ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನ ಚತುರ್ಥ ವರ್ಷದ ವಿದ್ಯಾ ಗಣಪತಿ ಉತ್ಸವ ಕಾರ್ಯ ಸಮಿತಿ ರಚನೆಗೊಂಡಿತು.
ಆಗಸ್ಟ್ 29 ಗುರುವಾರದಂದು ಸಂಸ್ಥೆಯ ಆಡಳಿತ ಮಂಡಳಿಯು ಪದಾಧಿಕಾರಿಗಳನ್ನು ನೇಮಿಸಿತು. ವಿದ್ಯಾ ಗಣಪತಿ ಉತ್ಸವ ಸಮಿತಿ ವಿದ್ಯಾರ್ಥಿ ಅಧ್ಯಕ್ಷನಾಗಿ ದ್ವಿತೀಯ ಪಿ.ಯು.ಸಿ ಕಲಾ ವಿಭಾಗದ ಪುನೀತ್ ಆಯ್ಕೆಯಾದÀರು. ಕಾರ್ಯಾದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಅನೂಪ್ ಮತ್ತು ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಅಜಿತ್ ಶಂಕರ್ ಆಯ್ಕೆಗೊಂಡರು.
ವಿದ್ಯಾರ್ಥಿ ಸದಸ್ಯರುಗಳಾಗಿ: ವಾಣಿಜ್ಯ ವಿಭಾಗದಿಂದ ಶೈಲೇಶ್ ಜಿ, ಯಕ್ಷಿತ್‍ಪೂರ್ಣ ಕೆ., ಪ್ರದೀಪ್ ವೈ, ನಿಶಾಂತ್., ಪುನೀತ್ ಆರ್ ಶೆಟ್ಟಿ., ಅಕ್ಷಯ್ ರೈ., ಚರಣ್, ಸಂದೀಪ್, ವರ್ಷಿತ್ ರೈ., ಸಾತ್ವಿಕ್ ಸನತ್., ಪ್ರದ್ವಿಕ್ ರೈ., ಹೃತಿಕ್ ಬಿ., ದೀಕ್ಷಿತ್ ಎಚ್. ಡಿ., ಚರಣ್ ಆರ್. ಎಸ್., ಹರ್ಷಾ ಶೆಟ್ಟಿ, ಚರಣ್ ಎಂ., ನಿತಿನ್, ಆಶೀಶ್., ಶ್ರವಣ್ ಕುಮಾರ್, ಕಲಾ ವಿಭಾಗದಿಂದ ಧನುಷ್ ಪುತ್ರನ್., ಸಂತೋಷ್ ಎಸ್., ಪ್ರತೀಕ್ ಕೆ. ಯು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರು ಹಾಗೂ ವಿದ್ಯಾ ಗಣಪತಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಪಿ. ವಿ. ಗೋಕುಲ್‍ನಾಥ್ ಆದೇಶದಂತೆ ಮುಖ್ಯ ಉಸ್ತುವಾರಿಗಳಾಗಿ ಅರ್ಥಶಾಸ್ತ್ರ ಉಪನ್ಯಾಸಕರುಗಳಾದ ಕಾರ್ಯಾಧ್ಯಕ್ಷರಾಗಿ ಧನಂಜಯ್ ಕುಮಾರ್ ಕೆ.ಬಿ ಹಾಗೂ ಕೋಶಾಧಿಕಾರಿಯಾಗಿ ಚಿದಾನಂದ್ ಆಯ್ಕೆಯಾದರು.