Recent Posts

Sunday, January 19, 2025
ಸುದ್ದಿ

40 ಲಕ್ಷ ರೂ ಅನುದಾನದಲ್ಲಿ ಕುಂಜತ್ತಬೈಲ್ ಉತ್ತರದಲ್ಲಿ ಬಸವನಗರ ಸಮುದಾಯ ಭವನ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ನೆರವೇರಿದ ಗುದ್ದಲಿಪೂಜೆ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ಉತ್ತರದಲ್ಲಿ ಬಸವನಗರ ಸಮುದಾಯ ಭವನ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಭಿವೃದ್ಧಿ ಕಾಮಗಾರಿಗೆ ೪೦ ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ನಿನ್ನೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಶರತ್ ಕುಮಾರ್, ಶಕ್ತಿಕೇಂದ್ರ ಅಧ್ಯಕ್ಷ ಗುರುರಾಜ ಪಾಟೀಲ್, ಬೂತ್ ಅಧ್ಯಕ್ಷ ಪ್ರಕಾಶ್, ಸ್ಥಳೀಯರಾದ ಜಿ.ಬಿ ಪಾಟೀಲ್, ಎಲ್ಲಪ್ಪ ಲಕ್ಕುಂಡಿ, ಮಲ್ಲಪ್ಪ ಸಂಗಲದ, ಮಾಲಿಂಗ, ಮುತ್ತುರಾಜ, ಅಯ್ಯಪ್ಪ, ಗದಿಗಪ್ಪ , ಬಸವರಾಜ್, ಗಣೇಶ್, ಅಶೋಕ್, ಹನುಮಂತ, ಮಣಿ, ಅಪ್ಪಣ್ಣ, ಸತೀಶ್, ಸಾವಿತ್ರಿ ಹಾಗೂ ಪರಿಸರದ ನಾಗರಿಕರು ಉಪಸ್ಥಿತರಿದ್ದರು.