Recent Posts

Monday, January 20, 2025
ಕ್ರೈಮ್ಸಿನಿಮಾಸುದ್ದಿ

ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಪತ್ನಿ ಆಲಿಯಾ – ಕಹಳೆ ನ್ಯೂಸ್

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಪತ್ನಿ ಆಲಿಯಾ (Alia) ನಡುವಿನ ಗಲಾಟೆ ಹೊಸದೇನೂ ಅಲ್ಲ. ಆ ಜಗಳಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸ್ವತಃ ಗಂಡನ ವಿರುದ್ಧವೇ ನಟನ ಪತ್ನಿ ಆಲಿಯಾ ರೇಪ್ (Rape) ಕೇಸ್ ದಾಖಲಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಹಲವು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

nawazuddin siddiqui 3

ನವಾಜುದ್ದೀನ್ ಸಿದ್ದಿಕಿ ಕುಟುಂಬ ತಮ್ಮ ಮೇಲೆ ಸತತವಾಗಿ ಹಲ್ಲೆ ಮಾಡಿದೆ. ಊಟ, ನೀರು ಕೊಡದೇ ಹಿಂಸಿಸಿದೆ ಎಂದು ಈ ಹಿಂದೆ ಮಾಧ್ಯಮಗಳ ಜೊತೆ ತಮ್ಮ ನೋವುಗಳನ್ನು ಹೇಳಿಕೊಂಡಿದ್ದರು ಆಲಿಯಾ. ಇದೀಗ ತಮ್ಮ ಮೇಲೆ ನವಾಜ್ ಅತ್ಯಾಚಾರ ಮಾಡಿದ್ದಾರೆ ಎಂದು ಅವರು ಪೊಲೀಸ್ ದೂರು ದಾಖಲಿಸಿದ್ದಾರೆ. ತಮ್ಮನ್ನು ಮನೆಯಿಂದ ಆಚೆ ಹಾಕಲು ಏನೆಲ್ಲ ತಂತ್ರಗಳನ್ನು ಅವರು ಹೂಡಿದ್ದರು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. 

ತಮ್ಮ ಮಕ್ಕಳನ್ನು ನವಾಜುದ್ದೀನ್ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಸಮಾಜದ ಮುಂದೆ ತಾವು ಮಹಾನ್ ವ್ಯಕ್ತಿ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅತಿ ಹಿಂಸೆಯನ್ನೂ ನನಗೆ ನೀಡಿದ್ದಾರೆ. ಹಾಗಾಗಿ ನಾನು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಮಕ್ಕಳನ್ನು ಅವನಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

FotoJet 70

ಈಗಾಗಲೇ ತಮ್ಮ ಮಕ್ಕಳನ್ನು ತಮಗೆ ಕೊಡಬೇಕು ಎಂದು ನವಾಜುದ್ದೀನ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಆಲಿಯಾ ಮಾತನಾಡಿದ್ದು, ಹುಟ್ಟಿದಾಗಿಂದ ಈವರೆಗೂ ಮಕ್ಕಳ ಬಗ್ಗೆ ಕಾಳಜಿ ತೋರಿಸದೇ ಇರುವವನು, ಈಗೇಕೆ ಇಷ್ಟೊಂದು ಪ್ರೀತಿ ಬಂದಿದೆ ಎಂದು ಅರ್ಥವಾಗುತ್ತಿಲ್ಲ. ನನ್ನಿಂದ ಯಾವುದೇ ಕಾರಣಕ್ಕೂ ಮಕ್ಕಳನ್ನು ದೂರ ಮಾಡುವುದಕ್ಕೆ ಆಗುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.