದಲ್ಲಿ ಸಂವಿಧಾನಬದ್ಧವಾಗಿ ಅಧ್ಯಾತ್ಮ ಪ್ರಸಾರದ ಕಾರ್ಯ ಮಾಡುವ ಸಂಸ್ಥೆಯಾಗಿದ್ದು ಸನಾತನದ ಯಾವುದೇ ಬೋಧನೆಯು ಹಿಂಸಾಚಾರದ ದಿಶೆಯಲ್ಲಿಲ್ಲ. ಬಂಧಿತರಲ್ಲಿ ಕೆಲವು ಹಿಂದುತ್ವವಾದಿ ಕಾರ್ಯಕರ್ತರು ಹಿಂದೂ ಜನಜಾಗೃತಿ ಸಮಿತಿ ಮಾಡುತ್ತಿರುವ ಹಿಂದೂ ಸಂಘಟನೆಯ ವಿವಿಧ ಉಪಕ್ರಮಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಪಾಲ್ಗೊಳ್ಳುತ್ತಿದ್ದರೂ, ಅವರು ತಮ್ಮ ವಿವಿಧ ಸಂಘಟನೆಗಳ ಮಾಧ್ಯಮದಿಂದ ಕಾರ್ಯ ಮಾಡುತ್ತಿದ್ದರು. ಆದುದರಿಂದ  ಅವರನ್ನು ಬಂಧಿಸಿದ್ದರಿಂದ ‘ಸನಾತನವನ್ನು ನಿಷೇಧಿಸಿ’ ಹಾಗೂ ‘ಸನಾತನದ ಪ್ರಮುಖರನ್ನು ಬಂಧಿಸಿ’ ಎಂದು ಹೇಳುವುದೆಂದರೆ ಕಾಂಗ್ರೆಸ್‌ನ್ನು ಬೆಂಬಲಿಸುವ ಪಕ್ಷದ ನಾಯಕರ ಬಂಧನವಾದ ನಂತರ ‘ಕಾಂಗ್ರೇಸನ್ನು ನಿಷೇಧಿಸಿರಿ’ ಮತ್ತು ‘ರಾಹುಲ ಗಾಂಧಿಯವರನ್ನು ಬಂಧಿಸಿ’ ಎಂದು ಹೇಳಿದಂತೆ ಹಾಸ್ಯಾಸ್ಪದವಾಗಿದೆ.  ಇದರಲ್ಲಿ ಅಧ್ಯಾತ್ಮಪ್ರಸಾರ ಮಾಡುವ ಚಿಕ್ಕ ಸನಾತನ ಸಂಸ್ಥೆಯನ್ನು ಎಲ್ಲ ಪ್ರಗತಿಪರ ನಾಯಕರು ಗುರಿ ಮಾಡುತ್ತಿದ್ದರೂ, ಇದು ಮುಂಬರುವ ಚುನಾವಣೆಯನ್ನು ಕಣ್ಣೆದುರು ಇಟ್ಟುಕೊಂಡು ಹಿಂದೂ ಭಯೋತ್ಪಾದನೆಯ ಹೆಸರಿನಲ್ಲಿ ಭಾಜಪ ಸರಕಾರವನ್ನು ಅವಮಾನಿಸುವುದೇ ಅವರ ನಿಜವಾದ ಉದ್ದೇಶವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸನಾತನ ಸಂಸ್ಥೆಯ ಮೇಲೆ ಮಾಡಲಾಗುತ್ತಿರುವ ಎಲ್ಲ ಆರೋಪಗಳು ‘ಎಟಿಎಸ್’ ಮತ್ತು ‘ಸಿಬಿಐ’ ಈ ತನಿಖಾ ಸಂಸ್ಥೆಗಳಿಂದ ಅನಧಿಕೃತವಾಗಿ ದೊರಕಿದ ಮಾಹಿತಿಯ ಆಧಾರದಲ್ಲಿ ಅಂದರೆ ‘ಮೂಲಗಳಿಂದ ದೊರಕಿದ ಮಾಹಿತಿಯಿಂದ’ ಮಾಡಲಾಗುತ್ತಿದೆ.  ಪ್ರತ್ಯಕ್ಷದಲ್ಲಿ ಇತ್ತಿಚಿಗಷ್ಟೇ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಪತ್ರಿಕಾಗೋಷ್ಠಿಯನ್ನು ತೆಗೆದುಕೊಂಡು, ‘ಈ ಪ್ರಕರಣದಲ್ಲಿ ಯಾವುದೇ ವಿಶಿಷ್ಟ ಸಂಘಟನೆಯ ಹೆಸರು ತೆಗೆದುಕೊಂಡಿಲ್ಲ, ಪೊಲೀಸರ ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ’, ಎಂದು ಸ್ಪಷ್ಟ ಪಡಿಸಿತ್ತು. ನಮಗೆ ಪ್ರಶ್ನೆಯೇನೆಂದರೆ ಹಾಗಾದರೆ ಇವೆಲ್ಲ ವಾರ್ತೆಗಳ ಹಿಂದೆ ಅಂತಹ ಯಾವ ‘ಸೋರ್ಸ್’ ಇದೆ ? ಇವುಗಳ ಪೈಕಿ ಯಾವುದೇ ದಳವು ಅಧಿಕೃತವಾಗಿ ಸನಾತನದ ಸಂಬಂಧವಿದೆ ಎಂದು ಹೇಳಿಲ್ಲದಿರುವಾಗ ಸನಾತನ ಸಂಸ್ಥೆಯ ಮೇಲೆ ಆಗುತ್ತಿರುವ ತೇಜೋವಧೆಯು ತುಂಬಾ ನೋವು ತರುವಂತಹದ್ದಾಗಿದೆ. ಇದರಿಂದ ಸಮಾಜದಲ್ಲಿ ಸನಾತನದ ಸಾವಿರಾರು ಸಾಧಕರು, ಲಕ್ಷಗಟ್ಟಲೆ ಹಿತಚಿಂತರಕರ ಮಾನಹಾನಿಯಾಗುತ್ತಿದೆ ಎಂಬುದನ್ನು ಗಮನದಲ್ಲಿಟ್ಟು ವಾರ್ತೆ ನೀಡಬೇಕೆಂದು ವಿನಂತಿ. ಅಲ್ಲದೇ ಈ ಮಾನಹಾನಿಯನ್ನು ತಡೆಯಲು ಸನಾತನ ಸಂಸ್ಥೆಯು  ನಿರುಪಾಯವಾಗಿ ಈ ಅನಧಿಕೃತ ಮಾಹಿತಿಯ ಆಧಾರದಲ್ಲಿ ಮಾಡಲಾಗುತ್ತಿರುವ ಸುಳ್ಳು ಆರೋಪಗಳ ವಿಷಯದಲ್ಲಿ ನ್ಯಾಯಾಲಯದಲ್ಲಿ ಖಟ್ಲೆ ದಾಖಲಿಸುವ ನಿರ್ಣಯ ತೆಗೆದುಕೊಂಡಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ೨೭ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ತೇಜಸ್ವೀ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ಸಂಸ್ಥೆಯೆಂದು ಸನಾತನ ಸಂಸ್ಥೆಯು ಉದಯಿಸಿದೆ. ಅಲ್ಪಾವಧಿಯಲ್ಲಿ ಸಿಕ್ಕಿದ ಜನಾಧಾರ ಮತ್ತು ಕಾರ್ಯದ ವಿಸ್ತಾರವು ನಮಗೆ ಸಿಕ್ಕಿದ ಪಾವತಿಯೇ ಆಗಿದೆ. ಇಲ್ಲಿಯವರೆಗೆ ಯಾವುದೇ ಉಪಕ್ರಮವನ್ನು ಅನುಮತಿ ಪಡೆಯದೇ ತೆಗೆದುಕೊಂಡಿರುವ, ಯಾವುದೇ ಕಾರ್ಯಕ್ರಮದಲ್ಲಿ ಗಲಭೆಯಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವ, ಈ ರೀತಿ ಎಂದಿಗೂ ಆಗಿಲ್ಲ. ಇದು ವರೆಗೆ ಸನಾತನ ಸಂಸ್ಥೆಯ ವಿರುದ್ಧ ಒಮ್ಮೆಯೂ ಅಪರಾಧ ದಾಖಲಾಗಿಲ್ಲ. ಇದಕ್ಕೆ ಕಾರಣ ನಾವು ಸಂವಿಧಾನಕ ಮಾರ್ಗ, ಪ್ರಜಾಪ್ರಭುತ್ವದ ಮೌಲ್ಯಗಳು, ನ್ಯಾಯವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆ ಇವುಗಳನ್ನು ಕೇವಲ ಗೌರವಿಸುವುದು ಮಾತ್ರವಲ್ಲದೇ ಅದರ ಆಚರಣೆಯನ್ನೂ ಮಾಡುತ್ತೇವೆ. ಇಂತಹ ಒಂದು ಆಧ್ಯಾತ್ಮಿಕ ಸಂಸ್ಥೆಯ ಮೇಲೆ ಇಷ್ಟು ಗಂಭೀರ ಪ್ರಕರಣದಲ್ಲಿ ಸಾಕ್ಷಿ ಇಲ್ಲದೇ ಇವರೇ ಜವಾಬ್ದಾರರಾಗಿದ್ದಾರೆ ಎಂದು ಹೇಳುವುದು ಆಶ್ವರ್ಯಕರ ಆಗಿದೆ. ಇದು ನಮ್ಮ ಮೇಲಿನ ಅನ್ಯಾಯವೇ ಆಗಿದೆ. ಈ ಅನ್ಯಾಯವನ್ನು ನಿಲ್ಲಿಸಿ, ಎಂದು ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ.

