Recent Posts

Monday, January 20, 2025
ಸಿನಿಮಾಸುದ್ದಿ

ಸಲಿಂಗ ಕಾಮದ ಅನುಭವವಿದೆಯೇ..? ನೆಟ್ಟಿಗನ ಅಶ್ಲೀಲ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್ – ಕಹಳೆ ನ್ಯೂಸ್

ಹೈದರಾಬಾದ್​: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ಯಾವುದೇ ಕಾಮೆಂಟ್​ ಅಥವಾ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ರೀತಿ ಇದೀಗ ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ ಅವರು ನೆಟ್ಟಿಗನೊಬ್ಬ ಕೇಳಿದ ಅಶ್ಲೀಲ ಪ್ರಶ್ನೆಗೆ ಬೋಲ್ಡ್​ ಉತ್ತರವನ್ನೇ ನೀಡಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಅನಸೂಯ ಅವರು ಲೈವ್​ ಚಾಟಿಂಗ್​ ನಡೆಸಿದ್ದು, ಈ ವೇಳೆ ನೆಟ್ಟಿಗನೊಬ್ಬ ವೈಯಕ್ತಿಕ ಹಾಗೂ ಅಶ್ಲೀಲ ಪ್ರಶ್ನೆಯನ್ನು ಕೇಳಿದ್ದಾನೆ. ಆದರೆ, ಅನಸೂಯ ಅವರು ಸ್ವಲ್ಪವೂ ಮುಜುಗರಪಟ್ಟುಕೊಳ್ಳದೇ ನೇರವಾಗಿ ಉತ್ತರ ನೀಡಿದ್ದಾರೆ.

ಏನದು ಪ್ರಶ್ನೆ?
ನೀವು ನಿಜವಾಗಿಯೂ ಪ್ರಬುದ್ಧ ಮತ್ತು ಉದಾರ ಮಹಿಳೆಯಾಗಿದ್ದರೆ ನನ್ನ ಪ್ರಶ್ನೆಗೆ ಉತ್ತರಿಸಿ, ನೀವು ಯಾವಾಗಲಾದರೂ ಸಲಿಂಗಕಾಮ ನಡೆಸಿರುವಿರಾ? ಎಂದು ನೆಟ್ಟಿಗ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರ ನೀಡಿರುವ ಅನಸೂಯ, ನಮ್ಮ ಕುಟುಂಬ ಮತ್ತು ಸ್ನೇಹಿತರಲ್ಲಿ ಅನೇಕರು ಸಲಿಂಗಕಾಮಿಗಳಿದ್ದಾರೆ. ಆದರೆ, ವೈಯಕ್ತಿಕವಾಗಿ ನಾನು ಯಾವುದೇ ಅಂತಹ ಅನುಭವ ಹೊಂದಿಲ್ಲ. ಆದರೆ, ಆನ್​ಲೈನ್​ನಲ್ಲಿ ಅಂತಹ ಅನುಭವವನ್ನು ಅನೇಕ ಬಾರಿ ಎದುರಿಸಿದ್ದೇನೆ ಎಂದು ಬೋಲ್ಡ್​ ಆಗಿ ಉತ್ತರಿಸಿದ್ದಾರೆ.

ವಾಸ್ತವವಾಗಿ ಅನಸೂಯಾ ಅವರು ಕೆಲವು ವಿಚಾರಗಳಲ್ಲಿ ನೆಟಿಗರ ವಿರುದ್ಧ ಕಿಡಿಕಾರಿದ ಅನೇಕ ಪ್ರಸಂಗಗಳಿವೆ. ತಮ್ಮ ಉಡುಪಿನ ಮೇಲೆ ಅಥವಾ ತನ್ನ ಕುಟುಂಬವನ್ನು ಗುರಿಯಾಗಿಸುವ ನೆಟ್ಟಿಗರಿಗೆ ಖಡಕ್​ ತಿರುಗೇಟು ನೀಡಿರುವ ಉದಾಹರಣೆಗಳು ಇವೆ.

ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಅವರು ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪುಷ್ಪ-2 ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅನಸೂಯ ಸದಾ ಸಕ್ರಿಯರಾಗಿದ್ದು, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿರುತ್ತಾರೆ. (ಏಜೆನ್ಸೀಸ್​)