ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ನೀಡಿದ ದೂರಿನ ಮೇರೆಗೆ ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ವಿರುದ್ಧ ಎಫ್‌ಐಆರ್..!? – ಕಹಳೆ ನ್ಯೂಸ್
ಬೆಂಗಳೂರು: ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ನೀಡಿದ ದೂರಿನ ಮೇರೆಗೆ ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ವಿರುದ್ಧ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಪೆಟಿಷನ್ ರೆಡಿ ಮಾಡಿಕೊಂಡಿರುವ ಬಾಗಲಗುಂಟೆ ಪೊಲೀಸರು, ಎಫ್‌ಐಆರ್ ದಾಖಲಿಸಬೇಕಾ ಅಥವಾ ಬೇಡ್ವಾ ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಖಾಸಗಿ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ರೋಹಿಣಿ ಪತಿ ಸುಧೀರ್ ರೆಡ್ಡಿ ಡಿ. ರೂಪಾ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿನ್ನೆ ದೂರು ಪಡೆದಿದ್ದ ಬಾಗಲಗುಂಟೆ ಪೊಲೀಸರು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಪೆಟಿಷನ್ ಮಾಡಿಕೊಂಡಿದ್ದಾರೆ. ಎನ್ ಸಿ ಆರ್ ದಾಖಲಿಸಿದ್ದರೆ ಗಂಭೀರವಲ್ಲದ ಪ್ರಕರಣವೆಂದು ಪರಿಗಣಿಸಬಹುದಿತ್ತು. ಹೀಗಾಗಿ ಪೆಟಿಷನ್ ಮಾಡಿಕೊಂಡ ಕಾರಣ ಮುಂದೆ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪೆಟಿಷನ್ ಮಾಡಿ ಮುಂದಿನ ನಡೆ ಬಗ್ಗೆ ಕಾನೂನು ತಜ್ಞರ ಜೊತೆ ಪೊಲೀಸರು ಚರ್ಚಿಸುತ್ತಿದ್ದಾರೆ. ನಿನ್ನೆ ದೂರು ಕೊಟ್ಟಿದ್ದ ದೂರು ಇನ್ನೂ ಸಹ ಎಫ್‌ಐಆರ್ ಆಗದ ಹಿನ್ನೆಲೆ ರೋಹಿಣಿ ಕುಟುಂಬಸ್ಥರು ಕೋರ್ಟ್ ಮೊರೆ ಹೋಗಿ ಅನುಮತಿ ಮೇರೆಗೆ ಎಫ್‌ಐಆರ್ ದಾಖಲಿಸುವಂತೆ ಮಾಡಲು ತಯಾರಿ ಸಹ ನಡೆಸಿದ್ದಾರೆ ಎನ್ನಲಾಗಿದೆ.
ರೋಹಿಣಿ ಸಿಂಧೂರಿ, ಡಿ ರೂಪಾ ವಿರುದ್ದ ಸೂಕ್ತ ಕ್ರಮಕ್ಕೆ ಸಿಎಂ ಸೂಚನೆ..!
ಇನ್ನೂ ರೂಪಾ ವಿರುದ್ಧ ಎಫ್‌ಐಆರ್ ದಾಖಲಾದರೆ ಡಿ. ರೂಪ ಬಾಗಲಗುಂಟೆ ಠಾಣೆಗೆ ಹಾಜರಾಗಿ ರೋಹಿಣಿ ಪತಿ ಮಾಡಿರುವ ಮೊಬೈಲ್ ಹ್ಯಾಕ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.