Recent Posts

Monday, January 20, 2025
ಸುದ್ದಿ

Breaking News : ‘ಇನ್ಮುಂದೆ ತುಳುವಿನಲ್ಲಿ ಎಂಎ’ ; ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ಪದವಿ ಆರಂಭ – ಕಹಳೆ ನ್ಯೂಸ್

ಮಂಗಳೂರು, ಆ 28 :  ಮಂಗಳೂರು ವಿಶ್ವವಿದ್ಯಾಲಯವೂ ತುಳು ಸ್ನಾತಕೋತ್ತರ ಪದವಿ ತರಗತಿ ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಪ್ರಾಯೋಗಿಕವಾಗಿ ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಪದವಿ ತರಗತಿ ಆಗಸ್ಟ್ 27 ರ ಸೋಮವಾರದಿಂದ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ. 

ಹಂಪನಕಟ್ಟೆಯಲ್ಲಿರುವ ವಿವಿ ಸಂಧ್ಯಾ ಕಾಲೇಜಿನಲ್ಲಿ ತರಗತಿ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಉಪಸ್ಥಿತಿಯಲ್ಲಿ ವಿಶ್ರಾಂತ ಕುಲಪತಿ ಹಾಗೂ ತುಳು ವಿದ್ವಾಂಸ ಪ್ರೊ.ಬಿ.ಎ.ವಿವೇಕ ರೈ ತುಳು ಸ್ನಾತಕೋತ್ತರ ಪದವಿ ತರಗತಿಗಳನ್ನು ಉದ್ಘಾಟಿಸಲಿದ್ದಾರೆ. ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರ್ ಕುಮಾರ್ ಸಿ.ಕೆ.ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. . ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಪ್ರಭಾಕರ ನೀರುಮಾರ್ಗ, ಅಧ್ಯಕ್ಷ ಎಸಿ ಭಂಡಾರಿ, ತುಳು ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ. ಈಗಾಗಲೇ ಪ್ರಾಯೋಗಿಕ ಹಂತದ ಪ್ರಥಮ ವರ್ಷದ ತುಳು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ 20 ವಿದ್ಯಾರ್ಥಿಗಳು ಮುಂದಾಗಿದ್ದಾರೆ. ತುಳು ಎಂಎ ಯೂ ಭಾಷೆ ಸಾಹಿತ್ಯ ಅಧ್ಯಯನದ ಅಭಿವೃದ್ದಿ ಜತೆಯಲ್ಲಿ ತುಳು ಬಾಷಾ ಬೋಧನೆಗೆ ಶಿಕ್ಷಕರ ಲಭ್ಯತೆಗೂ ಇದು ಪೂರಕವಾಗಿ ಸಹಾಯಕಾರಿಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುಳು ಸ್ನಾತಕೋತ್ತರ ಪದವಿಯ ಪ್ರಥಮ ವರ್ಷದ ಅವಧಿಯಲ್ಲಿ , ಐದು ವಿಷಯಗಳಾದ , ತುಳು ಭಾಷೆ, ಸಾಹಿತ್ಯ, ಜಾನಪದ, ಕ್ರೀಡೆ-ಕುಣಿತ-ರಂಗಭೂಮಿ, ಸಂಶೋಧನೆ ಬಗ್ಗೆ ಕಲಿಸಲಾಗುವುದು. ದ್ವಿತೀಯ ವರ್ಷದಲ್ಲಿ ತುಳು ಚರಿತ್ರೆ, ಚಳವಳಿಗಳು, ತುಳುವರ ಕುಲಕಸುಬು, ವಾಣಿಜ್ಯ, ಉದ್ಯಮ, ಜ್ಞಾನ-ತಂತ್ರಜ್ಞಾನ, ಯೋಜಿತ ಸಂಪ್ರಬಂಧವನ್ನು ಬೋಧಿಸಲಾಗುವುದು ಹಾಗೂ ಅಧ್ಯಯನದ ಸಂದರ್ಭದಲ್ಲಿ ತುಳುನಾಡಿನ ಐತಿಹಾಸಿಕ ಸ್ಥಳ, ಸಂಸ್ಕೃತಿ ಬಿಂಬಿಸುವ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿಚಾರಸಂಕೀರ್ಣ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲು ತಯಾರಿ ನಡೆಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು