ಹಿಂದೂ ಮಕ್ಕಳಿಗೆ ಇಸ್ಲಾಂ ಪ್ರವಚನ ವಿಚಾರ; ನಿಜಾಂಶ ಅರಿಯದೆ ಸದನದಲ್ಲಿ ಪ್ರಸ್ತಾಪಿಸಿದ ಉಳ್ಳಾಲ ಶಾಸಕರು; ಶಾಸಕ ಸಂಜೀವ ಮಠಂದೂರು ಆಕ್ರೋಶ -ಕಹಳೆ ನ್ಯೂಸ್
ವಿಟ್ಲದ ಅಡ್ಯನಡ್ಕದಲ್ಲಿ ಶಾಲಾ ಮಕ್ಕಳಿಗೆ ಇಸ್ಲಾಂ ಮತ ಪ್ರವಚನ ಮಾಡುತ್ತಿದ್ದಾಗ ಹಿಂದೂ ಸಂಘಟನೆ ದಾಳಿ ನಡೆಸಿದ ವಿಚಾರಕ್ಕೆ ಸಂಭಂಧಪಟ್ಟಂತೆ ಉಳ್ಳಾಲ ಶಾಸಕ ಯುಟಿ ಖಾದರ್ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರು ಪ್ರತಿಕ್ರಿಯೆ ನೀಡಿದ್ದಾರೆ. ಶಿವರಾತ್ರಿಯಂದು ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಆ ಶಾಲೆಯ ಮುಖ್ಯೋಪಾಧ್ಯಯರೇ ಕರೆಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಮಾಹಿತಿ ನಿಡ್ತಾರೆ, ಖಡ್ಡಾಯವಾಗಿ ಹೋಗಬೇಕೆಂದು ತಿಳಿಸಿ ಶಾಲೆಯಲ್ಲಿ ಯಾವುದೇ ಕ್ಲಾಸ್ ತೆಗೆದುಕೊಳ್ಳದೇ ಶಾಲೆಯಿಂದ ದೂರಿವಿರುವ ಕಟ್ಟಡಕ್ಕೆ ಕಳಿಸಿದ್ದಾರೆ. ಅಲ್ಲಿ ಇಸ್ಲಾಂ ಸಂಘಟಕರು ಮಕ್ಕಳಿಗೆ ಪರೀಕ್ಷಾ ಕೋಚಿಂಗ್ ನೀಡುವ ನೆಪದಲ್ಲಿ ಪ್ರವಾದಿಗಳ ಪ್ರವಚನ ನೀಡಿದ್ದನ್ನ ಸ್ವತಃ ಮಕ್ಕಳೇ ತಿಳಿಸಿದ್ದಾರೆ. ಇದರ ನಿಜಾಂಶವನ್ನು ತಿಳಿಯದೇ ಶಾಸಕ ಯುಟಿ ಖಾದರ್ ಸದನಸಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರೋದು ನನ್ನ ಗಮನಕ್ಕೆ ಬಂದಿದೆ. ಸತ್ಯಾಸತ್ಯತೆ ಅರಿಯದೆ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿರೋದಕ್ಕೆ ನನ್ನ ಆಕ್ಷೇಪ ಇದೆ ಎಂದ್ರು. ಇನ್ನು ಅಡ್ಯನಡ್ಕದಲ್ಲಿ ವಿದ್ಯಾರ್ಥಿಗಳನ್ನು ಒಂದು ಧಾರ್ಮಿಕ ಸಂಗಟನೆಯ ವ್ಯಕ್ತಿಯ ಮೂಲಕ ಮತ ಪ್ರವಚನ ಮಾಡಿ ಮಕ್ಕಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಮಾತನಾಡಿ ಸಂಘಟಕರ ವಿರುದ್ಧ ಹಾಗೂ ವಿದ್ಯಾರ್ಥಿಗಳನ್ನು ಅಲ್ಲಿಗೆ ಕಳುಹಿಸಿದ ಸಾಲಾ ಮುಖ್ಯೋಪಾಧ್ಯಯರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದ್ರು. ವಿಷಯ ಗೊತ್ತಿಲ್ಲದೆ ಉಳ್ಳಾಲ ಶಾಸಕರು ಹಿಂದೂ ಸಂಘಟನೆಯವರ ಮೇಲೆ ಮತ್ತು ಪ್ರಮುಖರ ಮೇಲೆ ಆರೋಪ ಮಾಡಿರೋದ್ರಲ್ಲಿ ನಿಜಾಂಶವಿಲ್ಲ. ಆ ಭಾಗದ ಶಾಸಕನಾಗಿ ನಾನು ಯಾವತ್ತೂ ಕೂಡಾ ಹಿಂದೂ ಸಂಘಟನೆಯ ಕಾರ್ಯಕರ್ತರೊಂದಿಗೆ ಸದಾ ಇರುತ್ತೇನೆ ಎಂದ್ರು.