Wednesday, January 22, 2025
ಕಾಸರಗೋಡುಕ್ರೈಮ್ಸುದ್ದಿ

ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಅಕ್ರಮ ವ್ಯವಹಾರ ; ಖತರ್ನಾಕ್ ಲೇಡಿ ಶೀಲಾ ಸನ್ನಿ ಅರೆಸ್ಟ್ – ಕಹಳೆ ನ್ಯೂಸ್

ಕೇರಳ: ತ್ರಿಸ್ಸೂರ್​ ಜಿಲ್ಲೆಯ ಚಲಕುಡಿಯಲ್ಲಿ ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸಿಂಥೆಟಿಕ್​ ಡ್ರಗ್​ ಮತ್ತು ಸ್ಟ್ಯಾಂಪ್​ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಕೇರಳದ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಶೀಲಾ ಸನ್ನಿ (51) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಕೆ ಕೇರಳದ ತ್ರಿಸ್ಸೂರ್​ ಜಿಲ್ಲೆಯ ನಾಯರಂಗಡಿ ನಿವಾಸಿ. ಚಲಕುಡಿಯಲ್ಲಿ ಬ್ಯೂಟಿ ಪಾರ್ಲರ್​ ಇಟ್ಟುಕೊಂಡಿದ್ದಳು. ಆದರೆ, ಪಾರ್ಲರ್​ ಒಳಗೆ ಡ್ರಗ್ಸ್​ ಮತ್ತು ಸ್ಟ್ಯಾಂಪ್​ ಮಾರಾಟದಂತಹ ಅಕ್ರಮ ವ್ಯವಹಾರ ನಡೆಸುತ್ತಿದ್ದಳು. ಇರಿಂಜಲಕುಡ ವೃತ್ತದ ಕಚೇರಿಯಲ್ಲಿ ದೊರೆತ ರಹಸ್ಯ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಕೆ.ಸತೀಶನ್ ನೇತೃತ್ವದ ತಂಡ ಆಕೆಯನ್ನು ಬಂಧಿಸಿದೆ.

ಆಕೆಯ ಸ್ಕೂಟರ್‌ನ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಮಾರಣಾಂತಿಕ ಔಷಧಗಳ ಸುಮಾರು 12 ಸ್ಟ್ಯಾಂಪ್‌ಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಸ್ಟಾಂಪ್ ಮೌಲ್ಯ 60,000 ರೂಪಾಯಿ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಜಯದೇವನ್, ಶಿಜು ವರ್ಗೀಸ್, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿಗಳಾದ ಪಿ ಎಸ್ ರಜಿತಾ, ಸಿ ಎನ್ ಸಿಜಿ ಮತ್ತು ಡ್ರೈವರ್ ಶಾನ್ ಇದ್ದರು