Sunday, November 24, 2024
ಕ್ರೈಮ್ಬೆಂಗಳೂರುಸುದ್ದಿ

ಚಂದದ ಹುಡುಗಿ ಫೋಟೋ ತೋರಿಸಿ 50 ಸಾವಿರಕ್ಕೆ ಬೇಡಿಕೆ ; ಬೆಂಗ್ಳೂರಲ್ಲಿ ಹೈಫೈ ವೇಶ್ಯಾವಾಟಿಕೆ – ಕಹಳೆ ನ್ಯೂಸ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈಫೈ ವೇಶ್ಯಾವಾಟಿಕೆ (Prostitution) ದಂಧೆ ಶುರುವಾಗಿದೆ. ಗಂಡ -ಹೆಂಡತಿ ನೆಪದಲ್ಲಿ ಹೊಸದೊಂದು ರೀತಿಯ ಹೈ ಫೈ ವೇಶ್ಯಾವಾಟಿಕೆ ಶುರುಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Twitter

ಟ್ವಿಟರ್ (Twitter), ಟೆಲಿಗ್ರಾಂ (Telegram) ಮೂಲಕ ಕೋಟಿ ಕುಳಗಳಿಗೆ ಗಾಳ ಹಾಕಿ ಗಂಟೆಗಳ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಾರೆ. ಪ್ರತಿ ವೀಕ್ ಎಂಡ್‍ನಲ್ಲಿ ನಗರಕ್ಕೆ 50 ರಿಂದ 60 ಜೋಡಿ ಬರುತ್ತದೆ. ಬ್ಯುಸಿನೆಸ್‍ನಲ್ಲಿ ತುಂಬಾ ಲಾಸ್ ಆಗಿದೆ. ಕೆಲ ಅನಿವಾರ್ಯ ಕಾರಣಗಳನ್ನ ಹೇಳಿ ದುಡ್ಡು ಕೀಳುತ್ತಿದ್ದರು. ಇಂತಹದ್ದೇ 5 ಜೋಡಿಗಳನ್ನ ಬೆಂಗಳೂರು ಸಿಸಿಬಿ ಪೊಲೀಸರು ಖೆಡ್ಡಾಗೆ ಬೀಳಿಸಿದ್ದಾರೆ. 

Money

ಒಮ್ಮೆ ಮಾತ್ರ ಪತ್ನಿಯನ್ನು ಸೆಕ್ಸ್‍ಗೆ ಅವಕಾಶ ಕೊಡ್ತಿದ್ದೀನಿ ಅಂತಾ ಚಂದದ ಹುಡುಗಿಯ ಫೋಟೋ ಶೇರ್ ಮಾಡುತ್ತಿದ್ದರು. ಒಂದು ಗಂಟೆಗೆ 40 ರಿಂದ 50 ಸಾವಿರಕ್ಕೆ ಹಣಕ್ಕೆ ಡಿಮ್ಯಾಂಡ್ ಮಾಡಿ ಇದಕ್ಕೆ ಒಪ್ಪಿ ಐಷಾರಾಮಿ ಹೋಟೆಲ್‍ (Hotel) ಗಳಲ್ಲಿ ರೂಂ ಬುಕ್ ಮಾಡಿ ಅಡ್ವಾನ್ಸ್ ಹಣ ಹಾಕಿದ್ರೆ ನಗರಕ್ಕೆ ಎಂಟ್ರಿಯಾಗುತ್ತಿದ್ದರು. ಇನ್ನು ಈ ವೇಶ್ಯವಾಟಿಕೆಗೆ ಬರುವವರು ಬಹುತೇಕರು ಉತ್ತರ ಭಾರತಿಯರು ಎನ್ನಲಾಗಿದೆ.