Wednesday, January 22, 2025
ಕ್ರೈಮ್ರಾಷ್ಟ್ರೀಯಸುದ್ದಿ

ಪರಾರಿಯಾಗಲು ಯತ್ನಿಸಿದ ಆರೋಪಿಗೆ ಗುಂಡೇಟು : ಈ ರಾಜ್ಯದ ಇತಿಹಾಸದಲ್ಲೇ​​​​ ಓಪನ್ ಫೈರಿಂಗ್ ಮಾಡಿದ ಮೊದಲ ಮಹಿಳಾ ಪೊಲೀಸ್ ​ಅಧಿಕಾರಿ ಮೀನಾ..! – ಕಹಳೆ ನ್ಯೂಸ್

ಚೆನ್ನೈ: ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಗುಂಡೇಟು ನೀಡಿ ಬಂಧಿಸಿರುವ ಘಟನೆ ಚೆನ್ನೈನ ಅಯಾನವರಂನಲ್ಲಿ ನಡೆದಿದೆ. ಗಮನಿಸಬೇಕಾದ ಸಂಗತಿ ಏನೆಂದರೆ, ಆರೋಪಿಯೊಬ್ಬನ ಮೇಲೆ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ಓಪನ್​ ಆಗಿ ಫೈರಿಂಗ್​ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗುಂಡೇಟು ತಿಂದ ಆರೋಪಿಯನ್ನು 22 ವರ್ಷದ ಸೂರ್ಯ ಅಲಿಯಾಸ್​ ಬೆಂಡ್​ ಸೂರ್ಯ ಎಂದು ಗುರುತಿಸಲಾಗಿದೆ. ಇನ್​ಸ್ಪೆಕ್ಟರ್​ ಮೀನಾ ಅವರು ಆರೋಪಿಯ ಮೊಣಕಾಲಿನ ಕೆಳಗೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ. ಪೊಲೀಸ್​ ಕಸ್ಟಡಿಯಲ್ಲಿದ್ದ ಆರೋಪಿ ಸೂರ್ಯ ಪೊಲೀಸ್​ ಸಿಬ್ಬಂದಿ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ. ದಾಳಿಯ ವೇಳೆ ಇಬ್ಬರು ಪೊಲೀಸ್​ ಸಿಬ್ಬಂದಿಗೆ ಗಾಯಳಾಗಿವೆ.

ಆರೋಪಿ ಮೇಲೆ ಓಪನ್​ ಆಗಿ ಫೈರಿಂಗ್​ ಮಾಡಿದ ರಾಜ್ಯದ ಮೊದಲ ಮಹಿಳಾ ಪೊಲೀಸ್​ ಎಂಬ ಹೆಗ್ಗಳಿಕೆಗೆ ಮೀನಾ ಅವರು ಪಾತ್ರರಾಗಿದ್ದಾರೆ.

ಭಾನುವಾರ ಬೆಳಗ್ಗೆ 4 ಗಂಟೆಗೆ ಕೊನ್ನೂರು ಹೆದ್ದಾರಿಯಲ್ಲಿ ವಾಹನ ತಪಾಸಣೆ ವೇಳೆ ಸೂರ್ಯ, ಗೌತಮ್​ ಮತ್ತು ಅಜಿತ್​ನನ್ನು ಪೊಲೀಸರು ತಡೆದರು. ಮೂವರು ಕೂಡ ಸ್ಥಳದಲ್ಲಿದ್ದ ಇನ್​ಸ್ಪೆಕ್ಟರ್​ ಶಂಕರ್​ ಅವರ ಮೇಲೆ ಕಬ್ಬಿಣ ಸಲಾಕೆಯಿಂದ ದಾಳಿ ಮಾಡಿ , ದ್ವಿಚಕ್ರ ವಾಹನದ ಮೂಲಕ ಪರಾರಿಯಾಗಿದ್ದರು. ಇದಾದ ಬಳಿಕ ಗೌತಮ್​ ಮತ್ತು ಅಜಿತ್​ನನ್ನು ಪೊಲೀಸರು ಬಂಧಿಸಿದ್ದರು.

ತಿರುವಳ್ಳೂರಿನ ಸಂಬಂಧಿಕರ ಮನೆಯಲ್ಲಿ ಆರೋಪಿ ಸೂರ್ಯ ಇರುವ ಬಗ್ಗೆ ಸುಳಿವು ಪಡೆದ ಪೊಲೀಸರು ಅಲ್ಲಿಗೆ ಒಂದು ತಂಡವಾಗಿ ನಿನ್ನೆ (ಫೆ.22) ಬೆಳಗ್ಗೆ ತೆರಳಿದ್ದರು. ಬಳಿಕ ಸೂರ್ಯನನ್ನು ಬಂಧಿಸಿ, ಪೊಲೀಸ್​ ಠಾಣೆಗೆ ಕರೆತರುವಾಗ, ಪ್ರಕೃತಿಗೆ ಕರೆಗಾಗಿ ವಾಹನವನ್ನು ನಿಲ್ಲಿಸಿದ. ರಸ್ತೆ ಪಕ್ಕದಲ್ಲಿ ಗಾಡಿ ನಿಲ್ಲಿಸಲಾಯಿತು. ಮೂತ್ರ ವಿಸರ್ಜನೆಗೆ ಹೋಗಿದ್ದ ಆರೋಪಿ ತಪ್ಪಿಸಿಕೊಂಡು, ಕಬ್ಬಿನ ಜ್ಯೂಸ್​ ಅಂಗಡಿಯತ್ತ ಓಡಿ ಹೋಗಿ, ಅಲ್ಲಿದ್ದ ಚಾಕು ತೆಗೆದುಕೊಂಡನು. ಈ ವೇಳೆ ಆತನನ್ನು ಹಿಡಿಯಲು ಹೋದ ಸರವಣ ಕುಮಾರ್​ ಮತ್ತು ಅಮಾನುದ್ಧೀನ್​ ಹೆಸರಿನ ಪೊಲೀಸ್​ ಸಿಬ್ಬಂದಿ ಮೇಲೆ ದಾಳಿ ಮಾಡಿದ.

ದಾಳಿ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದಾಗ ಮೀನಾ ಅವರು ಶರಣಾಗುವಂತೆ ಹೇಳಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ಆರೋಪಿ ಮೀನಾ ಅವರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನ ಮೊಣಕಾಲಿನ ಕೆಳಗೆ ಮೀನಾ ಅವರ ಶೂಟ್​ ಮಾಡಿದ್ದಾರೆ. ಈ ವೇಳೆ ಗಾಯಗೊಂಡು ಕುಸಿದು ಬಿದ್ದ ಆರೋಪಿ ಸೂರ್ಯನನ್ನು ಕಿಲ್​ಪೌಕ್​ ಸರ್ಕಾರಿ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಸೂರ್ಯ, ಕೊಲೆ ಯತ್ನ, ಮೊಬೈಲ್​ ಹಾಗೂ ಸರಗಳ್ಳತನ ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. (ಏಜೆನ್ಸೀಸ್​)