Monday, January 20, 2025
ಸುದ್ದಿ

ಇದೆಂಥಾ ಮತ್ಸ್ಯ ಪ್ರೀತಿ..! ಮೀನು ಸಾವನ್ನಪ್ಪಿದ್ದಕ್ಕೆ ನೊಂದು ಬಾಲಕನೊಬ್ಬ ಆತ್ಮಹತ್ಯೆಗೆ ಶರಣು –ಕಹಳೆ ನ್ಯೂಸ್

ತಾನು ಮನೆಯಲ್ಲಿ ಇಷ್ಟಪಟ್ಟು ಅಕ್ವೇರಿಯಂನಲ್ಲಿ ಸಾಕಿದ ಮೀನು ಸಾವನ್ನಪ್ಪಿದ್ದಕ್ಕೆ ನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಚಂಗರಂಕುಲಂ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆತ್ಮಹತ್ಯೆಗೆ ಶರಣಾದ ಬಾಲಕ ಮೂಕುತಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ರೋಶನ್ ಮೆನನ್ (13 ) ಎಂದು ಗುರುತಿಸಲಾಗಿದೆ.

ಈತ ಮನೆಯ ಅಕ್ವೇರಿಯಂನಲ್ಲಿ ಮೀನು ಸಾಕಾಣೆ ಮಾಡಿದ್ದು, ಆ ಮೀನುಗಳನ್ನು ಬಹಳವಾಗಿ ಹಚ್ಚಿಕೊಂಡಿದ್ದ. ಅಕ್ವೇರಿಯಂನಎಲ್ಲಾ ನಿರ್ವಹಣಾ ಕೆಲಸವನ್ನು ಆತನೇ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಅಕ್ವೇರಿಯಂನಲ್ಲಿದ್ದ ಮೀನುಗಳು ಸಾವನ್ನಪ್ಪಿದ್ದು, ಇದರಿಂದ ಬಾಲಕ ಖಿನ್ನತೆಗೆ ಒಳಗಾಗಿದ್ದ.

ಇನ್ನೂ ಈತ ಪ್ರಾಣಿ ಪಕ್ಷಿಗಳನ್ನೂ ಹಚ್ಚಿಕೊಂಡಿದ್ದು, ಪಾರಿವಾಳಗಳಿಗೆ ಆಹಾರ ನೀಡಲೆಂದು ಹೊರ ಹೋದವನು ತುಂಬಾ ಹೊತ್ತಾದರೂ ಮನೆಗೆ ಬಾರದಿದ್ದುದನ್ನು ಗಮನಿಸಿದ ಪೋಷಕರು ಆತನಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆಯ ಟೆರೇಸ್‍ನಲ್ಲಿರುವ ಪ್ಲಾಸ್ಟಿಕ್ ಶೆಡ್‍ನೊಳಗೆ ಬಾಲಕ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು ಯಾವುದೇ ಪ್ರಯೋಜನವಾಗಿಲ್ಲ ಆ ವೇಳೆಗಾಗಲೇ ಬಾಲಕ ಸಾವನ್ನಪ್ಪಿದ್ದನು.