Recent Posts

Sunday, January 19, 2025
ಸುದ್ದಿ

Breaking News : ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದ ಕರ್ಕಶ ಧ್ವನಿಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ತುಳಸಿಪ್ರಸಾದ್ ! – ಕಹಳೆ ನ್ಯೂಸ್

ಬೆಂಗಳೂರು: ಕರ್ಕಶ ಧ್ವನಿಯಲ್ಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದತುಳಸಿ ಪ್ರಸಾದ್ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಬಿಗ್‌ಬಜಾರ್‌ನಲ್ಲಿ ಕಳ್ಳತನ ಮಾಡಿ ತುಳಸಿ ಪ್ರಸಾದ್ ಸಿಕ್ಕಿಬಿದ್ದಿದ್ದು, ಸ್ಥಳದಲ್ಲಿದ್ದವರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ ಬಜಾರ್‌ಗೆ ಹೋಗಿದ್ದ ತುಳಸಿಪ್ರಸಾದ್, ಜರ್ಕಿನ್ ಹಾಕಿಕೊಂಡು ಕಳ್ಳತನ ಮಾಡಿದ್ದಾನೆ. ಹಲವು ವಸ್ತುಗಳನ್ನು ಎಗರಿಸಿದ ನಂತರ, ಸೆಕ್ಯೂರಿಟಿ ಕೈಗೆ ಸಿಕ್ಕಬಿದ್ದ ತುಳಸಿಪ್ರಸಾದ್‌ಗೆ ಸಿಬ್ಬಂದಿಗಳೆಲ್ಲ ಸೇರಿ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಫ್ಯಾನ್ಸ್‌ಗಳನ್ನು ಹೊಂದಿದ್ದ ನೀವು ಯಾಕೆ ಕಳ್ಳತನ ಮಾಡಿದ್ರಿ, ಇಂತಹ ಕೆಲಸ ಮಾಡುವುದು ಸರೀನಾ ಎಂದು ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಕರ್ಕಶ ಧ್ವನಿಯಲ್ಲಿ ಹಾಡಿ ಟ್ರೋಲ್ ಆಗಿದ್ದ ತುಳಸಿಪ್ರಸಾದ್, ಹಲವು ಫ್ಯಾನ್ಸ್‌ಗಳನ್ನು ಸಹ ಹೊಂದಿದ್ದು, ಬಿಗ್‌ಬಾಸ್‌ ಕಾರ್ಯಕ್ರಮದ ಮುಂದಿನ ಸೀಸನ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು