Recent Posts

Monday, January 20, 2025
ಸುದ್ದಿ

ಮಾರ್ಚ್ 5ರಂದು ಶ್ರೀ ಬ್ರಹ್ಮಬೈದರ್ಕಳ ಗರಡಿ ನೀರುಮಜಲು ಪುಣಚದಲ್ಲಿ ಶ್ರೀ ಕೋಟಿ ಚೆನ್ನಯರ ಬೈದರ್ಕಳ ನೇಮ -ಕಹಳೆ ನ್ಯೂಸ್

ಶ್ರೀ ಬ್ರಹ್ಮಬೈದರ್ಕಳ ಗರಡಿ ನೀರುಮಜಲು ಪುಣಚದಲ್ಲಿ ಇದೇ ಬರುವ ಮಾರ್ಚ್ 5ರಂದು ಶ್ರೀ ಕೋಟಿ ಚೆನ್ನಯರ ಬೈದರ್ಕಳ ನೇಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ.26ರಂದು ಗೊನೆಮುಹೂರ್ತ ನಡೆದು, ಮಾರ್ಚ್ 4ರಂದು ಬೆಳಗ್ಗೆ ನಾಗತಂಬಿಲ, ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನಡೆಯಲಿದೆ. ಮಾರ್ಚ್ 5ರಂದು ಗಣಪತಿ ಹೋಮ, ಶುದ್ಧ ಕಲಶಾದಿ ಹೋಮ, ತಂಬಿಲ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಬೈದರ್ಕಳ ಗರಡಿ ಇಳಿಯಲಿದ್ದು, ಆಯುಧ ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಾಯಂದಳ್ ದೇವಿಯ ಉತ್ಸವ, ಪೂಜಾರಿಗಳ ಸೇಟು, ಬೈದರ್ಕಳ ಸೇಟು ಹಾಗೂ ಪ್ರಸಾವ ವಿತರಣೆ ನಡೆಯಲಿದೆ.