ಇಲ್ಲಿಯವರೆಗೆ ಯಾವುದೇ ಪ್ರಕರಣದ (ಠಾಣೆ ಸ್ಪೋಟ, ಮಡಗಾವ ಸ್ಪೋಟ, ನಾಲ್ಕು ಹತ್ಯೆಯ ಪ್ರಕರಣ) ಆರೋಪಪತ್ರದಲ್ಲಿ ಎಲ್ಲಿಯೂ ಸನಾತನ ಸಂಸ್ಥೆಯ ಹೆಸರು ಇಲ್ಲ. ಸನಾತನ ಸಂಸ್ಥೆ ಆರೋಪಿಯಾಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಸನಾತನ ಸಂಸ್ಥೆಯು ದೇಶವಿರೋಧಿ ಕೃತ್ಯವನ್ನು ಮಾಡಿದೆ, ಎಂದು ಎಲ್ಲಿಯೂ ಉಲ್ಲೇಖ ಇಲ್ಲ. ಹೀಗಿರುವಾಗ ಸನಾತನ ಸಂಸ್ಥೆಯನ್ನು ನಿಷೇಧಿಸುವ ಬೇಡಿಕೆಯನ್ನಿಡುವುದು, ಇದು ಸುಳ್ಳು ಮತ್ತು ಆಧಾರರಹಿತವಾಗಿದೆ.
ಭಯೋತ್ಪಾದನಾ ನಿಗ್ರಹ ದಳವು ಈ ಪ್ರಕರಣದಲ್ಲಿ ಬಂಧಿಸಿದ ಆರೋಪಿಗಳ ಉದ್ದೇಶದ ತನಿಖೆ ಮಾಡಲು ಪೊಲೀಸ್ ಕಸ್ಟಡಿ ಕೇಳುತ್ತದೆ ಮತ್ತು ಇಲ್ಲಿ ಹೊರಗೆ ತನಿಖೆಯಾಗುವ ಮೊದಲೇ ಮರಾಠಾ ಆಂದೋಲನದಲ್ಲಿ ಸ್ಫೋಟ ನಡೆಸಲು ಸಂಚು, ಬಕ್ರಿದ್‌ಗೆ ರಕ್ತಪಾತಕ್ಕೆ ಸಂಚು, ೫೦೦ ತರಬೇತಿ ಪಡೆದ ಕಾರ್ಯಕರ್ತರ ಸೇನೆ ಮುಂತಾದ ಆರೋಪಗಳನ್ನು ಮಾಡಲಾಗುತ್ತದೆ, ಅದನ್ನು ಸೋಶಿಯಲ್ ಮೀಡಿಯಾದ ಮಾಧ್ಯಮದಿಂದ ಎಲ್ಲೆಡೆ ಹಬ್ಬಿಸಲಾಗುತ್ತಿದೆ. ಇವೆಲ್ಲ ರಾಜಕೀಯ ಸಂಚಾಗಿದೆ. ಈ ಪ್ರಕರಣದಲ್ಲಿ ಭಿತ್ತರಿಸಲಾಗುವ ಜಾತಿವಾಚಕ ಸಂದೇಶಗಳ ತನಿಖೆಯನ್ನೂ ಸರಕಾರ ಮಾಡಿ ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು.
ಹಿಂದುತ್ವವಾದಿ ಸರ್ಕಾರ ಆಡಳಿತವಿರುವುದರಿಂದ ಹಿಂದುತ್ವವನ್ನು ಅವಮಾನಿಸಿ ರಾಜಕೀಯ ಬೇಳೆಯನ್ನು ಬೇಯಿಸುವ ಹಾಗೂ ಸನಾತನದಂತೆ ನಿರಪರಾಧಿ ಸಂಸ್ಥೆಯನ್ನು ಮುಗಿಸುವ ಇದೊಂದು ಕೃತ್ಯವಾಗಿದೆ. ‘ನಾಯಿಗೆ ಹುಚ್ಚು ಹಿಡಿದಿದೆ ಎಂದು ಹೇಳಿ ಮತ್ತು ಕೊಲ್ಲಿರಿ’ ಇದು ಧರ್ಮವಿರೋಧಕರ ಷಡ್ಯಂತ್ರವಾಗಿದೆ. ಆದುದರಿಂದ ಪ್ರಜ್ಞಾವಂತ ಪತ್ರಕರ್ತರು ಈ ಸಂಚಿಗೆ ಬಲಿಯಾಗಬಾರದು ಎಂದು ನಮ್ಮ ವಿನಂತಿ. ಹೀಗಿದ್ದರೂ ಸನಾತನ ಸಂಸ್ಥೆಯು ಮಾಡುತ್ತಿರುವ ಧರ್ಮಪ್ರಸಾರದ ಕಾರ್ಯ ನಾವು ಇನ್ನೂ ಉತ್ಸಾಹದಿಂದ, ವೇಗವಾಗಿ ಮತ್ತು ಶಕ್ತಿಯಿಂದ ಮಾಡಲು ಪ್ರಯತ್ನಿಸುವೆವು, ಅದೇ ರೀತಿ ಸನಾತನ ಸಂಸ್ಥೆಯ ಮೇಲೆ ಹೇರಿರುವ ‘ಅಘೋಷಿತ ನಿಷೇಧ’ವು ನಾವು ಎಂದಿಗೂ ಯಶಸ್ವಿಯಾಗಿಸಲು ಬಿಡುವುದಿಲ್ಲ, ಎಂದು ನಾವು ನಿರ್ಧರಿಸಿದ್ದೇವೆ, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ.ಚೇತನ ರಾಜಹಂಸರವರು ತಮ್ಮ ನಿಲುವನ್ನು ಮಂಡಿಸಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಸಂಘಟನೆಯ ಕಾರ್ಯ ತಡೆಯಲು ಸಂಚು !

ಹಿಂದೂ ಜನಜಾಗೃತಿ ಸಮಿತಿಯು ಸಮಾಜದಲ್ಲಿ ಧರ್ಮಶಿಕ್ಷಣವನ್ನು ನೀಡಿ ಹಿಂದೂಸಂಘಟನೆಯ ಕಾರ್ಯವನ್ನು ಮಾಡುತ್ತದೆ. ಆದುದರಿಂದ ವಿವಿಧ ವಿಚಾರಸರಣಿ, ಕಾರ್ಯಪದ್ಧತಿಗಳಿರುವ ಹಿಂದುತ್ವನಿಷ್ಠರನ್ನು ಸಂಘಟಿಸುವ ಕಾರ್ಯವು ಸಮಿತಿಯ ಮಾಧ್ಯಮದಿಂದ ಮಾಡಲಾಗುತ್ತಿದೆ. ಆದುದರಿಂದ ದೇಶಾದ್ಯಂತದ ಸಂಘಟನೆಗಳನ್ನು ಜೋಡಿಸಲಾಗುತ್ತಿದೆ. ಹಿಂದೂಗಳ ಪ್ರಭಾವಿ ಸಂಘಟನೆ ನಿರ್ಮಾಣವಾಗಿ ಇಂದು ಹಿಂದೂಗಳ ಮೇಲಿನ ಅನ್ಯಾಯಗಳ ವಿಷಯದಲ್ಲಿ ದೊಡ್ಡ ಪ್ರಮಾಣದಲ್ಲಿ ಆಂದೋಲನ ಮಾಡಲಾಗುತ್ತಿದೆ. ಇದರಿಂದ ಹಿಂದೂವಿರೋಧಿ ಶಕ್ತಿಗಳು ಈ ಕಾರ್ಯವನ್ನು ನಿಲ್ಲಿಸಲು ಹಿಂದೂ ಜನಜಾಗೃತಿ ಸಮಿತಿಯನ್ನು ಗುರಿ ಮಾಡುತ್ತಿವೆ.  ಆದರೆ ಸಮಿತಿಯ ಹಿಂದೂ ಸಂಘಟನೆಯ ಕಾರ್ಯವನ್ನು ಹಿಂದೂ ಸಮಾಜ ಪ್ರತ್ಯಕ್ಷ ನೋಡುತ್ತಿದ್ದು ಇಂತಹ ಸಂಚಿಗೆ ಅದು ಬಲಿಯಾಗುವುದಿಲ್ಲ, ಎಂಬುದು ನಮಗೆ ಖಾತ್ರಿ ಇದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ, ಸುನೀಲ ಘನವಟರವರು ಈ ಸಮಯದಲ್ಲಿ ಹೇಳಿದರು.