Recent Posts

Tuesday, January 21, 2025
ಸುದ್ದಿ

ಪೆರಾರ ದೈವಸ್ಥಾನದಲ್ಲಿ ಮಾ.4 ರಿಂದ 10 ರವರೆಗೆ ನಡೆಯಲಿದೆ ಶ್ರೀ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ -ಕಹಳೆ ನ್ಯೂಸ್

ತುಳುನಾಡಿನ ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಒಂದಾಗಿರುವ ಪೆರಾರದ ಶ್ರೀಬ್ರಹ್ಮ ದೇವರು ಇಷ್ಟ ದೇವತಾ ಬಲವಾoಡಿ ಪಿಲಿಚಾoಡಿ ದೈವಸ್ಥಾನದ ಸಂಕೀರ್ಣದಲ್ಲಿ ನೂತನವಾಗಿ ಪುನರ್ ನಿರ್ಮಿಸಿರುವ ಛತ್ರದರಸು ಚಾವಡಿ, ಬಂಟಕಂಬ ರಾಜಾoಗಣ ಹಾಗೂ ಪಿಲಿಚಾoಡಿ ದೈವಸ್ಥಾನದಲ್ಲಿ ಶ್ರೀ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮಾರ್ಚ್ 4 ರಿಂದ 10 ರವರೆಗೆ ನಡೆಯಲಿದ್ದು, ಈ ಸಂದರ್ಭ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ ಎಂದು ಮಂಗಳೂರು ಉತ್ತರ ಶಾಸಕರೂ, ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಡಾ. ಭರತ್ ಶೆಟ್ಟಿ ವೈ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರದ ಪೆರ್ಗಡೆಯವರಾದ ಗಂಗಾಧರ ರೈ ಮುಂಡಬೆಟ್ಟುಗುತ್ತು, ಮಧ್ಯಸ್ಥ ಪ್ರತಾಪ್ ಚಂದ್ರ ಶೆಟ್ಟಿ ಬ್ರಾಣಬಿಟ್ಟುಗುತ್ತು, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಕೊಳಕೆಬೈಲು ಶಿವಾಜಿ ಶೆಟ್ಟಿ, ಆಡಳಿತಾಧಿಕಾರಿ ಸಾಯಿಶ ಚೌಟ, ಪಡು ಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ, ಜಿಲ್ಹಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಅಮೀನ್, ಪ್ರಚಾರ ಸಮಿತಿಯ ಅಧ್ಯಕ್ಷ ಶೇಖರ್ ಸಫಲಿಗ ಶೆಟ್ಟಿಬಿಟ್ಟು, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಸುರೇಶ್ ಅಂಚನ್ ಉಪಸ್ಥಿತರಿದ್ದರು.