Monday, November 25, 2024
ಬೆಂಗಳೂರುರಾಜ್ಯಸುದ್ದಿ

ಕ್ಷಮೆ ಕೇಳದಿದ್ದರೆ 1 ಕೋಟಿ ರೂ. ಮಾನನಷ್ಟ ಕೇಸ್ ; ರೂಪಾಗೆ ರೋಹಿಣಿ ಸಿಂಧೂರಿ ಎಚ್ಚರಿಕೆ – ಕಹಳೆ ನ್ಯೂಸ್

ಬೆಂಗಳೂರು: ರೂಪಾ, ರೋಹಿಣಿ ಜಟಾಪಟಿ ನಿಂತು ನಿಲ್ಲದಂತೆ ಮುಂದುವರಿಯುತ್ತಲೇ ಇದೆ. ಅಸ್ತ್ರ – ಪ್ರತ್ಯಾಸ್ತ್ರದ ಯುದ್ಧಕ್ಕೆ ಕಾನೂನಿನ ಕಲೆ ಬಂದಿದೆ. ಕಾನೂನು ಹೋರಾಟ ಮಾಡಲು ಸಿದ್ಧವಾಗಿರುವ ರೋಹಿಣಿ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರೋಹಿಣಿ ಸಿಂಧೂರಿ (Rohini Sindhuri), ರೂಪಾ (D Roopa) ಕಥೆ ಶುರುವಾದಾಗಿನಿಂದ ದಿನಕ್ಕೊಂದು ಸ್ಫೋಟಕ ಟ್ವಿಸ್ಟ್ ಸಿಗುತ್ತಲೆ ಇದೆ. ಒಬ್ಬರ ಮೇಲೋಬ್ಬರು ಯುದ್ಧ ಸಾರುತ್ತಲೇ ಇದ್ದಾರೆ. ಈಗ ಅದಕ್ಕೆ ಕಾನೂನಿನ ಬಣ್ಣ ಬಂದಿದೆ. ರೂಪಾ ಐಪಿಎಸ್ ಅಧಿಕಾರಿ ಆಗಿದ್ರೂ ಮಹಿಳೆಯ ಗೌರವಕ್ಕೆ ಧಕ್ಕೆಯಾಗುವಂತೆ ವೈಯಕ್ತಿಕ ಫೋಟೋಗಳನ್ನು ಫೇಸ್‍ಬುಕ್ ಅಲ್ಲಿ ಹಾಕಿದ್ದಾರೆ. ಅವರ ವಿರುದ್ಧ ನಿರ್ಬಂಧಾಜ್ಞೆಯನ್ನು ಹೇರಬೇಕು ಎಂದು ರೋಹಿಣಿ ಸಿಂಧೂರಿ ಕೋರ್ಟ್ (Court) ಮೆಟ್ಟಿಲೇರಿದ್ದಾರೆ.

roopa ips rohini sindhuri

ರೂಪಾ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿಂದೆ ಸೈಬರ್ ಸೆಲ್‍ನ ಮುಖ್ಯಸ್ಥರು ಆಗಿದ್ದರು. ಆ ಸಂದರ್ಭದಲ್ಲಿ ರೋಹಿಣಿಯವರ ಫೋಟೋ ಕಳವು ಮಾಡಿರಬಹುದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಪರ ವಕೀಲರು ವಾದ ಮಂಡಿಸಿದ್ದಾರೆ.

ರೂಪಾ ವಿರುದ್ಧ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೂಡ ದೂರು ನೀಡಿದ್ದರೂ, ಚೌಕಟ್ಟು ಮೀರಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ವಾದವನ್ನು ಆಲಿಸಿದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ.  ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೂಪಾಗೆ ಹಿರಿಯ ವಕೀಲರ ಮೂಲಕ ನೋಟಿಸ್ ನೀಡಲಾಗಿದೆ. 24 ಗಂಟೆಯ ಒಳಗಡೆ ಲಿಖಿತ ರೂಪದಲ್ಲಿ ಕ್ಷಮೆ ಕೇಳಬೇಕು. ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಮಾಡಿರುವ ಮಾನಹಾನಿ ಆರೋಪಗಳನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಕೋರ್ಟ್‍ನಲ್ಲಿ 1 ಕೋಟಿ ರೂ. ಮಾನನಷ್ಟ ಕೇಸ್ ಹೂಡುವುದಾಗಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ.