Sunday, November 24, 2024
ಸುದ್ದಿ

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ-ಕಹಳೆ ನ್ಯೂಸ್

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ 19 ರಂದು ಪ್ರಾರಂಭಗೊಂಡಿದ್ದು, ಫೆ.27 ರವರೆಗೆ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮಕಲಶೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನಡ್ವಂತಾಡಿ ಶ್ರೀ ಪಾದ ಪಾಂಗಾಣ್ಣಾಯರ ನೇತೃತ್ವದಲ್ಲಿ ಜರಗಲಿದೆ. ಇಂದು ಬೆಳಗ್ಗೆ ಕ್ಷೇತ್ರದಲ್ಲಿ ಗಣಪತಿ ಹೋಮ, ಶಾಂತಿ ಹೋಮ, ಪೂರ್ಣ ನವಗ್ರಹ ಶಾಂತಿ, ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಂಜೆ 4.30ರಿಂದ ಪರಿವಾರ ದೇವರ ಪ್ರಾಯಶ್ಚಿತ ಹೋಮ, ಭದ್ರಕಾಳಿ ಗುಡಿಯಲ್ಲಿ ವಾಸ್ತು ಪ್ರಕ್ರಿಯೆ, ಮಂಟಪು ಸಂಸ್ಕಾರ ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಬೆಳಿಗ್ಗೆ ಗಂಟೆ 10 ರಿಂದ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ತುಂಬೆದಲೆಕ್ಕಿ, ಗುಂಡೂರಿ ಇವರ ತಂಡದಿಂದ ಕುಣಿತ ಭಜನೆ ನಡೆಯಲಿದೆ. ಬಳಿಕ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಯಕ್ಷಗಾನ ಮತ್ತು ಧಾರ್ಮಿಕತೆ ವಿಷಯದ ಕುರಿತ ಉಪನ್ಯಾಸನವನ್ನು ಉಪನ್ಯಾಸಕರಾದ, ಬಹುಶ್ರುತ ವಿದ್ವಾಂಸರು, ಸಂಸ್ಕøತ ಚಿಂತಕರಾದ ಡಾ.ಎಂ.ಪ್ರಭಾಕರ ಜೋಷಿ ನೀಡಲಿದ್ದಾರೆ. ಇನ್ನೂ ಈ ಸಭೆಯಲ್ಲಿ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಹರ್ಷ ಸಂಪಿಗೆತ್ತಾಯ, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೇಮಂತ, ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಜಯ, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶಿವ ಭಟ್ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ ಗಂಟೆ 1 ರಿಂದ 4 ಗಂಟೆಯವರೆಗೆ ವಿವಿಧ ಸಾಂಸ್ಕøತಿ ಕಾರ್ಯಕ್ರಮಗಳು ನಡೆಲಿದ್ದು, ಆರ್.ಎಸ್.ಮೆಲೋಡಿಸ್,ಕೊಳಂಬೆ ಬಜ್ಜೆ ಇವರಿಂದ ಸುಗಮ ಸಂಗೀತ ನಡೆಯಲಿದೆ. ಸ್ಥಳೀಯರಿಂದ ವೈವಿಧ್ಯ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಶ್ರೀ ರಾಮ ಭಜನಾ ಮಂಡಳಿ ನಡ್ತಿಕಲ್ಲು, ಮುಡುಕೋಡಿ ಪ್ರಯೋಜಕತ್ವದಲ್ಲಿ ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ “ಭಕ್ತಮಾರ್ಕಂಡೇಯ” ಹರಿಕಥೆ ನಡೆಯಲಿದೆ.
ರಾತ್ರಿ 7 ರಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಸುಂಕದ ಕಟ್ಟೆ ಬಜಪೆ ಇವರಿಂದ ಅಮೃತ ಸೋಮೇಶ್ವರ ವಿರಚಿತ ‘ಅಮರ ಶಿಲ್ಪ ವೀರ ಶಂಭು ಕಲ್ಕುಡ’ ಐತಿಹಾಸಿಕ ಯಕ್ಷಗಾನ ಯಕ್ಷವೇದಿಕೆಯಲ್ಲಿ ನಡೆಯಲಿದ್ದು, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಯಕ್ಷಗಾನ ಬಯಲಾಟದ ಸೇವಾಕರ್ತರಾಗಿದ್ದಾರೆ.

ಬಳಿಕ ಕ್ಷೇತ್ರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕರಿಂಜೆ ಮೂಡಬಿದ್ರೆಯ ಶ್ರಿ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಹಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಶಾಸಕರಾದ ಉಮಾನಾಥ ಕೋಟ್ಯಾನ್, ಮಂಗಳೂರಿನ ಕಾಂಪ್ಕೋ ಪ್ರೈ.ಲಿ. ಅಧ್ಯಕ್ಷರಾದ ಕಿಶೋರ್ ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಶ್ರೀ ನಿಯಲ ಬೊಕ್ಕಸ ಬಳೆಂಜ ಚಂದಪ್ಪ ಪೂಜಾರಿ, ವೇಣೂರಿನ ಶ್ರೀ ಧ.ಮಂ.ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ವಿಶ್ವೇಶ್ವರ ಭಟ್, ಉಪ್ಪಿನಂಗಡಿ ಉದ್ಯಮಿಗಳಾದ ಕೃಷ್ಣರಾಜ, ಪಾಲ್ಗೊಳ್ಳಲಿದ್ದಾರೆ. ಇನ್ನೂ ಕಾರ್ಯಕ್ರಮವನ್ನು ಅಳದಂಗಡಿಯ ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಲಿದ್ದಾರೆ.
ರಾತ್ರಿ 9 ರಿಂದ ಬೆಂಗಳೂರಿನ ಉದ್ಯಮಿಗಳಾದ ಅಶ್ವಥ್ ಹೆಗ್ಡೆ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ಖ್ಯಾತ ನೃತ್ಯ ತಂಡದಿಂದ ವಿಶೇಷ ಕಾರ್ಯಕ್ರಮ ‘ಮಿರಕಲ್ ಆನ್ ವೀಲ್ಸ್’ ಕಾರ್ಯಕ್ರಮ ನಡೆಯಲಿದೆ.