ಹೀರೋ ಮಾಡುವುದಾಗಿ ನಂಬಿಸಿ ಯುವಕನನ್ನು ಅಶ್ಲೀಲ ವೆಬ್ ಸರಣಿಗೆ ಬಳಸಿಕೊಂಡ ನಿರ್ದೇಶಕಿ..! – ಕಹಳೆ ನ್ಯೂಸ್
ತಿರುವನಂತಪುರಂ: ಹೀರೋ ಮಾಡುವುದಾಗಿ ನಂಬಿಸಿ ಅಶ್ಲೀಲ ವೆಬ್ ಸರಣಿಗೆ ಬಳಸಿಕೊಂಡರು ಎಂದು ಆರೋಪಿಸಿ ಯುವಕನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂ ನಿರ್ದೇಶಕಿ ಲಕ್ಷ್ಮೀ ದೀಪ್ತಾರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರಂ ಮೂಲದ ಯುವಕ ನೀಡಿದ ದೂರಿನ ಆಧಾರದ ಮೇಲೆ ಅರುವಿಕ್ಕರ ಪೊಲೀಸರು ಲಕ್ಷ್ಮೀ ದೀಪ್ತಾರನ್ನು ಬಂಧಿಸಿದ್ದಾರೆ.
ಬಳಿಕ ನೆಡುಮಂಗಡ್ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಸದ್ಯ ಆಕೆ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ವೆಂಗನೂರ್ ಮೂಲದ ಯುವಕನಿಂದ ದೂರು ದಾಖಲಾಗಿದೆ. ವೆಬ್ ಸರಣಿಯಲ್ಲಿ ನಾಯಕನ ಪಾತ್ರ ನೀಡುವುದಾಗಿ ಭರವಸೆ ನೀಡಿದರು. ನಂಬಿಕೆ ಬರುವಂತೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದರು. ಬಳಿಕ ನನ್ನನ್ನು ಒಪ್ಪಂದದಲ್ಲಿ ಸಿಲುಕಿಸಿ, ಬಲವಂತವಾಗಿ ಅಶ್ಲೀಲ ವೆಬ್ ಸರಣಿಯಲ್ಲಿ ನಟಿಸುವಂತೆ ಮಾಡಿದರು. ಕಳೆದ ವರ್ಷ ಜೂನ್ 5 ಮತ್ತು 7ರಂದು ಅರುವಿಕ್ಕರದ ಖಾಲಿ ಫ್ಲ್ಯಾಟ್ನಲ್ಲಿ ಶೂಟಿಂಗ್ ನಡೆಯಿತು. ವೆಬ್ ಸರಣಿಯಿಂದ ಹೊರ ಬರುವ ಪ್ರಯತ್ನ ಮಾಡಿದರೆ ಒಪ್ಪಂದದ ಪತ್ರ ತೋರಿಸಿ ಬೆದರಿಸುತ್ತಿದ್ದರು ಎಂದು ಯುವಕ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ವೆಬ್ ಸರಣಿಯ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ಬಳಿಕ ತಿರುವನಂತಪುರಂನ ವಿಝಿಂಜಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದಾಗ ಯುವಕ ಹೈಕೋರ್ಟ್ ಮೆಟ್ಟಿಲೇರಿದನು. ಆದರೆ, ಲಕ್ಷ್ಮೀ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಆರೋಪಿಯನ್ನು ಪೊಲೀಸರ ಮುಂದೆ ಹಾಜರುಪಡಿಸಿದರೆ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಲಕ್ಷ್ಮಿಗೆ ಜಾಮೀನು ಮಂಜೂರಾಗಿದೆ. (ಏಜೆನ್ಸೀಸ್)