Thursday, January 23, 2025
ಬಂಟ್ವಾಳಸುದ್ದಿ

“ತುಳುನಾಡಿನ ಪರಂಪರಾಗತ ವಸ್ತುಗಳು ತನ್ಮಯತೆ, ಕಲಾತ್ಮಕತೆಯಿಂದ ರೂಪುಗೊಂಡಿದೆ” ; ಡಾ| ಹೇಮಾವತಿ ವಿ.ಹೆಗ್ಗಡೆ –ಕಹಳೆ ನ್ಯೂಸ್

ತುಳುನಾಡಿನ ಪರಂಪರಾಗತ ವಸ್ತುಗಳು ತನ್ಮಯತೆ, ಕಲಾತ್ಮಕತೆಯಿಂದ ರೂಪುಗೊಂಡಿದ್ದು, ಶತ ಶತಮಾನಗಳ ಬಾಳ್ವಿಕೆಯನ್ನೂ ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮೂಲಕ ತುಳು ಸಂಸ್ಕøತಿಗೆ ಮರುಜೀವ ನೀಡುವ ಜತೆಗೆ ರಾಣಿ ಅಬ್ಬಕ್ಕನ ಜೀವನ ವಿವರಿಸುವ ಕಾರ್ಯ ನಡೆಯುತ್ತಿದೆ ಎಂದು ಧರ್ಮಸ್ಥಳ ಕ್ಷೇತ್ರದ ಡಾ| ಹೇಮಾವತಿ ವಿ.ಹೆಗ್ಗಡೆ ಹೇಳಿದರು.

ಅವರು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಲಿಕೆಯಲ್ಲಿ ಆಳುಪರು-ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ ಹಾಗೂ ಐಗಳ್ ಎಂಬ ದ.ಕ.ಇತಿಹಾಸದ ದಂತಕಥೆ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದರು.
ತುಳುನಾಡಿನ ಕೃಷಿ ಪರಂಪರೆ ವಿಶಿಷ್ಟವಾಗಿದ್ದು, ವಿದ್ಯಾವಂತರು ಕೃಷಿಗೆ ಬಂದಾಗ ಅದರ ಆಳ, ಅರಿವು ಅರಿತು ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಪೆÇ್ರ| ತುಕರಾಮ್ ಪೂಜಾರಿ ದಂಪತಿ ತಮ್ಮ ಸಂಪತ್ತನೇ ಸುರಿದು ಈ ಕೇಂದ್ರ ನಿರ್ಮಿಸಿದ್ದಾರೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಭಾರತೀಯ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಶುಭಹಾರೈಸಿದರು. ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ| ಪಿ.ಎನ್.ನರಸಿಂಹಮೂರ್ತಿ ಹಾಗೂ ಬಂಟ್ವಾಳ ಎಸ್‍ವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೆÇ್ರ| ಕೆ.ಶಂಕರ ಭಟ್ ಅವರನ್ನು sಸನ್ಮಾನಿಸಲಾಯಿತು.

ಸುರೇಶ್ ಕಿಣಿ ಉಪ್ಪಿನಂಗಡಿ, ಮಾಧವ ರೈ ಪೆರ್ನೆ ಅವರನ್ನು ಗೌರವಿಸಲಾಯಿತು. ಡಾ| ಸಾಯಿಗೀತಾ, ಗಾಯತ್ರಿ ಲೋಕೇಶ್ ಅವರು ಸಮ್ಮಾನ ಪತ್ರ ವಾಚಿಸಿದರು. ಕೇಂದ್ರದ ಅಧ್ಯಕ್ಷ ಪೆÇ್ರ| ತುಕರಾಮ್ ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ವಂದಿಸಿದರು. ನವೀತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.