Tuesday, January 21, 2025
ಸುದ್ದಿ

ಗಾಂಜ ಮತ್ತಿನಲ್ಲಿ ಸ್ಥಳೀಯರ ಮೇಲೆ ಹಲ್ಲೆ ; ರಿಕ್ಷಾ ಚಾಲಕನಿಗೆ ಗಾಯ –ಕಹಳೆ ನ್ಯೂಸ್

ಸುರತ್ಕಲ್‍ನ ಚಿತ್ರಾಪುರ ಸಮೀಪದ ಪಣಂಬೂರು ಮೋಗವೀರ ಮಹಾಸಭಾ ವ್ಯಾಪ್ತಿಯ ಸಮುದ್ರ ತೀರದಲ್ಲಿ ಇಬ್ಬರ ತಂಡವೊಂದು ರಿಕ್ಷಾ ಚಾಲಕ ಸೇರಿ ಗ್ರಾಮಸ್ಥರಿಗೆ ತಲವಾರು ಝಳಪಿಸಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಂಜಾ ಸೇವಿಸಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದು, ಸುನಿಲ್ ಎಂಬ ರಿಕ್ಷಾ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಪೆÇಲೀಸರು ಸ್ಥಳೀಯರ ಸಹಕಾರದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೋರ್ವ ಸ್ಥಳದಿಂದ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

ಕಡಲು ಕೊರೆತ ತಡೆಗೆ ಹಾಕಲಾಗಿದ್ದ ಕಲ್ಲುಗಳಲ್ಲಿ ಕಳೆದ ಹಲವು ತಿಂಗಳಿನಿಂದ ಮಾದಕ ವ್ಯಸನಿಗಳು ಅನೈತಿಕ ಚಟುವಟಿಕೆ ನಡೆಸುತ್ತಿದ್ದು, ಈ ಕುರಿತು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರು ಎಂದು ತಿಳಿದು ಬಂದಿದೆ. ಇದೇ ದ್ವೇಷದಿಂದ ಈ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇನ್ನೂ ಪ್ರಕರಣವನ್ನು
ಸುರತ್ಕಲ್ ಠಾಣಾ ಪೆÇಲೀಸರು ದಾಖಲಿಸಿಕೊಂಡಿದ್ದಾರೆ.